ETV Bharat / state

ಸಿಎಂ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಸಭೆ; ಶೀಘ್ರ ಕಾಮಗಾರಿ ಬಿಲ್ ಬಿಡುಗಡೆಗೆ ಮನವಿ - CM Siddaramaiah

Bengaluru MLA's Meeting: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಗುತ್ತಿಗೆದಾರರ ಬಿಲ್​ ಪಾವತಿ ಸಂಬಂಧ ಬೇಗ ತನಿಖೆ ನಡೆಸಿ ಗುತ್ತಿಗೆದಾರರ ಬಿಲ್ ಪಾವತಿ ಮಾಡುವಂತೆ ಬೆಂಗಳೂರು ಶಾಸಕರು ಒತ್ತಾಯಿಸಿದ್ದಾರೆ.

bengaluru-mlas-meeting-held-today-by-cm-siddaramaiah
ಬೆಂಗಳೂರು ಶಾಸಕರ ಸಭೆ : ಆದಷ್ಟು ಬೇಗ ಕಾಮಗಾರಿ ಬಿಲ್ ಬಿಡುಗಡೆ ಮಾಡಲು ಬೆಂಗಳೂರು ಶಾಸಕರ ಮನವಿ
author img

By

Published : Aug 16, 2023, 5:35 PM IST

ಬೆಂಗಳೂರು : ಆದಷ್ಟು ಬೇಗ ಬಿಬಿಎಂಪಿ ಎಸ್ಐಟಿ ತನಿಖೆ ಪೂರ್ಣಗೊಳಿಸಿ, ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಶಾಸಕರು ಸಿಎಂ ನಡೆಸಿದ ಸಭೆಯಲ್ಲಿ ಒತ್ತಾಯಿಸಿದರು. ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ, ಪ್ರಮುಖವಾಗಿ ಬಾಕಿ ಬಿಲ್, ಅಭಿವೃದ್ಧಿ ಸಂಬಂಧ ಹೆಚ್ಚಿನ ಚರ್ಚೆ ನಡೆಸಲಾಯಿತು. ಉಳಿದಂತೆ ಕ್ಷೇತ್ರದ ಅಭಿವೃದ್ಧಿ, ಅನುದಾನ, ಸರ್ಕಾರ- ಪಕ್ಷದ ಜತೆಗಿನ ಸಮನ್ವಯ, ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ 10 ಬೆಂಗಳೂರು ಕೈ ಶಾಸಕರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಡಿ.ಕೆ.ಸುರೇಶ್ ಪಾಲ್ಗೊಂಡಿದ್ದರು. ಆದಷ್ಟು ಬೇಗ ಗುತ್ತಿಗೆದಾರ ಬಾಕಿ ಬಿಲ್ ಪಾವತಿಸಬೇಕು. ಇಲ್ಲವಾದರೆ ಕಾಮಗಾರಿಗಳು ಬಾಕಿ ಉಳಿಯುತ್ತವೆ. ಇಲ್ಲವೇ ಮುಂಬರುವ ಬಿಬಿಎಂಪಿ ಎಲೆಕ್ಷನ್‌ಗೆ ಡ್ಯಾಮೇಜ್ ಆಗಲಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ SIT ತನಿಖೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಅರ್ಧಕ್ಕೆ ನಾವು ಹಿಂಪಡೆಯಲು ಆಗೋದಿಲ್ಲ. ಈಗಾಗಲೇ 10 ದಿನದ ತನಿಖೆ ಆಗಿದೆ. ಇನ್ನು‌ 20 ದಿನದಲ್ಲಿ ತನಿಖೆ ಮುಗಿಯಲಿದೆ. ಹೀಗಾಗಿ ಅದಕ್ಕೂ ಮುಂಚಿತವಾಗಿ ಬಿಲ್ ಬಿಡುಗಡೆ ‌ಬೇಡ ಎಂದ ಸಿಎಂ ಹಾಗೂ ಡಿಸಿಎಂ ಮನವರಿಕೆ ಮಾಡಿದರು.

ಸಭೆಯ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, "ಬೆಂಗಳೂರು ಕೈ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಕ್ಷೇತ್ರಗಳ ಬಗ್ಗೆ, ಬೆಂಗಳೂರು ಅಭಿವೃದ್ಧಿ, ಟ್ರಾಫಿಕ್, ಒಂಟಿ ಮನೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಬೆಂಗಳೂರು ವಿಧಾನಸಭಾವಾರು ಮನೆ ಕಟ್ಟಿಸಿಕೊಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರು ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಸಿದ್ದೇವೆ. ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ" ಎಂದು ವಿವರ ನೀಡಿದರು.

ಕಾಮಗಾರಿಗಳ ಬಿಲ್ ಬಾಕಿ ವಿಚಾರವಾಗಿ ಮಾತನಾಡಿ, "ಈಗಾಗಲೇ SIT ತನಿಖೆ ಮಾಡುತ್ತಿದ್ದೇವೆ. ಒಂದು ತಿಂಗಳು ಸಮಯ ಕೊಟ್ಟಿದ್ದಾರೆ. 10 ದಿವಸ ಆಗಿದೆ. ಇನ್ನೂ 20 ದಿವಸ ಬಾಕಿ ಇದೆ. ಯಾರು ಕೆಲಸ ಚೆನ್ನಾಗಿ ಮಾಡಿದ್ದಾರೆ. ಅವರಿಗೆ ಹಣ ಬಿಡುಗಡೆಯಾಗಲಿದೆ" ಎಂದರು. "ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ಡಿಸೆಂಬರ್​ನಲ್ಲಿ ಪಾಲಿಕೆ ಚುನಾವಣೆ ಬರಬಹುದು. ಉದ್ಘಾಟನೆ ಕಾರ್ಯಕ್ರಮಗಳು ಬೇಗ ಬೇಗ ಮಾಡುವ ಬಗ್ಗೆ ಚರ್ಚೆಯಾಗಿದೆ" ಎಂದರು.

ತನಿಖೆಯ ಬಳಿಕ ಬಿಲ್ ಪಾವತಿಗೆ ಮಾಡಿಸೋಣ. ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೆ ಅವರಿಗೆ ಮೋಸವಾಗುವುದಿಲ್ಲ. ತನಿಖೆ ಬಳಿಕವೇ ಬಾಕಿ ಬಿಲ್ ಪಾವತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಬಿಬಿಎಂಪಿ ಚುನಾವಣೆಗೆ ಈಗಿನಿಂದಲ್ಲೇ ಸಜ್ಜಾಗಿ ಎಂದು ಸಿಎಂ, ಡಿಸಿಎಂ ಸೂಚಿಸಿದ್ದಾರೆ. ಡಿಸೆಂಬರ್ ನಲ್ಲಿ ಚುನಾವಣೆ ನಡೆಯಬಹುದು. ನಮ್ಮ ಗ್ಯಾರಂಟಿಗಳನ್ನು ವಾರ್ಡ್​ಗಳಲ್ಲಿ ಹೆಚ್ಚು ಪ್ರಚಾರ ಮಾಡಿ ಎಂದು ಸೂಚಿಸಿದ್ದಾರೆ.

ಶಕ್ತಿ ಯೋಜನೆ ಸ್ಥಗಿತವಾಗಲ್ಲ: ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ. ಇದನ್ನು ಒಂದು ಪಕ್ಷ ಮಾಡಿಸ್ತಿದ್ದಾರೆ. ಇನ್ನು 10 ವರ್ಷ ಶಕ್ತಿ ಯೋಜನೆ ಮುಂದುವರಿಯುತ್ತದೆ. ಯಾರೂ ಕೂಡ ಪಾಸ್ ಪಡೆಯುವ ಅಗತ್ಯ ಇಲ್ಲ ಎಂದು ತಿಳಿಸಿದರು. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. 10 ವರ್ಷವೂ ಈ ಯೋಜನೆ ಮುಂದುವರೆಯಲಿದೆ. ಹೆಣ್ಣು ಮಕ್ಕಳು ಬಸ್ ಪಾಸ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ಯಾರಿಗೂ ಭಯ ಬೇಡ, ಗಾಬರಿ ಬೇಡ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : K.H.Muniyappa: ಅಕ್ಕಿ ಬದಲು ಆಗಸ್ಟ್ ತಿಂಗಳ ಡಿಬಿಟಿ ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ- ಸಚಿವ ಕೆ.ಎಚ್.ಮುನಿಯಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.