ಬೆಂಗಳೂರು: ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡಲು ಬಿಬಿಎಂಪಿ ವ್ಯವಸ್ಥೆ ಕಲ್ಪಿಸಿದೆ.
ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ವಲಸೆ ಕಾರ್ಮಿಕರಿಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕ್ಯಾಂಪ್ ಮಾಡಲಾಗಿದೆ. ಟ್ರೈನ್ ಇರುವ ದಿನದವರೆಗೆ ತ್ರಿಪುರ ವಾಸಿನಿಯಲ್ಲೇ ಇರಬಹುದು. ಊಟ, ವಸತಿ ವ್ಯವಸ್ಥೆಯನ್ನು ಬಿಬಿಎಂಪಿ ನೋಡಿಕೊಳ್ಳಲಿದೆ. ರೈಲಿನ ಪ್ರಯಾಣದ ವೆಚ್ಚ ಕೂಡಾ ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.