ETV Bharat / state

ಡ್ರಗ್ಸ್​ ಪ್ರಕರಣ.. ಬೆಂಗಳೂರಲ್ಲಿ ಮಾಡೆಲ್​, ಡಿಜೆ ಮನೆ ಮೇಲೆ ಪೊಲೀಸ್​ ದಾಳಿ.. ಮೂವರು ವಶಕ್ಕೆ.. - police raid on dj house in bengaluru

ಎಲ್ಲ ದಾಳಿಗೆ ಸಂಬಂಧಿಸಿದಂತೆ‌ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಗೋವಿಂದಪುರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಒಂದು ವಾರದ ಹಿಂದೆ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿದ್ದರು. ಆತನನ್ನ ವಿಚಾರಿಸಿದಾಗ ಕೆಲವರ ಹೆಸರು ಹೇಳಿದ್ದಾನೆ.‌ ಪರಿಶೀಲನೆ ಬಳಿಕ ಇಂದು ಮೂವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಶಂಕಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ‌..

Bengalur drag case
ಸಾಂದರ್ಭಿಕ ಚಿತ್ರ
author img

By

Published : Aug 30, 2021, 8:56 PM IST

Updated : Aug 30, 2021, 9:40 PM IST

ಬೆಂಗಳೂರು : ಮಾದಕ ವಸ್ತು ಜಾಲ ಪ್ರಕರಣದಲ್ಲಿ ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಜೊತೆಗೆ ನಿರಂತರ ಸಂಪರ್ಕದ ಮಾಹಿತಿ ಮೇರೆಗೆ ನಗರ ಪೂರ್ವ ವಿಭಾಗದ ಪೊಲೀಸರು ಮೂವರ ಮನೆಗಳ ಮೇಲೆ ದಾಳಿ ಮಾಡಿ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಚುರುಕುಗೊಳಿಸಿದ್ದಾರೆ‌.

ಕಾಸ್ಮೆಟಿಕ್ ವ್ಯವಹಾರ ನಡೆಸುತ್ತಿದ್ದ ಮಾಡೆಲ್, ನಟಿ ಸೋನಿಯಾ ಅಗರವಾಲ್, ಡಿಜೆ ವಚನ್ ಸಿದ್ದಪ್ಪ, ಉದ್ಯಮಿ ಭರತ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಮತ್ತೋರ್ವನನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಿಯಾ ಅಗರ್ವಾಲ್ ರಾಜಾಜಿನಗರದ ನಿವಾಸದ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ. ದಾಳಿ ವೇಳೆ 40 ಗ್ರಾಂ ಗಾಂಜಾ ಪತ್ತೆಯಾಗಿದೆ. ದಾಳಿ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಸೋನಿಯಾ ಶೋಧಕ್ಕಾಗಿ ಆಕೆ ಉಳಿದುಕೊಂಡಿದ್ದ ಖಾಸಗಿ ಹೋಟೆಲ್​ನಲ್ಲಿರುವುದನ್ನು ಮಾಹಿತಿ ಕಲೆ ಹಾಕಿದ್ದಾರೆ.

ಅಲ್ಲಿ ಬಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಇಡೀ ಹೋಟೆಲ್ ಪೂರ್ತಿ ಓಡಾಡಿದ್ದಾಳೆ. ಹೋಟೆಲ್ ಮೇಲಿಂದ ಕೆಳಗೆ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದಾರೆ‌. ಕೊನೆಗೆ ಪುರುಷರ ವಾಶ್ ರೂಂನಲ್ಲಿ ಅವಿತು ಕುಳಿತಿದ್ದ ಸೋನಿಯಾಳನ್ನು ಪೊಲೀಸರು ಹುಡುಕಿ ಕರೆತಂದಿದ್ದಾರೆ‌ ಎನ್ನಲಾಗಿದೆ.

ಮಾಡೆಲ್​ ಮನೆ ಮೇಲೆ ದಾಳಿ : ಬಳಿಕ ಡಿಜೆಹಳ್ಳಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಡ್ರಗ್ಸ್ ನಂಟಿನ ಕುರಿತ ಪ್ರಶ್ನೆಗೆ ಮಾಡೆಲ್ ತಬ್ಬಿಬ್ಬಾಗಿದ್ದಾರೆ. ಥಾಮಸ್ ಜೊತೆಗೆ ನಂಟು ಹೊಂದಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಆನ್​ಲೈನ್ ಪ್ಲಾಟ್ ಫಾರಂನಲ್ಲಿ ಬಂಬಲ್ ಬೆರಿ ಅನ್ನೋ ಕಾಸ್ಮೆಟಿಕ್ ಸೇಲ್ ಕೂಡ ಈಕೆ ಮಾಡುತ್ತಿದ್ದಳು. ಹೈಫೈ ಪಾರ್ಟಿಗಳಲ್ಲಿ ಅದೇ ನೆಪದಲ್ಲಿ ಡ್ರಗ್ಸ್ ಕೂಡ ನೀಡುತ್ತಿದ್ದಳು ಎಂಬುದು ಕೂಡ ಗೊತ್ತಾಗಿದೆ. ಜೊತೆಗೆ ಈಕೆಯ ಸಂಪರ್ಕದಲ್ಲಿ ರಾಜಕಾರಣಿ ಮಕ್ಕಳು, ಸ್ಟಾರ್ ನಟ-ನಟಿಯರ ಮಕ್ಕಳು ಇದ್ದಾರೆ ಎನ್ನಲಾಗುತ್ತಿದೆ. ಮಾಡೆಲ್ ಸೋನಿಯಾಳನ್ನು ಬಂಧಿಸುವ ಸಾಧ್ಯತೆಯಿದೆ.

ಡಿಜೆ ವಚನ್​ ವಶಕ್ಕೆ : ಬೆನ್ಸನ್ ಟೌನ್​ನಲ್ಲಿರುವ ಡಿಜೆ ವಚನ್ ಚಿನ್ನಪ್ಪ ಮನೆ ಜಾಲಾಡಿದ ಪೂರ್ವ ವಿಭಾಗ ಪೊಲೀಸರಿಗೆ ಗಾಂಜಾ ಕೂಡ ಸಿಕ್ಕಿದೆ. ಅಲ್ಲದೇ ಹಲವು ಸ್ಟಾರ್ ನಟರು ಭಾಗಿಯಾಗುತ್ತಿದ್ದ ಪಾರ್ಟಿಗೆ ಈತ ಡಿಜೆಯಾಗಿರುತ್ತಿದ್ದ. ಅಲ್ಲಿ ಬರುವ ಹೈಫೈ ಮಂದಿಗೆ ಕೋಡ್ ವರ್ಡ್ ಮೂಲಕ ಡ್ರಗ್ಸ್ ನೀಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಈತನನ್ನ ಕೆಜಿಹಳ್ಳಿ ಠಾಣೆಯಲ್ಲಿಟ್ಟು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಈತನ ಕಾಂಟಾಕ್ಟ್ ಲಿಸ್ಟ್​ನಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ರೇಡ್ ನಂ. 3 : ಉದ್ಯಮಿ ಭರತ್ ಎಂಬಾತನನ್ನು ಕೂಡ ಗೋವಿಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ಹಿನ್ನೆಲೆ ತುಂಬಾ ಭಯಾನಕವಾಗಿದೆ. ಬನಶಂಕರಿ 3ನೇ ಹಂತದಲ್ಲಿರುವ ಪದ್ಮನಾಭನಗರ ದೋಲ್ತಾ ಲಕ್ಷುರಿ ಅಪಾರ್ಟ್​ಮೆಂಟ್​​ನ 4ನೇ ಮಹಡಿಯಲ್ಲಿ ಫ್ಲಾಟ್ ಹೊಂದಿರುವ ಭರತ್, ಅಪಾರ್ಟ್​​ಮೆಂಟ್​​​ನಲ್ಲಿ ಹಲವು ಬಾರಿ ಕಿರಿಕ್ ಕೂಡ ಮಾಡಿಕೊಂಡಿದ್ದಾನಂತೆ.

ಕಾರ್​​ನಲ್ಲಿ ಗುಂಪು ಗುಂಪಾಗಿ ಜನರನ್ನು ಕರೆತಂದು ಫ್ಲಾಟ್​ನಲ್ಲೇ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ವೇಳೆ ಕಿರುಚಾಡುತ್ತಿದ್ದಾಗ ಬೇರೆ ಫ್ಲಾಟ್​​ನವರು ಹೊಡೆಯಲು ಕೂಡ ಹೋಗಿದ್ದರಂತೆ. ಇದು ಅಪಾರ್ಟ್​​ಮೆಂಟ್​​ ಮ್ಯಾನೇಜ್​ಮೆಂಟ್​ ಗಮನಕ್ಕೂ ಹೋಗಿತ್ತು. ಹಾಗಾಗಿ, ಆತನ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಘಾಟು ಇರುತ್ತಿತ್ತು.

ಅಲ್ಲದೇ ಹಲವು ಪಾರ್ಟಿಗಳಲ್ಲೂ ಈತ ಭಾಗಿಯಾಗಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎನ್ನಲಾಗುತ್ತಿದೆ. ಹಾಗಾಗಿ, ಭರತ್​ ಮನೆ ಮೇಲೆ ದಾಳಿ ಮಾಡಿದ ಗೋವಿಂದಪುರ ಠಾಣೆ ಇನ್ಸ್​ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡವು, ಮನೆ ಜಾಲಾಡಿ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಎಲ್ಲ ದಾಳಿಗೆ ಸಂಬಂಧಿಸಿದಂತೆ‌ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಗೋವಿಂದಪುರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಒಂದು ವಾರದ ಹಿಂದೆ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿದ್ದರು. ಆತನನ್ನ ವಿಚಾರಿಸಿದಾಗ ಕೆಲವರ ಹೆಸರು ಹೇಳಿದ್ದಾನೆ.‌ ಪರಿಶೀಲನೆ ಬಳಿಕ ಇಂದು ಮೂವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಶಂಕಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ‌.

ಯಾರ ಯಾರ ಸಂಪರ್ಕ ಇತ್ತು, ಅವರ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲಾಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅಧರಿಸಿ ಮುಂದಿನ ತನಿಖೆ ನಡೆಯಲಿದೆ. ಪೊಲೀಸರು ಕೆಲವರನ್ನ ತನಿಖೆ ಮಾಡುತ್ತಿಲ್ಲ ಎಂಬ ವಿಚಾರ ಕಪೋಲಕಲ್ಪಿತ. ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸಲಾಗುತ್ತದೆ ಎಂದು ಆಯುಕ್ತರು ಸ್ಪಷ್ಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ 6,7,8ನೇ ತರಗತಿ ಪುನಾರಂಭಕ್ಕೆ ಸರ್ಕಾರದಿಂದ ಗ್ರೀನ್​ ಸಿಗ್ನಲ್​

Last Updated : Aug 30, 2021, 9:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.