ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಿಸಲು ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಹೇರಲಾಗಿದ್ದು, ಮುಂಜಾನೆ ವಾಕಿಂಗ್ ಡ್ರೆಸ್ನಲ್ಲೇ ನಗರ ಪ್ರದಕ್ಷಿಣೆ ಹಾಕಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭದ್ರತೆ ಪರಿಶೀಲನೆ ನಡೆಸಿದರು.
ಕಬ್ಬನ್ ಪಾರ್ಕ್, ಎಂಜಿ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳನ್ನೆಲ್ಲ ಸುತ್ತಾಡಿದ ಆಯುಕ್ತರು ಭದ್ರತೆ ಪರಿಶೀಲನೆ ನಡೆಸಿದರು. ಇನ್ನೂ ಏಳು ದಿನಗಳ ಕಾಲ ಅಲರ್ಟ್ ಆಗಿರುವಂತೆ ಸಿಬ್ಬಂದಿಗೆ ಸೂಚಿಸಿದರು.