ETV Bharat / state

ಬೆಂಗಳೂರು ಕೈ ಅಭ್ಯರ್ಥಿಗಳ ಪೈಕಿ ಎನ್.ಎ. ಹ್ಯಾರೀಸ್ ಅಗರ್ಭ ಶ್ರೀಮಂತ; ಕೈ ನಾಯಕರ ಆಸ್ತಿ ವಿವರ ಹೀಗಿದೆ..

author img

By

Published : Apr 18, 2023, 9:27 AM IST

ನಿನ್ನೆ ಬೆಂಗಳೂರಿನ ಕೈ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರು ಆಸ್ತಿ ವಿವರ ಕುರಿತ ಮಾಹಿತಿ ಇಲ್ಲಿದೆ.

ಎನ್.ಎ.ಹ್ಯಾರೀಸ್
ಎನ್.ಎ.ಹ್ಯಾರೀಸ್

ಬೆಂಗಳೂರು: ಬೆಂಗಳೂರಿನ ಘಟಾನುಘಟಿ ಕೈ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರು. ಸುಮಾರು 11 ಕೈ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಕೈ ನಾಯಕರ ಪೈಕಿ ಶಾಂತಿನಗರದ ಎನ್.ಎ. ಹ್ಯಾರೀಸ್ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

438 ಕೋಟಿ ರೂ. ಆಸ್ತಿ ಒಡೆಯ ಎನ್.ಎ. ಹ್ಯಾರೀಸ್: ಶಾಂತಿನಗರದ ಕೈ ಅಭ್ಯರ್ಥಿ ಎನ್.ಎ. ಹ್ಯಾರೀಸ್ ಬೆಂಗಳೂರು ಕೈ ಹುರಿಯಾಳುಗಳ ಪೈಕಿ ಅಗರ್ಭ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎನ್.ಎ. ಹ್ಯಾರೀಸ್ ಹಾಗೂ ಕುಟುಂಬದವರ ಬಳಿ 438.22 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳಿವೆ. ಇಷ್ಟು ಪ್ರಮಾಣದ ಆಸ್ತಿಯನ್ನು ಹೊಂದಿದ್ದರೂ ಹ್ಯಾರೀಸ್ ಮತ್ತು ಪತ್ನಿ ಹೆಸರಲ್ಲಿ ಯಾವುದೇ ವಾಹನವಿಲ್ಲ. ಹ್ಯಾರೀಸ್ ಮತ್ತು ಪತ್ನಿ 167.18 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಆ ಪೈಕಿ 115.58 ಕೋಟಿ ರೂ. ಗಳನ್ನು ವಿವಿಧ ಸಂಸ್ಥೆ ಹಾಗೂ ವ್ಯಕ್ತಿಳಿಗೆ ಸಾಲ ನೀಡಿದ್ದಾಗಿದೆ. ಮಗಳಿಗೆ 1.35 ಕೋಟಿ ರೂ., ಮಗನಿಗೆ 1.17 ಕೋಟಿ ರೂ. ಸಾಲ ನೀಡಿದ್ದಾರೆ. ಒಟ್ಟು 271.02 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 28.29 ಕೋಟಿ ರೂ. ಸಾಲ ಪಡೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಿಗೇ ಸಾಲ ನೀಡಿದ ಕೈ ಅಭ್ಯರ್ಥಿ: ಯಲಹಂಕ ಕ್ಷೇತ್ರದ ಕೈ ಅಭ್ಯರ್ಥಿ ಕೇಶವ ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ 1 ಕೋಟಿ ರೂ.‌ ಸಾಲ ನೀಡಿರುವುದಾಗಿ ತಮ್ಮ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಬಳಿ 10.92 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 100.58 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಕೇಶವ ರಾಜಣ್ಣ ಒಟ್ಟು 13.95 ಕೋಟಿ ರೂ. ಸಾಲ ಪಡೆದಿದ್ದಾರೆ. 13 ವಾಹನಗಳಿದ್ದು, ಆ ಪೈಕಿ 10 ಕಾರುಗಳಿವೆ.

ಕುಸುಮಾ ಆಸ್ತಿ ವಿವರ: ರಾಜರಾಜೇಶ್ವರಿ ನಗರ ಕೈ ಅಭ್ಯರ್ಥಿ ಕುಸುಮಾ ಆಸ್ತಿ ಮೌಲ್ಯ 4.77 ಕೋಟಿ ರೂ. ಆಗಿದೆ. ಈ ಪೈಕಿ 28 ಲಕ್ಷ ರೂ. ಚರಾಸ್ತಿ, 1.97 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ತಂದೆ ಹನುಮಂತರಾಯಪ್ಪ ಅವರಿಗೆ 1.25 ಕೋಟಿ ಸಾಲ ನೀಡಿದ್ದಾರೆ. ಕುಸುಮಾ ಹೆಸರಲ್ಲಿ ಯಾವುದೇ ವಾಹನವಿಲ್ಲ. 1.22 ಕೋಟಿ ರೂ. ಸಾಲ ಹೊಂದಿದ್ದಾರೆ.

ಪುಟ್ಟಣ್ಣ ಆಸ್ತಿ ವಿವರ: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 59.70 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 17.83 ಕೋಟಿ ಮೌಲ್ಯದ ಚರಾಸ್ತಿ ಹಾಗೂ 41.86 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪುಟ್ಟಣ್ಣ ಮತ್ತು ಕುಟುಂಬದವರು 2.85 ಕೋಟಿ ರೂ. ಸಾಲ ನೀಡಿದ್ದಾರೆ. ಈ ಪೈಕಿ ಮಾಜಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್‌ಗೆ 35 ಲಕ್ಷ ರೂ. ಸಾಲ ಕೊಟ್ಟಿದ್ದಾರೆ. ಒಟ್ಟು 15.34 ಕೋಟಿ ರೂ. ಸಾಲ ಪಡೆದಿದ್ದಾರೆ.

ರಿಜ್ವಾನ್ ಅರ್ಷದ್ ಆಸ್ತಿ ವಿವರ: ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ 41 ಕೋಟಿ ರೂ. ಮೌಲ್ಯದ ಒಡೆಯರಾಗಿದ್ದಾರೆ. 1.42 ಕೋಟಿ ರೂ. ಚರಾಸ್ತಿ, 39.58 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ವಿವಿಧ ಹಣಕಾಸು ಸಂಸ್ಥೆಗಳಿಂದ 7.06 ಕೋಟಿ ರೂ. ಸಾಲ ಪಡೆದಿದ್ದಾರೆ.

ದಿನೇಶ್ ಗುಂಡೂರಾವ್ ಗೆ ಸ್ಥಿರಾಸ್ತಿ ಇಲ್ಲ: ಗಾಂಧಿನಗರ ಕೈ ಅಭ್ಯರ್ಥಿ ದಿನೇಶ್ ಗುಂಡೂರಾವ್ ಒಟ್ಟು 4.36 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಆದರೆ ಅವರ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಅವರ ಪತ್ನಿ ಹೆಸರಲ್ಲಿ 1.34 ಕೋಟಿ ಚರಾಸ್ತಿ ಇದೆ. ಪತ್ನಿ ಹೆಸರಲ್ಲಿ 6 ಕೋಟಿ ರೂ. ಸ್ಥಿರಾಸ್ತಿ ಇದೆ. ಕುಟುಂಬದ ಹೆಸರಲ್ಲಿ ಒಟ್ಟು 36 ಕೋಟಿ ರೂ. ಸ್ಥಿರಾಸ್ತಿ ಇದೆ. ದಿನೇಶ್ ಗುಂಡೂರಾವ್ 2.22 ಕೋಟಿ ರೂ. ಸಾಲ ಪಡೆದಿದ್ದಾರೆ. ಅವರ ಕುಟುಂಬ 3.73 ಕೋಟಿ ರೂ. ಸಾಲ ಮಾಡಿದೆ.

ಇದನ್ನೂ ಓದಿ: ಬಿ ವೈ ವಿಜಯೇಂದ್ರ ಬಳಿ 103 ಕೋಟಿ ಮೌಲ್ಯದ ಆಸ್ತಿ.. ಬಂಗಾರಪ್ಪ ಪುತ್ರರು ಕೋಟಿ‌ ಕೋಟಿ‌ ಒಡೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.