ಬೆಂಗಳೂರು: ಪೊಲೀಸ್ ಠಾಣೆಗೆ ಬರುವ ಜನರ ಬಳಿ ಪೊಲೀಸರು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಪೊಲಿಸ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮೇಳನ ಬಳಿಕ ಮಾತನಾಡಿದ ಸಿಎಂ, ಪೊಲೀಸ್ ಠಾಣೆಗೆ ಬರುವ ಜನರ ಬಳಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕು. ನೊಂದವರಿಗೆ ನೆರವಾಗಿ ಎಂದು ಸೂಚನೆ ನೀಡಿದರು.
ಕರ್ನಾಟಕ ರಾಜ್ಯ ದೇಶದ ಶಾಂತಿಯುತ ರಾಜ್ಯವಾಗಿದೆ. ರಾಷ್ಟ್ರದ ಹಲವು ಕಡೆ ಸಮಸ್ಯೆ ಇದ್ದರೂ ಕೂಡ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಪೊಲೀಸರ ಕಠಿಣ ಶ್ರಮದಿಂದ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಮಹಿಳೆಯರ ಸುರಕ್ಷತೆಯಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ. ಭವಿಷ್ಯದಲ್ಲಿ ಸೈಬರ್ ಅಪರಾಧ ಬಹು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು. ಪೊಲೀಸ್ ಇಲಾಖೆಗೆ ಏನು ಸೌಲಭ್ಯಬೇಕು ಅದನ್ನು ಕೊಡಲು ಸಿದ್ಧರಿದ್ದೇವೆ. ಜನ ಸ್ವಾಭಿಮಾನದಿಂದ ಬದುಕುವುದು ಅಗತ್ಯ. ಇಲಾಖೆಯಲ್ಲಿ ಹೆಚ್ಚಿನ ಸುಧಾರಣೆ ತರುತ್ತೇವೆ ಎಂದರು.
ಎರಡು ವರ್ಷಕ್ಕೆ ವರ್ಗಾವಣೆ ಮಾಡಲು ಚಿಂತನೆ:
ಈಗ 1-2 ವರ್ಷಕ್ಕೆ ವರ್ಗಾವಣೆ ಆಗ್ತಿದೆ. ಈಗ ಮತ್ತೆ 2 ವರ್ಷಕ್ಕೆ ವರ್ಗಾವಣೆ ಮಾಡೋ ಚಿಂತನೆ ಇದೆ. ಈ ಬಗ್ಗೆ ಶೀಘ್ರವೇ ಕ್ರಮ ತಗೋತೀವಿ ಎಂದ ಅವರು, ಜೈಲ್ ನಲ್ಲಿ ಅಕ್ರಮ ಚಟುವಟಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕುರಿತ ವರದಿ ಬಂದಿದೆ. ವರದಿ ಅಧ್ಯಯನ ಮಾಡಿ ಯಾರು ತಪ್ಪಿತಸ್ಥರು ಇರುತ್ತಾರೋ ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ ಎಂದು ಸ್ಪಷ್ಟಪಡಿಸಿದರು.
ನಿರ್ಭಯ ಸೇಫ್ ಸಿಟಿ ಟೆಂಡರ್ ರದ್ದು ವಿಚಾರವಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ಮಾಹಿತಿ ಕೊಡ್ತೀನಿ. ಆಯುಕ್ತರು ಈ ಬಗ್ಗೆ ನನಗೆ ಯಾವುದೇ ಇದುವರಗೂ ಮಾಹಿತಿ ನೀಡಿಲ್ಲ ಇನ್ನು ಆನ್ ಲೈನ್ ಗೇಮ್ ರದ್ದು ವಿಚಾರವಾಗಿ ಪ್ರತಿಕ್ರಿಯಸುತ್ತಾ, ನಮ್ಮ ರಾಜ್ಯದಲ್ಲಿ ಬಿಲ್ ತರಲು ಕರಡು ರೆಡಿ ಆಗ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಹೇಗಿದೆ ಕಾನೂನು ಅಂತ ನೋಡ್ತೀವಿ. ಶೀಘ್ರವೇ ಕಾನೂನು ರಾಜ್ಯದಲ್ಲಿ ಜಾರಿ ಮಾಡ್ತೀವಿ ಎಂದರು.
ಪೋಲಿಸರ ವೇತನ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ 6 ನೇ ವೇತನ ಆಯೋಗದ ಅನ್ವಯ ಸಂಬಳ ಹೆಚ್ಚಳ ಮಾಡಲಾಗಿದೆ. ಕೆಲವರು ಪ್ರಮೋಷನ್ ಹಂತದಲ್ಲಿ ಇದ್ದಾರೆ. ಅ ಪ್ರಕ್ರಿಯೆ ಮುಗಿದ ಮೇಲೆ ಅವ್ರಿಗೂ ಸಂಬಳ ಹೆಚ್ಚಳ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.