ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಆಸ್ಪತ್ರೆ ಮತ್ತು ಲಭ್ಯವಿರುವ ಹಾಸಿಗೆ ಮಾಹಿತಿ ತಿಳಿಯಲು ಸಮಸ್ಯೆ ಉಂಟಾದ ಕಾರಣ ಇನ್ಮುಂದೆ ಎಲ್ಲಾ ಆಸ್ಪತ್ರೆಗಳಿಗೆ ರಿಸೆಪ್ಷನ್ ಕೌಂಟರ್ ಬಳಿ ಹಾಸಿಗೆಗಳ ಮಾಹಿತಿಯ ಸೂಚನಾ ಫಲಕ ಹಾಕುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ರೋಗಿಗಳಿಗೆ ಹಲವೆಡೆ ಯಾವುದು ಕೋವಿಡ್ ಆಸ್ಪತ್ರೆ, ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಇದೆ, ಇಲ್ಲ ಎಂಬ ಬಗ್ಗೆ ಮಾಹಿತಿ ತಿಳಿಯಲು ಸರ್ಕಸ್ ಮಾಡಬೇಕಿತ್ತು. ಪಾಸಿಟಿವ್ ಬಂದ ನಂತರ 10-15 ಆಸ್ಪತ್ರೆಗಳಿಗೆ ತಿರುಗಬೇಕಿತ್ತು. ಆರೋಗ್ಯ ಇಲಾಖೆ ಸಹ ಡ್ಯಾಶ್ ಬೋರ್ಡ್ ಮೂಲಕ ಮಾಹಿತಿ ಸಿಗುವಂತೆ ಮಾಡಿತ್ತು. ಇಷ್ಟು ದಿನ ಲ್ಯಾಬ್ನಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿದ ಬಳಿಕ ವರದಿಗಾಗಿ ಕಾಯಬೇಕಿತ್ತು. ಇದರಿಂದ ತೀವ್ರ ಉಸಿರಾಟದ ಸಮಸ್ಯೆ ಇರುವವರು, ಇತರೆ ಅನಾರೋಗ್ಯ ಸಮಸ್ಯೆ ಉಳ್ಳವರು ಸಂಕಷ್ಟ ಎದುರಿಸಬೇಕಿತ್ತು.
ಇದರಲ್ಲಿ ಆಯಾ ಆಸ್ಪತ್ರೆಗಳು ಒಪ್ಪಂದದಂತೆ 50% ಹಾಸಿಗೆ ನೀಡಬೇಕಿದ್ದು, ಜೊತೆಗೆ ಕೋವಿಡ್ ರೋಗಿಗಳ ಮಾಹಿತಿ ನೀಡಿಲು ಸೂಚಿಸಲಾಗಿತ್ತು. ಈ ಮಾಹಿತಿ ಸಾರ್ವಜನಿಕ ವಲಯಕ್ಕೆ ತೆರೆದಿಡಲು ಸೂಚಿಸಲಾಗಿತ್ತು. ಈ ವ್ಯವಸ್ಥೆ ನಂತರವೂ ಹಲವರಿಗೆ ಕೆಪಿಎಂಇ ಅಡಿ ನೋಂದಣಿ ಮಾಡಿಕೊಂಡಿರುವ ಎಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ಸೂಚನಾ ಫಲಕ ಹಾಕಬೇಕು. ಆಸ್ಪತ್ರೆ ಹೆಸರು, ಕೋವಿಡ್ಗೆ ಮೀಸಲಿರುವ ಹಾಸಿಗೆಗಳು ಎಷ್ಟು, ಜನರಲ್ ವಾರ್ಡ್, ಐಸಿಯು ಬೆಡ್, ಐಸಿಯು ಜೊತೆ ವೆಂಟಿಲೇಟರ್ ಸೇರಿದಂತೆ ಹಲವು ಮಾಹಿತಿ ಸೂಚನಾ ಫಲಕದಲ್ಲಿ ಇರಬೇಕು ಎಂದು ಸರ್ಕಾರ ಆಸ್ಪತ್ರೆಗಳಿಗೆ ಸೂಚಿಸಿದೆ.