ETV Bharat / state

ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಮುಂದುವರೆದ ಬಿಜೆಪಿ ನಾಯಕರ ಭೇಟಿ.. ಅಶೋಕ್ ಸಹಕಾರ ಕೋರಿದ ಅಧ್ಯಕ್ಷ ಕೆಟಿ ಮಂಜುನಾಥ್

author img

By

Published : Aug 10, 2023, 4:48 PM IST

ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘವು ಮಾಜಿ ಡಿಸಿಎಂ ಆರ್ ಅಶೋಕ್ ಅವರನ್ನು ಭೇಟಿ ಮಾಡಿ ತಡೆ ಹಿಡಿದಿರುವ ಬಿಲ್​ ಪಾವತಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.

bbmp-working-contractors-association-met-former-dcm-r-ashok
ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಮುಂದುವರೆದ ಬಿಜೆಪಿ ನಾಯಕರ ಭೇಟಿ : ಅಶೋಕ್ ಸಹಕಾರ ಕೋರಿದ ಅಧ್ಯಕ್ಷ ಕೆಟಿ ಮಂಜುನಾಥ್

ಬೆಂಗಳೂರು: ತಡೆ ಹಿಡಿದಿರುವ ಬಿಲ್ ಪಾವತಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಬೆಂಗಳೂರು ಶಾಸಕರು, ಬಿಜೆಪಿ ಮುಖಂಡರ ಭೇಟಿ ಮುಂದುವರೆದಿದೆ. ಗುತ್ತಿಗೆದಾರರ ಸಂಘ ಮಾಜಿ ಡಿಸಿಎಂ ಆರ್ ಅಶೋಕ್​ ಅವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದೆ.

ಕಾಮಗಾರಿಗಳ ಬಿಲ್ ಹಣ ಬಿಡುಗಡೆಗೆ ಕಮಿಷನ್ ಬೇಡಿಕೆ ಆರೋಪ ಮಾಡಿರುವ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಇದೀಗ ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ನಾಯಕರ ಮನೆ ಬಾಗಿಲು ತಟ್ಟುತ್ತಿದೆ. ರಾಜ್ಯಪಾಲರ ಭೇಟಿ ಮಾಡಿದ್ದ ಗುತ್ತಿಗೆದಾರರ ಸಂಘ ನಂತರ ಯಡಿಯೂರಪ್ಪ, ಸಿ ಟಿ ರವಿ ಅವರನ್ನು ಭೇಟಿ ಮಾಡಿ ಬಾಕಿ ಬಿಲ್ ಪಾವತಿ ವಿಳಂಬದ ಕುರಿತು ಪ್ರಸ್ತಾಪಿಸಿ ನೆರವು ಕೋರಿತ್ತು. ಇಂದು ಮಾಜಿ ಡಿಸಿಎಂ ಆರ್.ಅಶೋಕ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಗುತ್ತಿಗೆದಾರರ ನಿಯೋಗದ ಭೇಟಿ ನಂತರ ಮಾತನಾಡಿದ ಅಶೋಕ್, ಈಗ ಬಿಲ್ ಮೊತ್ತ ಬಿಡುಗಡೆ ಮಾಡುವುದಕ್ಕೆ 26 ಷರತ್ತುಗಳನ್ನು ಹಾಕಿದ್ದಾರೆ‌. 26 ಷರತ್ತುಗಳನ್ನು ಪೂರೈಸಲು 26 ವರ್ಷ ಬೇಕು. ಪಾರ್ಕ್ ನಲ್ಲಿ ಕಳೆ ಕಿತ್ತಿದ್ದು ಕಳೆ ಎಲ್ಲಿ ಹಾಕಿದ್ರಿ!? ಅದೆಲ್ಲಾ ತನಿಖೆ ಆಗಬೇಕಲ್ಲ. ಗೋಡೆಗೆ ಬಣ್ಣ ಬಳಿದಿದ್ರೆ ಈಗ ಹೇಗೆ ತನಿಖೆ ಮಾಡುತ್ತೀರಿ, ಇದನ್ನೆಲ್ಲಾ ಇಸ್ರೋದ ಸ್ಯಾಟ್​ಲೈಟ್ ಮೂಲಕ ತನಿಖೆ ಮಾಡಿಸುತ್ತೀರಾ ಎಂದು ವ್ಯಂಗ್ಯವಾಡಿದರು.

ನಾನು ನಾಲ್ಕು ಬಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ನಾನು ಯಾವತ್ತು ವರ್ಗಾವಣೆ ಮಾಡುವಾಗ ನನ್ನ ಗಮನಕ್ಕೆ ತಂದು ಮಾಡಿ ಎಂದು ಹೇಳಿರಲಿಲ್ಲ. ಅಂದು ನಮ್ಮ ಸರ್ಕಾರದ ಮೇಲೆ ಪೇಸಿಎಂ ಅಂದ್ರಿ. ಈಗ ನಿಮ್ಮದು ಪೇಸಿಎಂ, ಪೇ ಡಿಸಿಎಂ ಎಂದು ಪ್ರಶ್ನಿಸಿದರು. ಕಾಂಟ್ರಾಕ್ಟರ್ ಎಲ್ಲಾ ಬಿಜೆಪಿಗರು ಅಂದ್ರಲ್ಲ. ಅವರೇನು ಆಕಾಶದಿಂದ ಈಗ ಇಳಿದವರಲ್ಲ. ಈ ಕಾಂಟ್ರಾಕ್ಟರ್ ಎಲ್ಲಾ ತಯಾರು ಮಾಡಿದ್ದು ನೀವೆ. ಇವರೆಲ್ಲಾ ಬಿಜೆಪಿ ಕಾಲದಲ್ಲಿ ಬಂದಂತ ಕಾಂಟ್ರಾಕ್ಟರ್​ ಅಲ್ಲ. ನಿಮ್ಮ ಪ್ರಕಾರ ಗುತ್ತಿಗೆದಾರರು ಕಳ್ಳರು ಎಂದರೆ, ನೀವು ಏನು ದರೋಡೆಕೋರರಾ? ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಅಶೋಕ್ ಭೇಟಿ ಬಳಿಕ ಮಾತನಾಡಿದ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಟಿ ಮಂಜುನಾಥ್, ಅಶೋಕ್ ಸೇರಿದಂತೆ ನಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದಗಳು. ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದೇವೆ. ಪಕ್ಷಾತೀತವಾಗಿ ಕೆಲಸ ಮಾಡಿದ್ದೇವೆ. ಚುನಾವಣೆ ಆದಾಗಿಂದ ಪೇಮೆಂಟ್ ತಡೆ ಹಿಡಿದಿಟ್ಟಿದ್ದಾರೆ. ಅದನ್ನು ಯಾರು ತಡೆ ಹಿಡಿದಿದ್ದಾರೆ ಅನ್ನೋದು ಗೊತ್ತಿಲ್ಲ. ಅದು ನಮಗೆ ಬೇಕಿಲ್ಲ. ಆದರೆ ನಮ್ಮ ಹಣ ನಮಗೆ ಬರಬೇಕು, ನಾವು ಪ್ರತಿಭಟನೆ ಮಾಡುವ ಮೊದಲು ಎಲ್ಲಾ ಶಾಸಕರನ್ನು ಭೇಟಿ ಮಾಡುತ್ತಿದ್ದೇವೆ ಎಂದರು.

2.5 ಸಾವಿರ ಕೋಟಿ ಮಾತ್ರ ಬಾಕಿ ಇದೆ. 25 ಸಾವಿರ ಕೋಟಿ ಬಾಕಿ ಇದೆ ಎನ್ನೋದು ಸುಳ್ಳು. ಬಿಬಿಎಂಪಿಗೆ 675 ಕೋಟಿ ಹಣ ಸರ್ಕಾರದಿಂದ ಬಂದಿದೆ. ಅಧಿಕಾರಿಗಳು ಯಾರಿಗೆ ಹಣ ಬಿಡುಗಡೆ ಮಾಡಿದ್ದಾರೋ ಗೊತ್ತಿಲ್ಲ. ರಾಜ್ಯಪಾಲರ ಭೇಟಿ ಮಾಡಿ, ಹಣ ಕೊಡಿಸಿ, ಇಲ್ಲ ಅಂದರೆ ದಯಾಮರಣ ಕೊಡಿಸಿ ಎಂದಿದ್ದೇವೆ. ನಾಳೆ ಯಾರಾದರೂ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಸರ್ಕಾರದಲ್ಲಿ ಯಾರು ಹೊಣೆ ಹೊರುತ್ತಾರೆ. ಮೊನ್ನೆಯೇ ಒಬ್ಬ ಗುತ್ತಿಗೆದಾರರ ಸೀಮೆ ಎಣ್ಣೆ ಎತ್ಕೊಂಡು ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ ನಾವು ತಡೆದಿದ್ದೇವೆ. ದಯಮಾಡಿ ನಮ್ಮ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದರು.

ಗುತ್ತಿಗೆದಾರ ಮಂಜುನಾಥ್ ಮಾತನಾಡಿ, ಈ ಸರ್ಕಾರ ಬಂದಾಗಿಂದ ಹಣ ಬಿಡುಗಡೆ ಆಗುತ್ತಿಲ್ಲ, ಹಣ ಬಿಡುಗಡೆ ಮಾಡದೆ ಇದ್ದರೆ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಬಡ ಗುತ್ತಿಗೆದಾರರು ಇದ್ದಾರೆ. ಹೆಣ್ಣುಮಕ್ಕಳ ತಾಳಿ ಕೂಡ ಅಡ ಇಟ್ಟು ಕೆಲಸ ಮಾಡಿರುತ್ತಾರೆ. ಮೊದಲು ಯಾಕೆ ತನಿಖೆ ಮಾಡಿಲ್ಲ‌. ಹಿಂದೆಯೂ ನಾವು ಕೆಲಸ ಮಾಡಿದ್ದೇವೆ. ಈಗ ತನಿಖೆ ಎಂದರೆ ಏನು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಗುತ್ತಿಗೆದಾರರನ್ನು ಮಾಧ್ಯಮದವರೆದುರು ಯಾರು ಕಳಿಸುತ್ತಿದ್ದಾರೆ ಅಂತ ಗೊತ್ತಿದೆ : ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.