ETV Bharat / state

ರಾತ್ರಿ 11ರ ನಂತರ ರಸ್ತೆಯಲ್ಲಿ ನಡೆದಾಡಿದ್ದಕ್ಕೆ ದಂಡ.. ಬೆಂಗಳೂರು ಪೊಲೀಸರ ವಿರುದ್ಧ ದಂಪತಿ ಆರೋಪ

author img

By

Published : Dec 11, 2022, 5:07 PM IST

ಕಾರ್ತಿಕ್ ಪತ್ರಿ ಹೆಸರಿನ ವ್ಯಕ್ತಿಯು ತಮ್ಮ ಮೇಲಾದ ಅನ್ಯಾಯವನ್ನು ಹೇಳಿಕೊಂಡಿದ್ದು, ತಮಗೆ ಸಹಾಯ ಮಾಡುವಂತೆ ಟ್ವಿಟರ್​ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಇಲಾಖೆ, ಪ್ರಕರಣದ ಆರೋಪಿಗಳಾದ ಇಬ್ಬರು ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.

ರಾತ್ರಿ 11ರ ನಂತರ ರಸ್ತೆಯಲ್ಲಿ ನಡೆದಾಡಿದ್ದಕ್ಕೆ ದಂಡ: ಬೆಂಗಳೂರು ಪೊಲೀಸರ ವಿರುದ್ಧ ದಂಪತಿ ಆರೋಪ
bengaluru-couple-forced-to-pay-fine-by-cops

ಬೆಂಗಳೂರು: ತಮ್ಮ ಮನೆಯ ಹತ್ತಿರ ರಾತ್ರಿ ಹೊತ್ತಲ್ಲಿ ಸುತ್ತಾಡಿದ ಕಾರಣಕ್ಕೆ ದಂಪತಿಗೆ ಪೊಲೀಸರು ಕಿರುಕುಳ ನೀಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಕಾನೂನು ಭಂಗ ಮಾಡಿದ್ದಕ್ಕಾಗಿ ದಂಪತಿಗೆ ಪೊಲೀಸರು 1000 ರೂಪಾಯಿ ದಂಡ ವಿಧಿಸಿದ್ದಾರಂತೆ. ಕಿರುಕುಳದ ಬಗ್ಗೆ ಆರೋಪಿಸಿರುವ ವ್ಯಕ್ತಿಯು, ತನ್ನ ಪತ್ನಿಯೊಂದಿಗೆ ಬರ್ತಡೇ ಪಾರ್ಟಿಯೊಂದನ್ನು ಮುಗಿಸಿಕೊಂಡು ಮನೆಗೆ ಬರುವಾಗ ಪೊಲೀಸರು ಕಿರುಕುಳ ನೀಡಿದ್ದಾರೆನ್ನುವ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

ಕಾರ್ತಿಕ್ ಪತ್ರಿ ಹೆಸರಿನ ವ್ಯಕ್ತಿಯು ತಮ್ಮ ಮೇಲಾದ ಅನ್ಯಾಯವನ್ನು ಹೇಳಿಕೊಂಡಿದ್ದು, ತಮಗೆ ಸಹಾಯ ಮಾಡುವಂತೆ ಟ್ವಿಟರ್​ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಇಲಾಖೆ, ಆರೋಪಕ್ಕೊಳಗಾದ ಇಬ್ಬರು ಕಾನ್​​ಸ್ಟೇಬಲ್​ಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.

ಕಳೆದ ರಾತ್ರಿ ನನ್ನ ಹೆಂಡತಿ ಮತ್ತು ನಾನು ಎದುರಿಸಿದ ಆಘಾತಕಾರಿ ಘಟನೆಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಆಗ ಮಧ್ಯರಾತ್ರಿ ಸುಮಾರು 12:30 ಆಗಿತ್ತು. ನಾನು ಮತ್ತು ನನ್ನ ಹೆಂಡತಿ ಸ್ನೇಹಿತನ ಬರ್ತಡೇ ಪಾರ್ಟಿ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮನೆಗೆ ಹಿಂತಿರುಗುತ್ತಿದ್ದೆವು (ನಾವು ಮಾನ್ಯತಾ ಟೆಕ್ ಪಾರ್ಕ್ ಹಿಂದಿರುವ ಸೊಸೈಟಿಯಲ್ಲಿ ವಾಸಿಸುತ್ತಿದ್ದೇವೆ) ಎಂದು ಕಾರ್ತಿಕ್ ಬರೆದಿದ್ದಾರೆ.

  • I would like to share a traumatic incident my wife and I encountered the night before. It was around 12:30 midnight. My wife and I were walking back home after attending a friend’s cake-cutting ceremony (We live in a society behind Manyata Tech park). (1/15)

    — Karthik Patri (@Karthik_Patri) December 9, 2022 " class="align-text-top noRightClick twitterSection" data=" ">

ತಾವು ತಮ್ಮ ಅಪಾರ್ಟಮೆಂಟ್​ನ ಪ್ರವೇಶ ದ್ವಾರದಿಂದ ಕೆಲವೇ ಮೀಟರುಗಳ ಅಂತರದಲ್ಲಿರುವಾಗ ಅಲ್ಲಿಗೆ ಬಂದ ಪೊಲೀಸ್ ಗಸ್ತು ವಾಹನವೊಂದು ನಮ್ಮ ಬಳಿ ನಿಂತಿತು. ಅದರಿಂದ ಇಳಿದ ಪೊಲೀಸ್ ಯುನಿಫಾರ್ಮ್​ನಲ್ಲಿದ್ದ ಇಬ್ಬರು ನಮಗೆ ನಮ್ಮ ಐಡಿ ಕಾರ್ಡ್ ತೋರಿಸುವಂತೆ ಕೇಳಿದರು. ಆಗ ನಮಗೆ ಆಶ್ಚರ್ಯವಾಯಿತು. ಸಾಮಾನ್ಯ ದಿನವೊಂದರಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಪ್ರೌಢ ವಯಸ್ಕ ದಂಪತಿಯು ತಮ್ಮ ಐಡಿ ಕಾರ್ಡ್ ತೋರಿಸುವ ಅಗತ್ಯವಾದರೂ ಏನು? ಪೊಲೀಸರು ಪಿಂಕ್ ಹೊಯ್ಸಳ ವಾಹನದಲ್ಲಿ ಬಂದಿದ್ದರು. ಆಧಾರ್ ಕಾರ್ಡ್ ತೋರಿಸಿದ ನಂತರ ಅವರು ನಮ್ಮ ಫೋನ್​ಗಳನ್ನು ಕಸಿದುಕೊಂಡರು ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಲಾರಂಭಿಸಿದರು ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.

ಸ್ವಲ್ಪ ಗಾಬರಿಯಾಗಿದ್ದರೂ ನಾವು ಅವರ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದೆವು. ಈ ಸಮಯದಲ್ಲಿ, ಅವರಲ್ಲಿ ಒಬ್ಬರು ಚಲನ್ ಪುಸ್ತಕದಂತೆ ಕಾಣುತ್ತಿದ್ದ ಪುಸ್ತಕವೊಂದನ್ನು ತೆಗೆದು ನಮ್ಮ ಹೆಸರು ಮತ್ತು ಆಧಾರ್ ಸಂಖ್ಯೆ ನಮೂದಿಸಲು ಪ್ರಾರಂಭಿಸಿದರು. ಏನೋ ತೊಂದರೆಯಾಗಲಿದೆ ಎಂದು ಗ್ರಹಿಸಿದ ನಾವು ಚಲನ್ ಅನ್ನು ಏಕೆ ನೀಡುತ್ತೀರಿ ಎಂದು ಕೇಳಿದೆವು ಎಂದು ಕಾರ್ತಿಕ್ ಹೇಳಿದ್ದಾರೆ.

ರಾತ್ರಿ 11 ರ ನಂತರ ರಸ್ತೆಯಲ್ಲಿ ಸುತ್ತಾಡದಂತೆ ಓರ್ವ ಪೊಲೀಸ್ ಈ ಸಂದರ್ಭದಲ್ಲಿ ಅವರಿಗೆ ಸೂಚಿಸಿದ್ದಾರೆ. ಇಂಥ ಒಂದು ನಿಯಮ ಇದೆ ಎಂಬುದನ್ನು ಒಪ್ಪಲು ತಯಾರಿರದಿದ್ದರೂ, ಸುಮ್ಮನೆ ರಾತ್ರಿ ಏಕೆ ಉಸಾಬರಿ ಎಂದು ಅವರು ಸುಮ್ಮನಾಗಿದ್ದಾರೆ. ಅದರಲ್ಲೂ ಫೋನ್​ಗಳನ್ನು ಬೇರೆ ಸೀಜ್ ಮಾಡಿದ್ದರಿಂದ ನಾವು ಸುಮ್ಮನಾದೆವು ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.

ಅಂಥ ಕಾನೂನಿನ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದರೂ ಕೇಳದೆ ಪೊಲೀಸರು ನಮಗೆ 3 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಕೇಳಿದ್ದಾರೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡುವಂತೆ ಗೋಗರೆದರೂ ಅವರು ಬಿಡಲಿಲ್ಲ. ನಾವು ಬೇಡಿಕೊಂಡಷ್ಟೂ ಅವರ ಕ್ರೂರತೆ ಹೆಚ್ಚಾಯಿತು ಎಂದು ಅವರು ಆರೋಪಿಸಿದ್ದಾರೆ.

ಕೊನೆಗೆ ಕನಿಷ್ಠ ಮೊತ್ತವನ್ನಾದರೂ ಪಾವತಿಸುವಂತೆ ಪೊಲೀಸರು ಹೇಳಿದ್ದಾರೆ. ಕೊನೆಗೆ 1000 ರೂಪಾಯಿ ಕೊಡಲು ಒಪ್ಪಿದಾಗ ಅದರಲ್ಲೊಬ್ಬ ಪೊಲೀಸ್ ಕಾನ್​ಸ್ಟೇಬಲ್​ ತಮ್ಮ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿಕೊಂಡು 1000 ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಟ ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ನಿಶ್ಚಿತಾರ್ಥ-ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.