ETV Bharat / state

ಜಾತಿ ನಿಂದನೆ ಪ್ರಕರಣ: ವಕೀಲ ಜಗದೀಶ್‌ಗೆ ಜಾಮೀನು ಮಂಜೂರು - ವಕೀಲ ಜಗದೀಶ್‌ ವಿರುದ್ಧ ಜಾತಿ ನಿಂದನೆ ಪ್ರಕರಣ

ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಕೇಸ್​ನಲ್ಲಿ ವಕೀಲ ಜಗದೀಶ್​ ಅವರಿಗೆ ಜಾಮೀನು ದೊರೆತಿದೆ.

Lawyer jagadish gets bail in two cases
Lawyer jagadish gets bail in two cases
author img

By

Published : Mar 7, 2022, 6:22 PM IST

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿರುವ ಜಾತಿ ನಿಂದನೆ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನಗರದ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್ ಇಂದು ವಕೀಲ ಜಗದೀಶ್ ಅವರಿಗೆ ಜಾಮೀನು ಮಂಜೂರು ಮಾಡಿತು.

ಜಗದೀಶ್ ವಿರುದ್ಧ ದಾಖಲಿಸಿದ್ದ ಎರಡೂ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವುದರಿಂದ ನಾಳೆ ಅಥವಾ ನಾಡಿದ್ದು ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜಗದೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆಂದು ಆರೋಪಿಸಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಪೊಲೀಸರ ಕ್ರಮ ಪ್ರಶ್ನಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್, ಪೊಲೀಸರು ದಾಖಲಿಸಿದ್ದ ಸುಳ್ಳು ಕೇಸ್​ನಲ್ಲಿ ಕೋರ್ಟ್ ಜಾಮೀನು ನೀಡಿದೆ ಎಂದಿದ್ದಾರೆ.

ಜಗದೀಶ್ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದರು. ಅವರ ಬಂಧನವನ್ನು ಖಂಡಿಸಿ ವಕೀಲರು ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಸೇರಿ 'ಭ್ರಷ್ಟಾಚಾರದ ವಿರುದ್ಧ ನಾವು' ವೇದಿಕೆ ಅಡಿ ಪ್ರತಿಭಟನೆ ನಡೆಸಿದೆವು. ಭ್ರಷ್ಟಾಚಾರದ ವಿರುದ್ಧ ಹೋರಾಡುವವರು ಕೈಕಟ್ಟಿ ಕೂತಿಲ್ಲ ಎಂಬ ಸಂದೇಶವನ್ನು ರವಾನಿಸಲು ಜಗದೀಶ್ ಪರ ಹೋರಾಟ ನಡೆಸಿದೆವು. ಆದರೆ, ಜಗದೀಶ್ ಬಳಸುವ ಪದಗಳ ಮೇಲೆ ಅವರಿಗೆ ಹಿಡಿತ ಇಲ್ಲದಿರುವ ಕುರಿತು ಹಲವರು ತಕಾರರು ಎತ್ತಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಅವರ ಕಷ್ಟ ಕಾಲದಲ್ಲಿ ಜತೆಯಾಗಿದ್ದೇವೆ. ಇದನ್ನು ಜಗದೀಶ್ ಅರಿತು ಮುಂದಿನ ದಿನಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತಾತ್ವಿಕ ನಿಟ್ಟಿನಲ್ಲಿ ಕೊಂಡೊಯ್ಯುತ್ತಾರೆಂದು ಆಶಿಸುತ್ತೇನೆ ಎಂದು ರಂಗನಾಥ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.