ETV Bharat / state

SSLC ಪರೀಕ್ಷೆ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಜಂಟಿ ವೇದಿಕೆಯಿಂದ ಪ್ರತಿಭಟನೆ - ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ

ಕರ್ನಾಟಕ ಸರ್ಕಾರ ಮಾತ್ರ ಲಕ್ಷಾಂತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದಲಿತ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಡ ವಿದ್ಯಾರ್ಥಿನಿಯರಿಗೆ ಮಾರಕವಾಗುವ ಎಸ್​ಎಸ್ಎಲ್​ಸಿ ಪರೀಕ್ಷೆಯನ್ನು ನಡೆಸಿದೆ ಎಂದು ದಸಂಸ ಒಕ್ಕೂಟದ ಗುರುಪ್ರಸಾದ್ ಕೆಂಗೋಡು ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ದೂರಿದರು.

bengaluru-karnataka-state-farmers-union-and-dalit-conflict-committee-protest
ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಜಂಟಿ ವೇದಿಕೆಯಿಂದ ಪ್ರತಿಭಟನೆ..
author img

By

Published : Aug 3, 2021, 9:44 PM IST

ಬೆಂಗಳೂರು: ಗ್ರಾಮೀಣ ರೈತ ಮಕ್ಕಳ, ದಲಿತ, ಹಿಂದುಳಿದ, ಗುಡ್ಡಗಾಡು ಪ್ರದೇಶಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ ನೀಡಲು ಮನವಿ ಮಾಡಿ ಮಂಗಳವಾರ ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ಉದ್ದಗಲಕ್ಕೂ ವ್ಯಕ್ತವಾದ ಸಾರ್ವಜನಿಕ ಒತ್ತಾಯಗಳ ನಡುವೆಯೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದು 2021ರ ಸಾಲಿನ ಎಸ್ಎಸ್ಎಲ್​​​​ಸಿ ಪರೀಕ್ಷೆ ನಡೆಸಿದೆ.

ಬಡಗಲಪುರ ನಾಗೇಂದ್ರ

ಇಡೀ ದೇಶದಲ್ಲೇ ಹತ್ತನೆಯ ತರಗತಿಯ ಪರೀಕ್ಷೆಗಳು ರದ್ದಾಗಿದೆ. ಹೀಗಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಲಕ್ಷಾಂತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದಲಿತ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಡ ವಿದ್ಯಾರ್ಥಿನಿಯರಿಗೆ ಮಾರಕವಾಗುವ SSLC ಪರೀಕ್ಷೆ ನಡೆಸಿದೆ ಎಂದು ದಸಂಸ ಒಕ್ಕೂಟದ ಗುರುಪ್ರಸಾದ್ ಕೆಂಗೋಡು ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ದೂರಿದರು.

ಕೊರೊನಾ ಸಂಕಟದಿಂದಾಗಿ ಗ್ರಾಮೀಣ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾಲಿಗೆ ಕಳೆದ ಎರಡು ವರ್ಷಗಳು ನಿಜಕ್ಕೂ ಶೂನ್ಯ ಕಲಿಕಾ ವರ್ಷಗಳೇ ಆಗಿವೆ. ಡಿಜಿಟಲ್ ಶಿಕ್ಷಣ ಗ್ರಾಮೀಣ ಭಾಗದ ಹಾಗೂ ನಗರಗಳ ಬಡ ಕುಟುಂಬಗಳ ಶೇಕಡಾ ಮೂವತ್ತು ಭಾಗ ವಿದ್ಯಾರ್ಥಿಗಳನ್ನೂ ತಲುಪಿಲ್ಲ. ಸ್ಮಾರ್ಟ್ ಫೋನ್ ದೊರೆಯದ ಬಡ ವಿದ್ಯಾರ್ಥಿನಿಯರನ್ನಂತೂ ಇದು ಶೇಕಡಾ 20ರಷ್ಟೂ ತಲುಪಿಲ್ಲ ಎಂದರು.

ಅಸಮಾನತೆಗಳನ್ನು ಸರಿಪಡಿಸಲು ತಕ್ಕ ಕ್ರಮ: ಶ್ರೀಮಂತ ಮಕ್ಕಳು - ಬಡಮಕ್ಕಳ ನಡುವೆ ಹಾಗೂ ಗ್ರಾಮ - ನಗರಗಳ ವಿದ್ಯಾರ್ಥಿಗಳ ನಡುವೆ ಈ ಸಲದ SSLC ಪರೀಕ್ಷೆ ಭಯಾನಕ ಕಂದಕ ಸೃಷ್ಟಿಸಿದೆ. ಜೊತೆಗೆ, ಈಗಿನ ಎಸ್​ಎಸ್​ಎಲ್​ಸಿಯ ಪರೀಕ್ಷೆಯ ಅಂಕಗಳು ಡಿಜಿಟಲ್, ನಾನ್ ಡಿಜಿಟಲ್ ವಿದ್ಯಾರ್ಥಿ ವರ್ಗಗಳ ನಡುವೆ ಭೀಕರ ಅಸಮಾನತೆ ತಂದಿದೆ. ಹಾಗಾಗಿ, ಇದರಿಂದ ಉಂಟಾಗಲಿರುವ ಅಸಮಾನತೆಗಳನ್ನು ಸರಿಪಡಿಸಲು ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಗುರುಪ್ರಸಾದ್ ಕೆಂಗೋಡು

ದಸಂಸ ಒಕ್ಕೂಟದ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಬೇಡಿಕೆಗಳು:

ಈ ವರ್ಷದ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳು ಕಡಿಮೆಯಾಗುವುವೋ, ಅಲ್ಲೆಲ್ಲ ಅವರ ಎಂಟನೆಯ ಅಥವಾ ಒಂಬತ್ತನೆಯ ತರಗತಿಯ ಸಾಧನೆ ಆಧರಿಸಿ ವಿಶೇಷ ಅಂಕ ಕೊಡುವ ವ್ಯವಸ್ಥೆ ಆಗಬೇಕು ಎಂದು ಜಾತಿ ಒಕ್ಕೂಟದ ಪರವಾಗಿ ರೈತ ಮುಖಂಡ ಬಡಗಲಪುರ ನಾಗೇಂದ್ರ ಈಟಿವಿ ಭಾರತಕ್ಕೆ ತಿಳಿಸಿದರು.

ಆದ್ಯತಾ ಪ್ರವೇಶ ವ್ಯವಸ್ಥೆ ಜಾರಿಗೆ ಒತ್ತಾಯ: ಕಲಿಕೆಯೇ ಸಾಧ್ಯವಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಸಲದ ಪರೀಕ್ಷೆಯಿಂದಾಗಿ ಆಗಲಿರುವ ಅನ್ಯಾಯಗಳನ್ನು ಸರಿಪಡಿಸಲು 'ಸಾಂಕ್ರಾಮಿಕರೋಗ ಕಾಲದ ವಿಶೇಷ ಪ್ರೋತ್ಸಾಹಾಂಕಗಳನ್ನು ನೀಡುವ ವ್ಯವಸ್ಥೆ ಆಗಬೇಕಾಗಿದೆ. ಗ್ರಾಮೀಣ ಪ್ರದೇಶದ ಹಾಗೂ ನಗರಗಳಲ್ಲಿರುವ ಎಲ್ಲ ಬಡ ವಿದ್ಯಾರ್ಥಿಗಳಿಗೆ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮುಂದಿನ ಹಂತದ ವಿದ್ಯಾಭ್ಯಾಸದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳೆಡರಲ್ಲೂ ಆದ್ಯತಾ ಪ್ರವೇಶ ವ್ಯವಸ್ಥೆ ಜಾರಿಯಾಗಬೇಕು ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಓದಿ: ಸಿಎಂ ದೆಹಲಿ ಭೇಟಿ ಯಶಸ್ವಿ: ನಾಳೆ ಸಂಜೆ 5 ಗಂಟೆಗೆ ನೂತನ ಸಚಿವರ ಪ್ರಮಾಣವಚನ..?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.