ಬೆಂಗಳೂರು: ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ವಾಹನ ಓಡಿಸುವುದೇ ಒಂದು ದೊಡ್ಡ ಸವಾಲಿನ ಕೆಲಸ. ಟ್ರಾಪಿಕ್ ಜಾಮ್ಗೆ ವಾಹನ ಸವಾರರು ಪ್ರತಿದಿನ ಸುಸ್ತಾಗಿ ಹೋಗ್ತಾರೆ. ಆದರೆ, ಓರ್ವ ವ್ಯಕ್ತಿ ಮಾತ್ರ ಟ್ರಾಫಿಕ್ ಜಾಮ್ಗೆ ಧನ್ಯವಾದ ಹೇಳಿದ್ದಾನೆ. ಕಿಕ್ಕಿರಿದ ವಾಹನ ದಟ್ಟಣೆಯಲ್ಲಿ ತಮಗಾದ ಪ್ರೇಮಕಥೆಯ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅಂಡರ್ ಪಾಸ್ಗಳಲ್ಲಿ ವಾಹನ ನಿಲ್ಲಿಸಿದರೆ ದಂಡ: ಬೆಂಗಳೂರು ಪೊಲೀಸರಿಂದ ಹೊಸ ನಿಯಮ
-
Top drawer stuff on Reddit today 😂😂@peakbengaluru pic.twitter.com/25H0wr526h
— Aj (@babablahblah_) September 18, 2022 " class="align-text-top noRightClick twitterSection" data="
">Top drawer stuff on Reddit today 😂😂@peakbengaluru pic.twitter.com/25H0wr526h
— Aj (@babablahblah_) September 18, 2022Top drawer stuff on Reddit today 😂😂@peakbengaluru pic.twitter.com/25H0wr526h
— Aj (@babablahblah_) September 18, 2022
ಹೀಗಿದೆ ಟ್ರಾಫಿಕ್ ಪ್ರೇಮ್ ಕಹಾನಿ..: ನಗರದ ಸೋನಿ ವರ್ಲ್ಡ್ ಸಿಗ್ನಲ್ ಹತ್ತಿರ ನಾನು ಆ ಯುವತಿಯನ್ನು ಮೊದಲ ಬಾರಿ ನೋಡಿದ್ದೆ. ಟ್ರಾಫಿಕ್‌ನಲ್ಲಿ ಪದೇ ಪದೇ ಸಿಕ್ಕಿಹಾಕಿಕೊಳ್ಳುತ್ತಿದ್ದ ಕಾರಣಕ್ಕೆ ಪರಸ್ಪರ ಮುಗುಳುನಗೆಯೂ ವಿನಿಮಯವಾಗುತ್ತಿತ್ತು. ಕ್ರಮೇಣ ಈ ಮಗುಳುನಗೆ ಪರಿಚಯಕ್ಕೆ ತಿರುಗಿ ಸ್ನೇಹಿತರಾದೆವು. ಈಜಿಪುರದ ಮೇಲ್ಸೆತುವೆ ನಿರ್ಮಾಣದ ವೇಳೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿದ್ದಾಗ ಒಂದು ದಿನ ಆಕೆಯನ್ನು ನಾನು ಮನೆಗೆ ಡ್ರಾಪ್ ಮಾಡಿದ್ದೆ. ಟ್ರಾಫಿಕ್ ಕಿರಿಕಿರಿ ಹಾಗೂ ಹಸಿವಾಗಿದ್ದ ಕಾರಣಕ್ಕೆ ಬೇರೊಂದು ಪ್ರದೇಶ ಆಯ್ಕೆ ಮಾಡಿಕೊಂಡು ಒಟ್ಟಿಗೆ ಊಟಕ್ಕೆ ಹೋಟೆಲ್ಗೆ ಹೋಗಿದ್ದೆವು. ಅಲ್ಲಿಂದ ನಮ್ಮ ಪ್ರಣಯಕಾಲ ಆರಂಭವಾಯಿತು. ಸುಮಾರು ಮೂರು ವರ್ಷಗಳ ಕಾಲ ಪ್ರೀತಿಸಿದೆವು. ಕಳೆದ ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು ಎಂದು ತಮ್ಮ ಪ್ರೇಮ ಕಥೆಯನ್ನು ವಿವರಿಸಿದ್ದಾರೆ.
ಆದ್ರೆ ಕುತೂಹಲದ ವಿಚಾರ ಇನ್ನೂ ಇದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದ ವಿಭಿನ್ನವಾಗಿ ಟ್ವೀಟ್ ಮಾಡಿರುವ ಇವರು, 'ಇದೇ ಟ್ರಾಫಿಕ್‌ನಲ್ಲಿ ಸಿಕ್ಕ ನನ್ನ ಹುಡುಗಿಯೊಂದಿಗೆ ನಾನು ಮೂರು ವರ್ಷ ಡೇಟಿಂಗ್ ಮಾಡಿದೆ. ಎರಡು ವರ್ಷಗಳ ಹಿಂದೆ ಮದುವೆಯೂ ಆದೆ. ಆದರೆ ಈ ಫ್ಲೈ ಓವರ್ ಕೆಲಸ ಮಾತ್ರ ಅರ್ಧಕ್ಕೆ ನಿಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಇವರ ಟ್ವೀಟ್ಗೆ ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದಾರೆ.