ETV Bharat / state

ಬಿಬಿಎಂಪಿ ವೈಟ್ ಟ್ಯಾಪಿಂಗ್​ನಲ್ಲಿ ಭಾರಿ ಅಕ್ರಮ ಆರೋಪ: ಆಡಳಿತ ಪಕ್ಷದಿಂದ ದಾಖಲೆ ಬಿಡುಗಡೆ

2018-19ರಲ್ಲಿ ಬೆಂಗಳೂರಿನ ರಸ್ತೆಗುಂಡಿಗೆ ಸಮಸ್ಯೆಗೆ ಪರಿಹಾರ ರೂಪದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೈಟ್ ಟ್ಯಾಪಿಂಗ್ ಯೋಜನೆ ರೂಪಿಸಿತ್ತು. ಆದ್ರೆ ಪ್ರತಿ ಕಿ.ಮೀ. ವೈಟ್ ಟ್ಯಾಪಿಂಗ್​ಗೆ ಐದಾರು ಕೋಟಿ ರೂ.ಹೆಚ್ಚು ತೋರಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ದಾಖಲೆ ಬಿಡುಗಡೆ ಮಾಡಿದ ಬಿಜೆಪಿ..!
author img

By

Published : Oct 25, 2019, 2:20 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣಗಳ ದಾಖಲೆಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. 3900 ಪುಟಗಳ ಬೃಹತ್ ದಾಖಲೆಯನ್ನು ಬಿಜೆಪಿ ವಕ್ತಾರ ಅಶ್ವಥ್​ ನಾರಾಯಣ, ಬಿಜೆಪಿ ಮುಖಂಡ ಎನ್.ಆರ್. ರಮೇಶ್, ಮಾಜಿ ಉಪಮೇಯರ್ ಎಸ್.ಹರೀಶ್ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಬಿಜೆಪಿ ವಕ್ತಾರ ಅಶ್ವಥ್​ ನಾರಾಯಣ ಮಾತನಾಡಿ, 2018-19ರಲ್ಲಿ ಬೆಂಗಳೂರಿನ ರಸ್ತೆಗುಂಡಿಗೆ ಸಮಸ್ಯೆಗೆ ಪರಿಹಾರ ರೂಪದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೈಟ್ ಟ್ಯಾಪಿಂಗ್ ಯೋಜನೆ ರೂಪಿಸಿತ್ತು. ಆದರೆ ಪ್ರತಿ ಕಿ.ಮೀ. ವೈಟ್ ಟ್ಯಾಪಿಂಗ್ ಐದಾರು ಕೋಟಿ ರೂಪಾಯಿ ಹೆಚ್ಚು ತೋರಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.

ಮೊದಲ ಹಂತದಲ್ಲಿ 93.37 ಕಿ.ಮೀ. ಗೆ 1147.76 ಕೋಟಿ ರೂ, ಎರಡನೇ ಹಂತದಲ್ಲಿ 62.80 ಕಿ.ಮೀ ಗೆ 758.56 ಕೋಟಿ ರೂ. ಮೂರನೇ ಹಂತದಲ್ಲಿ 123 ಕಿ.ಮೀ ಗೆ 1139 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ. ಅವಶ್ಯಕತೆಯೇ ಇಲ್ಲದ ರಸ್ತೆಗಳನ್ನು ಯೋಜನೆಯಡಿ ತಂದಿದ್ದಾರೆ. ಜೊತೆಗೆ ಯೋಜನೆ ಪ್ರಾರಂಭಕ್ಕೆ ಮೊದಲೆ ಯುಜಿಡಿ ಲೈನ್ ಶಿಫ್ಟ್​ ಮಾಡದೆ, ಎಲೆಕ್ಟ್ರಿಕ್ ಕಂಬಗಳನ್ನು ಶಿಫ್ಟ್ ಮಾಡದೆ, ಪಾದಚಾರಿ ಮಾರ್ಗಗಳನ್ನ ಸಿದ್ಧಪಡಿಸದೇ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಅವಕಾಶ ಕೊಟ್ಟಿದ್ದಾರೆ‌. ಎನ್ ಸಿಸಿ ಮತ್ತು ಮಧುಕಾನ್ ಎಂಬ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ದಾಖಲೆ ಬಿಡುಗಡೆ ಮಾಡಿದ ಬಿಜೆಪಿ..!

ಕರೇಸಂದ್ರ ಮತ್ತು ಯಡಿಯೂರ್ ವಾರ್ಡ್​ಗಳಲ್ಲಿ ನಾವು ಪ್ರಾಯೋಗಿಕವಾಗಿ ಅದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಾಗ ಪ್ರತಿ ಕಿ.ಮೀ ಗೆ ಕೇವಲ 90 ಲಕ್ಷ ರೂ.ವೆಚ್ಚವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೈಟ್ ಟ್ಯಾಪಿಂಗ್ ಗೆ ಪ್ರತಿ ಕಿ.ಮೀ ಗೆ12 ಕೋಟಿ ರೂ. ವೆಚ್ಚ ಮಾಡಿರುವ ಲೆಕ್ಕ ತೋರಿಸಿದ್ದಾರೆ. ಬಹುಶಃ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ನಡೆದಾಗ ಸಿಕ್ಕಿರುವ ಹಣ ಇದೇ ವೈಟ್ ಟ್ಯಾಪಿಂಗ್ ಅವ್ಯವಹಾರದಲ್ಲಿ ಪಡೆದಿರುವ ಕಮೀಷನ್ ಹಣ ಎಂಬ ಶಂಕೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದರು.

ಮಾಜಿ ಉಪ ಮೇಯರ್ ಹರೀಶ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ನಾವು ಸವಾಲು ಹಾಕುತ್ತೇವೆ. ತಾಕತ್ತಿದ್ದರೆ ಮುಖ್ಯಮಂತ್ರಿಯವರಿಗೆ ಅವರು ಪತ್ರ ಬರೆದು ತಮ್ಮ ಗಾಂಧಿನಗರ ಕ್ಷೇತ್ರದ ಕಾಮಗಾರಿಗಳ ಪರಿಶೀಲನೆಗೆ ಆಹ್ವಾನಿಸಲಿ. ಅವರ ಕ್ಷೇತ್ರದಲ್ಲಿ ವೈಟ್ ಟ್ಯಾಪಿಂಗ್ ಗೆ ಪ್ರತಿ ಕಿ.ಮೀ ಗೆ 15 ಕೋಟಿ ರೂ.ವೆಚ್ಚ ಮಾಡಿದ್ದಾರೆ. ಈ ಕಾಮಗಾರಿಯ ಗುತ್ತಿಗೆ ಪಡೆದವರಿಗೂ ದಿನೇಶ್ ಗುಂಡೂರಾವ್ ಗೆ ಏನು ಸಂಬಂಧ ಎಂದು‌ ಪ್ರಶ್ನಿಸಿದರು.‌

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮೆ. ಮಹೇಶ್ವರಿ ಕನ್ಸಸ್ಟ್ರಕ್ಷ ನ್ ನಿಂದ 30 ಕೋಟಿ ರೂ.ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಬಿಎಂಪಿ ಸದಸ್ಯ ನಟರಾಜ್ ಹತ್ಯೆಯಲ್ಲಿ ರಾಜಕೀಯ ಕೈವಾಡ ಇದೆ. ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಭಾಗಿಯಾದವರಿಂದಲೇ ಸತ್ಯ ಬಹಿರಂಗಗೊಳಿಸುತ್ತೇವೆ. ಪ್ರಕರಣದಲ್ಲಿ ಭಾಗಿಯಾದವರಿಂದಲೇ ಸುದ್ದಿಗೋಷ್ಟಿ ನಡೆಸಿ ಹತ್ಯೆಗೆ ಸುಪಾರಿ ನೀಡಿದವರ ಬಣ್ಣ ಬಯಲುಗೊಳಿಸುತ್ತೇವೆ ಎಂದರು.

2014-15ರಿಂದ 2018ರ ನಾಲ್ಕು ವರ್ಷಗಳ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರ 14,600 ಕೋಟಿ ರೂ. ವೆಚ್ಚ ಮಾಡಿದೆ.ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್​ನ ಮಾಜಿ ಮೇಯರ್​ಗಳು ಹಾಗೂ ಕಾಂಗ್ರೆಸ್ ವಕ್ತಾರ ಉಗ್ರಪ್ಪ ಒಪ್ಪುತ್ತಾರೆಯೇ ಎಂದು ಸವಾಲೆಸೆದರು.

ಪ್ರತಿ ಕಿಲೋಮೀಟರ್ ವೈಟ್ ಟ್ಯಾಪಿಂಗ್ ನಲ್ಲಿ ಐದಾರು ಕೋಟಿ ರೂಪಾಯಿ ಲೂಟಿ ಮಾಡಿದ್ದು ಈ ಎಲ್ಲಾ ಅಂಶಗಳ ಬಗ್ಗೆ ಇನ್ನು ಮೂರು ತಿಂಗಳಿನಲ್ಲಿ ದಾಖಲೆ ಸಮೇತ ನಾವು ಸಾಬೀತುಪಡಿಸುತ್ತೇವೆ ಎಂದು ಪ್ರಕಟಿಸಿದರು.

Intro:

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣಗಳ ದಾಖಲೆಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. 3900 ಪುಟಗಳ ಬೃಹತ್ ದಾಖಲೆಯನ್ನು ಬಿಜೆಪಿ ವಕ್ತಾರ ಅಶ್ವತ್ ನಾರಾಯಣ,ಬಿಜೆಪಿ ಮುಖಂಡ ಎನ್.ಆರ್.ರಮೇಶ್,ಮಾಜಿ ಉಪಮೇಯರ್ ಎಸ್.ಹರೀಶ್ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ವಕ್ತಾರ ಅಶ್ವತ್ ನಾರಾಯಣ, 2018-19ರಲ್ಲಿ ಬೆಂಗಳೂರಿನ ರಸ್ತೆಗುಂಡಿಗೆ ಸಮಸ್ಯೆಗೆ ಪರಿಹಾರ ರೂಪದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೈಟ್ ಟಾಪಿಂಗ್ ಯೋಜನೆ ರೂಪಿಸಿತು.ಆದರೆ ಪ್ರತಿ ಕಿ.ಮೀ ವೈಟ್ ಟಾಪಿಂಗ್ ಐದಾರು ಕೋಟಿ ರೂ.ಹೆಚ್ಚು ತೋರಿಸಿ ಅವ್ಯವಹಾರ ನಡೆಸಿದ್ದಾರೆ.ಮೊದಲ ಹಂತದಲ್ಲಿ 93.37 ಕಿ.ಮೀ ಗೆ 1147.76 ಕೋಟಿ ರೂ,ಎರಡನೆ ಹಂತದಲ್ಲಿ 62.80 ಕಿ.ಮೀ ಗೆ 758.56 ಕೋಟಿ ರೂ.ಮೂರನೆ ಹಂತದಲ್ಲಿ 123 ಕಿ.ಮೀ ಗೆ 1139 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ. ಅವಶ್ಯಕತೆಯೇ ಇಲ್ಲದ ರಸ್ತೆಗಳನ್ನು ಯೋಜನೆಯಡಿ ತಂದಿದ್ದಾರೆ ಜೊತೆಗೆ ಯೋಜನೆ ಪ್ರಾರಂಭಕ್ಕೆ ಮೊದಲೆ ಯುಜಿಡಿ ಲೈನ್ ಶಿಪ್ಟ್ ಮಾಡದೆ,ಎಲೆಕ್ಟ್ರಿಕ್ ಕಂಭಗಳನ್ನು ಶಿಫ್ಟ್ ಮಾಡದೆ,ಪಾದಚಾರಿ ಮಾರ್ಗಗಳನ್ನ ಸಿದ್ದಮಾಡದೆ ರಸ್ತೆಗಳ ಕಾಂಕ್ರೀಟೀಕರಣಕ್ಕೆ ಅವಕಾಶ ಕೊಟ್ಟಿದ್ದಾರೆ‌.ಎನ್ ಸಿಸಿ ಮತ್ತು ಮಧುಕಾನ್ ಎಂಬ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ಕರೇಸಂದ್ರ ಮತ್ತು ಯಡಿಯೂರ್ ವಾರ್ಡ್ ಗಳಲ್ಲಿ ನಾವು ಪ್ರಾಯೋಗಿಕವಾಗಿ ಅದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಾಗ ಪ್ರತಿ ಕಿ.ಮೀ ಗೆ ಕೇವಲ 90 ಲಕ್ಷ ರೂ.ವೆಚ್ಚವಾಗಿದೆ.ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವೈಟ್ ಟಾಪಿಂಗ್ ಗೆ ಪ್ರತಿ ಕಿ.ಮೀ ಗೆ12 ಕೋಟಿ ರೂ ವೆಚ್ಚ ಮಾಡಿರುವ ಲೆಕ್ಕ ತೋರಿಸಿದ್ದಾರೆ.ಬಹುಶಃ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ನಡೆದಾಗ ಸಿಕ್ಕಿರುವ ಹಣ ಇದೇ ವೈಟ್ ಟಾಪಿಂಗ್ ಅವ್ಯವಹಾರದಲ್ಲಿ ಪಡೆದಿರುವ ಕಮೀಷನ್ ಹಣ ಎಂಬ ಶಂಕೆ ಇದೆ ಎಂದರು.

ಮಾಜಿ ಉಪ ಮೇಯರ್ ಹರೀಶ್ ಮಾತನಾಡಿ, ದಿನೇಶ್ ಗುಂಡೂರಾವ್ ಗೆ ನಾವು ಸವಾಲು ಹಾಕುತ್ತೇವೆ,ತಾಕತ್ತಿದ್ದರೆ ಮುಖ್ಯಮಂತ್ರಿಯವರಿಗೆ ಅವರು ಪತ್ರ ಬರೆದು ತಮ್ಮ ಗಾಂಧಿನಗರ ಕ್ಷೇತ್ರದ ಕಾಮಗಾರಿಗಳ ಪರಿಶೀಲನೆಗೆ ಆಹ್ವಾನಿಸಲಿ, ಅವರ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಗೆ ಪ್ರತಿ ಕಿ.ಮೀ ಗೆ 15 ಕೋಟಿ ರೂ.ವೆಚ್ಚ ಮಾಡಿದ್ದಾರೆ.ಈ ಕಾಮಗಾರಿಯ ಗುತ್ತಿಗೆ ಪಡೆದವರಿಗೂ ದಿನೇಶ್ ಗುಂಡೂರಾವ್ ಗೆ ಏನು ಸಂಬಂಧ ಎಂದು‌ ಪ್ರಶ್ನಿಸಿದರು ‌

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮೆ.ಮಹೇಶ್ವರಿ ಕನ್ಸಸ್ಟ್ರಕ್ಷ ನ್ ನಿಂದ 30 ಕೋಟಿ ರೂ.ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿಬಿಎಂಪಿ ಸದಸ್ಯ ನಟರಾಜ್ ಹತ್ಯೆಯಲ್ಲಿ ರಾಜಕೀಯ ಕೈವಾಡ ಇದೆ.ಮುಂದಿನ ದಿನಗಳಲ್ಲಿ ಪ್ರಕರಣದಲ್ಲಿ ಭಾಗಿಯಾದವರಿಂದಲೇ ಸತ್ಯ ಬಹಿರಂಗಗೊಳಿಸುತ್ತೇವೆ ಪ್ರಕರಣದಲ್ಲಿ ಭಾಗಿಯಾದವರಿಂದಲೇ ಸುದ್ದಿಗೋಷ್ಟಿ ನಡೆಸಿ ಹತ್ಯೆಗೆ ಸುಪಾರಿ ನೀಡಿದವರ ಬಣ ಬಯಲುಗೊಳಿಸುತ್ತೇವೆ ಎಂದರು.

2014-15ರಿಂದ 2018ರ ನಾಲ್ಕು ವರ್ಷಗಳ ಅವಧಿಯಲ್ಲಿ ರಸ್ತೆ ಅಭಿವೃದ್ದಿಗೆ ಸರ್ಕಾರ 14,600 ಕೋಟಿ ರೂ ವೆಚ್ಚ ಮಾಡಿದೆ.ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ನ ಮಾಜಿ ಮೇಯರ್ ಗಳು ಹಾಗೂ ಕಾಂಗ್ರೆಸ್ ವಕ್ತಾರ ಉಗ್ರಪ್ಪ ಒಪ್ಪುತ್ತಾರೆಯೇ ಎಂದು ಸವಾಲೆಸೆದರು.

ಪ್ರತಿ ಕಿಲೋಮೀಟರ್ ವೈಟ್ ಟ್ಯಾಪಿಂಗ್ ನಲ್ಲಿ ಐದಾರು ಕೋಟಿ ಲೂಟಿ ಮಾಡಿದ್ದು ಈ ಎಲ್ಲಾ ಅಂಶಗಳ ಬಗ್ಗೆ ಇನ್ನು ಮೂರು ತಿಂಗಳಿನಲ್ಲಿ ದಾಖಲೆ ಸಮೇತ ನಾವು ಸಾಬೀತುಪಡಿಸುತ್ತೇವೆ ಎಂದು ಪ್ರಕಟಿಸಿದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.