ETV Bharat / state

ನಂಬಿಸಿ ಗರ್ಭಿಣಿಯನ್ನಾಗಿಸಿದ ಆರೋಪ: ಅತ್ತೆ ಮಗನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

author img

By

Published : Jul 7, 2023, 8:00 AM IST

ಗರ್ಭಿಣಿಯನ್ನಾಗಿಸಿ ಮೋಸ ಮಾಡಿದ್ದಾನೆ ಎಂದು ಅತ್ತೆಯ ಮಗನ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.

Bengaluru crime
ಬೆಂಗಳೂರು ಕ್ರೈಂ

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಆರೋಪಿಸಿ ತನ್ನ ಅತ್ತೆ ಮಗನ ವಿರುದ್ಧ ಪತಿಯಿಂದ ದೂರವಾದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದುವೆಯಾಗಿ ಹೊಸ ಬಾಳು ಕೊಡುವುದಾಗಿ ನಂಬಿಸಿ, ಗರ್ಭಿಣಿಯನ್ನಾಗಿಸಿ ಎಸ್ಕೇಪ್ ಆಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೌಟುಂಬಿಕ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಸಂತ್ರಸ್ತೆ 10 ವರ್ಷದಿಂದ ಪತಿಯಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದರು. ಈ ನಡುವೆ ಅತ್ತೆ ಮಗನ (ತಂದೆಯ ತಂಗಿ ಮಗ) ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸಿದ್ದ. ಅಂತೆಯೇ ಇಬ್ಬರೂ ಜೊತೆಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.

6 ವರ್ಷದ ಹಿಂದೆ ಆತ ನನ್ನನ್ನು ಮದುವೆಯಾಗಿ ಬಾಳು ಕೊಡುವುದಾಗಿ ಭರವಸೆ ನೀಡಿದ್ದ. ಅಂತೆಯೇ ತುಮಕೂರಿನ ಯಲ್ಲಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರೂ ಸಹ ಜೀವನ ನಡೆಸುತ್ತಿದ್ದೆವು. ಆತ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಾನೇ ದುಡಿಯುತ್ತಿದ್ದೆ. ಕಳೆದ ಒಂದೂವರೆ ವರ್ಷದ ಹಿಂದೆ ಬೆಂಗಳೂರಿಗೆ ಬಂದು ಪೀಣ್ಯದ ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರು ವಾಸವಾಗಿದ್ದೆವು. ಈ ನಡುವೆ ಮೂರು ತಿಂಗಳ ಗರ್ಭಿಣಿಯಾದ ಬಳಿಕ, ನಮ್ಮಿಬ್ಬರ ಮದುವೆಗೆ ಮನೆಯವರು ಒಪ್ಪುತ್ತಿಲ್ಲವೆಂದು ಹೇಳಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಹಾಗೆಯೇ 15 ದಿನಗಳ ಹಿಂದೆ ನಾನು ಮನೆಯವರನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುವೆ ಎಂದು 5 ಸಾವಿರ ಹಣ ಪಡೆದು ಹೋದವ ಮರಳಿ ಬಂದಿಲ್ಲ. ಇದರಿಂದ ಆತಂಕಕ್ಕೊಳಗಾದ ನಾನು ತನ್ನ ಅತ್ತೆ ಮನೆಯ ಬಳಿ ಹೋಗಿ ಮದುವೆ ಮಾಡಿಕೊಡುವಂತೆ ಕೇಳಿದೆ. ಇದಕ್ಕೆ ಅತ್ತೆ ಒಪ್ಪಿಲ್ಲ. ಅವರ ಇನ್ನೊಬ್ಬ ಮಗನ ಜೊತೆಗೆ ನನ್ನನ್ನು ನಿಂದಿಸಿದ್ದಾರೆ. ಮತ್ತೆ ಮನೆ ಬಳಿ ಬಂದರೆ ಕೈಕಾಲು ಮುರಿಯುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಅತ್ತೆ ಮಗನಿಂದ ಮೋಸ ಹೋಗಿದ್ದೇನೆ, ನ್ಯಾಯ ಒದಗಿಸಿಕೊಡುವಂತೆ ಕೋರಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅತ್ತೆ ಹಾಗೂ ಇನ್ನೋರ್ವ ಅತ್ತೆ ಮಗನ ವಿರುದ್ಧವೂ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್​ಸ್ಟಾಗ್ರಾಂ ಗೆಳೆಯನಿಂದ ಅತ್ಯಾಚಾರ ಪ್ರಕರಣ: ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಸ್ನೇಹಿತ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಇತ್ತೀಚೆಗೆ ಮಂಗಳೂರಲ್ಲಿ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ಅನ್ಯಜಾತಿ ನೆಪವೊಡ್ಡಿ ಮದುವೆಗೆ ನಿರಾಕರಣೆ; ಮನನೊಂದು ಯುವತಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.