ETV Bharat / state

Murder: ಬೆಂಗಳೂರಲ್ಲಿ ಕಿರುಕುಳ ತಾಳದೆ ಪತಿಯ ಹತ್ಯೆಗೆ ಪತ್ನಿಯೇ ಕೊಟ್ಟಳಾ ಸುಪಾರಿ? - ಕೃಷ್ಣಪ್ಪ ಹತ್ಯೆ

ಬೆಂಗಳೂರಿನಲ್ಲಿ ಮತ್ತೆ ಮಾರಕಾಸ್ತ್ರಗಳು ಝಳಪಳಿಸಿದ್ದು, ದುಷ್ಕರ್ಮಿಗಳು 30 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

Murder
Murder
author img

By

Published : Jul 3, 2021, 11:44 AM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಮಾರಕಾಸ್ತ್ರಗಳು ಝಳಪಳಿಸಿದ್ದು, ಕಿಡಿಗೇಡಿಗಳು ವ್ಯಕ್ತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ನಗರದ ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿ ಕೃಷ್ಣಪ್ಪ (30) ಎಂಬಾತನನ್ನು ದುಷ್ಕರ್ಮಿಗಳು ಕೊಂದಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಪ್ರತಿಕ್ರಿಯೆ

ಇಬ್ಬರು ಅಥವಾ ಮೂರು ಜನರ ತಂಡದಿಂದ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟೈಲ್ಸ್ ವರ್ಕ್ ಮಾಡುತ್ತಿದ್ದ ಕೃಷ್ಣಮೂರ್ತಿ ಹತ್ಯೆಯ ಹಿಂದೆ ಆತನ ಪತ್ನಿಯ ಕೈವಾಡ ಶಂಕೆಯೂ ಇದೆ ಎನ್ನಲಾಗುತ್ತಿದೆ.

ಕೃಷ್ಣಮೂರ್ತಿ ಇತ್ತೀಚೆಗೆ ತನ್ನ ಮೊದಲ ಪತ್ನಿಯನ್ನು ತೊರೆದು ಎರಡನೇ ಮದುವೆಯಾಗಿದ್ದ. ಎರಡು ತಿಂಗಳಿನಿಂದ ಎರಡನೇ ಪತ್ನಿ ಜೊತೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಈ ವಿವಾದ ಪೊಲೀಸ್​ ಠಾಣೆ ಮೆಟ್ಟಿಲೂ ಏರಿತ್ತು. ಈ ವೇಳೆ ಪೊಲೀಸರು ಎರಡು ಮೂರು ಬಾರಿ ಗಂಡ ಹೆಂಡತಿಗೆ ಎಚ್ಚರಿಕೆ ನೀಡಿ ಕಳಿಸಿದ್ದರು. ಹೀಗಾಗಿ ಗಂಡನ ಕಿರುಕುಳ ತಾಳದೆ ಹೆಂಡತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆಯೂ ಇದೆ.

ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ, ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ವರದಿಯಾಗಿದೆ. ಮೃತನ ಹೆಸರು ಕೃಷ್ಣಮೂರ್ತಿ. ನಿನ್ನೆ ರಾತ್ರಿಯೇ ಕೊಲೆ ನಡೆದಿರುವ ಶಂಕೆ ಇದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ. ಇಬ್ಬರು ಅಥವಾ ಮೂವರು ವ್ಯಕ್ತಿಗಳು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: You Must Love Me.. ಸಿನಿಮಾ ಸ್ಟೈಲಲ್ಲಿ ಪ್ರೀತಿಸೋಕೆ ಡೆಡ್​ಲೈನ್​ ಕೊಟ್ಟಿದ್ದ ಪಾಗಲ್​ ಪ್ರೇಮಿ ಅಂದರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.