ಬೆಂಗಳೂರು: ಕೊರೊನಾ ಕರ್ಫ್ಯೂ ಹಿನ್ನೆಲೆ ನಗರದೆಲ್ಲೆಡೆ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿದ್ದಾರೆ. ಈ ನಡುವೆ ಸುಖಾಸುಮ್ಮನೆ ಓಡಾಡುತ್ತಿದ್ದವರನ್ನು ತಡೆದು ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿದ್ದಾರೆ.
ಟ್ರಿನಿಟಿ ಸರ್ಕಲ್ನಲ್ಲಿ ಹಲಸೂರು ಪೊಲೀಸರು ಬ್ಯಾರಿಕೇಡ್ ಹಾಕಿ, ಬರುವ ಪ್ರತಿಯೊಂದು ವಾಹನಗಳನ್ನು ಚೆಕ್ ಮಾಡುತ್ತಿದ್ದಾರೆ. ಅನಗತ್ಯ ಸಂಚಾರ ನಡೆಸುತ್ತಿದ್ದ ವಾಹನ ಸವಾರನನ್ನು ತಡೆದು ಸೂಕ್ತ ದಾಖಲಾತಿ ನೀಡದ ಸವಾರರಿಗೆ ಹಲಸೂರು ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್ಐ ಡಿ.ಕವಿತಾ ಬಸ್ಕಿ ಶಿಕ್ಷೆ ನೀಡಿದ್ದಾರೆ. ಮುಂದೆ ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ, ವಾಹನ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.
ಪೊಲೀಸರಿಗೆ ಆವಾಜ್ ಹಾಕಿದ ವಾಹನ ಸವಾರ: ಐಡಿ ಕಾರ್ಡ್ ಇಲ್ಲದೇ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬನನ್ನು ತಡೆದು ಪ್ರಶ್ನಿಸಿದಕ್ಕೆ, ಪ್ರತಿಯಾಗಿ ಪೊಲೀಸರಿಗೆ ಆವಾಜ್ ಹಾಕಿದ್ದಾನೆ. ರೆಸ್ಟೋರೆಂಟ್ ಕೆಲಸ ಮಾಡುವ ಉದ್ಯೋಗಿ ಲೂಲುಸ್ ಬೈಕ್ನಲ್ಲಿ ಬರುತ್ತಿದ್ದಾಗ ತಡೆದಿರುವ ಪೊಲೀಸರು, ಲಾಕ್ಡೌನ್ ವೇಳೆ ಯಾಕೆ ಓಡಾಡ್ತೀಯಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ನೀವೆಲ್ಲರೂ ಯಾಕೆ ಇಲ್ಲಿದ್ದೀರಾ? ನಿಮಗೆ ಲಾಕ್ಡೌನ್ ಇಲ್ವಾ? ಎಂದು ಉದ್ದಟತನ ಪ್ರದರ್ಶಿಸಿ, ನಿಮ್ಮ ರೀತಿಯೇ ನಮಗೂ ಕೆಲಸವಿದೆ.ಸುಮ್ಮನೆ ಒಡಾಡುತ್ತಿಲ್ಲ ಎಂದು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.
ಲೂಲೋಸ್ ಬೈಕ್ನಲ್ಲಿ ಬಂದಿದ್ದ ಹಲಸೂರಿನ ನಿವಾಸಿ ಧನುಷ್ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಈತನನ್ನು ವಶಕ್ಕೆ ಪಡೆದ ಪೊಲೀಸರು, ದಂಡ ಕಟ್ಟಿಸಿ, ವಾರ್ನ್ ಮಾಡಿ ಕಳುಹಿಸಿದ್ದಾರೆ.
ಓದಿ: ನಾಳೆ ಜಿಲ್ಲಾಡಳಿತಗಳ ಜೊತೆ ಸಿಎಂ ವಿಡಿಯೋ ಸಂವಾದ: ಕೊರೊನಾ ಸ್ಥಿತಿಗತಿ ಕುರಿತು ಪರಾಮರ್ಶೆ !