ETV Bharat / state

ಮಕ್ಕಳ ದಾಖಲಾತಿಗೆ ಬಂದ ಮಹಿಳೆಯಿಂದ್ಲೇ ಬಾಡಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕ ಸಸ್ಪೆಂಡ್

author img

By

Published : Sep 22, 2021, 9:49 PM IST

ಶಾಲೆಗೆ ಮಕ್ಕಳ ದಾಖಲಾತಿಗೆ ಬಂದ ಮಕ್ಕಳ ಪೋಷಕರ ಜೊತೆ ಮುಖ್ಯ ಶಿಕ್ಷಕರೊಬ್ಬರು ಅನುಚಿತವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಶಿಕ್ಷಕನ ಅಮಾನತು
ಶಿಕ್ಷಕನ ಅಮಾನತು

ಬೆಂಗಳೂರು: ಶಾಲೆಗೆ ಮಕ್ಕಳನ್ನು ದಾಖಲಿಸಲು ಬಂದ ಪೋಷಕರೊಬ್ಬರ ಜೊತೆಯಲ್ಲಿ ಮುಖ್ಯ ಶಿಕ್ಷಕ ಅನುಚಿತವಾಗಿ ವರ್ತಿಸಿರುವ ಪ್ರಕರಣ ನಡೆದಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋದಂಡರಾಮಪುರದ ಮುಖ್ಯ ಶಿಕ್ಷಕ ಲೋಕೇಶಪ್ಪ ಶಾಲೆಯಲ್ಲೇ ಬಾಡಿ ಮಸಾಜ್​ ಮಾಡಿಸಿಕೊಂಡಿದ್ದಾರೆ.

ಶಾಲೆಗೆ ಮಗುವನ್ನು ದಾಖಲಿಸಲು ಬಂದ ಪೋಷಕ ಮಹಿಳೆಯಿಂದ ಒತ್ತಾಯಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾನೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ವಿಶೇಷ ಆಯುಕ್ತರು ಮುಖ್ಯ ಶಿಕ್ಷಕನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

BBMP Suspend kodandaramapura
ಮುಖ್ಯ ಶಿಕ್ಷಕನ ಅಮಾನತುಗೊಳಿಸಿ ಆದೇಶ

ಇದನ್ನೂ ಓದಿ: ಸಿಧು ವಿರುದ್ಧ ಯುದ್ಧ ಘೋಷಿಸಿದ ಕ್ಯಾಪ್ಟನ್​​.. ಪಂಜಾಬ್ ಸಿಎಂ ಆಗುವುದನ್ನ ತಪ್ಪಿಸಲು ಬಲಿಷ್ಠ ಅಭ್ಯರ್ಥಿ ಕಣಕ್ಕೆ..

ಪ್ರಕರಣದ ಪೂರ್ಣ ವಿವರ:

ಶಾಲೆಯ ಆವರಣದಲ್ಲಿಯೇ ಈ ರೀತಿ ಅಕ್ರಮ ಚಟುವಟಿಕೆ ನಡೆಸಿದ್ದ ಈತನ ಕಾಮಚೇಷ್ಟೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಚಾರಣೆ ವೇಳೆ ಮುಖ್ಯ ಶಿಕ್ಷಕ ತಾನು ವಿದ್ಯಾರ್ಥಿಯೊಂದಿಗೆ ಬಂದಿದ್ದ ಮಹಿಳೆಯಿಂದ ಬಾಡಿ ಮಸಾಜ್​ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಸರ್ಕಾರಿ ಶಾಲಾ ಕಟ್ಟಡದಲ್ಲಿ ಅದರಲ್ಲೂ ಕೆಲಸದ ಅವಧಿಯಲ್ಲಿ ಈ ರೀತಿ ದುರ್ವರ್ತನೆ ತೋರಿರುವ ಮುಖ್ಯ ಶಿಕ್ಷಕನ ವಿರುದ್ಧ ಪಾಲಿಕೆ ಕಠಿಣ ಕ್ರಮ ಜರುಗಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.