ETV Bharat / bharat

ಶೋಕಾಸ್ ನೋಟಿಸ್ ನೀಡದೆ ಆರೋಪಿಗಳ ಮನೆ ನೆಲಸಮಗೊಳಿಸುವಂತಿಲ್ಲ: 'ಬುಲ್ಡೋಜರ್ ನ್ಯಾಯ'ಕ್ಕೆ ಸುಪ್ರೀಂ ಕೋರ್ಟ್‌ ಕಡಿವಾಣ - BULLDOZER JUSTICE

ಭಾರೀ ಚರ್ಚೆಗೆ ಕಾರಣವಾಗಿರುವ ಆರೋಪಿಗಳ ಮನೆ ನೆಲಸಮಗೊಳಿಸುವ ವಿಷಯದಲ್ಲಿ ಇಂದು ಸುಪ್ರೀಂ ಕೋರ್ಟ್​ ತೀರ್ಪು ಪ್ರಕಟಿಸಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (IANS)
author img

By PTI

Published : Nov 13, 2024, 12:29 PM IST

ನವದೆಹಲಿ: ಕಾರ್ಯಾಂಗವು ತಾನೇ ನ್ಯಾಯಾಧೀಶನಾಗುವುದು, ಆರೋಪಿಯೊಬ್ಬನನ್ನು ತಪ್ಪಿತಸ್ಥನೆಂದು ಘೋಷಿಸುವುದು ಮತ್ತು ಆತನ ಮನೆಯನ್ನು ನೆಲಸಮಗೊಳಿಸುವುದನ್ನು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ತ್ವರಿತ 'ಬುಲ್ಡೋಜರ್ ನ್ಯಾಯ'ದ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಬುಲ್ಡೋಜರ್​ ನ್ಯಾಯದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ಆರೋಪಿಗಳು ಅಥವಾ ಅಪರಾಧಿಗಳು ಎಂಬ ಕಾರಣಕ್ಕಾಗಿ ಜನರ ಮನೆಗಳನ್ನು ನೆಲಸಮಗೊಳಿಸುವುದು ಸಂಪೂರ್ಣವಾಗಿ 'ಅಸಂವಿಧಾನಿಕ' ಎಂದು ಹೇಳಿದೆ.

ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಗವಾಯಿ, ಮನೆ ಕಳೆದುಕೊಂಡ ಮಹಿಳೆಯರು ಮತ್ತು ಮಕ್ಕಳನ್ನು ರಾತ್ರಿಯಿಡೀ ಬೀದಿಗಳಲ್ಲಿ ನಿಲ್ಲುವಂತಾಗುವುದು ಸೂಕ್ತವಲ್ಲ ಎಂದು ಹೇಳಿದರು.

ಪೂರ್ವ ಶೋಕಾಸ್ ನೋಟಿಸ್ ಇಲ್ಲದೆ ಮತ್ತು ನೋಟಿಸ್ ನೀಡಿದ ದಿನಾಂಕದಿಂದ 15 ದಿನಗಳ ಒಳಗೆ ಯಾವುದೇ ಮನೆಯನ್ನು ನೆಲಸಮಗೊಳಿಸಕೂಡದು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಅಲ್ಲದೆ ನೆಲಸಮದ ಪ್ರಕ್ರಿಯೆಗಳನ್ನು ವೀಡಿಯೊಗ್ರಾಫ್ ಮಾಡಬೇಕು ಎಂದು ಅದು ನಿರ್ದೇಶಿಸಿದೆ.

ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದರೆ ಅಥವಾ ನ್ಯಾಯಾಲಯದಿಂದ ನೆಲಸಮದ ಆದೇಶವಿದ್ದರೆ ತನ್ನ ಈ ನಿರ್ದೇಶನಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಸಂವಿಧಾನ ಮತ್ತು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಆರೋಪಿಗಳು ಮತ್ತು ಅಪರಾಧಿಗಳಿಗೆ ಕೆಲ ಹಕ್ಕುಗಳು ಮತ್ತು ರಕ್ಷಣೆಗಳಿವೆ ಎಂದು ಅದು ಹೇಳಿದೆ.

ದೇಶದಲ್ಲಿ ಆಸ್ತಿಗಳನ್ನು ನೆಲಸಮಗೊಳಿಸುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇಲಿನಂತೆ ತನ್ನ ತೀರ್ಪನ್ನು ನೀಡಿದೆ.

ಇದನ್ನೂ ಓದಿ : ರಜಾಕಾರರ ದಾಳಿಯಲ್ಲಿ ತಾಯಿ, ಸಹೋದರಿ ಕಳೆದುಕೊಂಡ ಖರ್ಗೆ ಮುಸ್ಲಿಂ ಮತಕ್ಕಾಗಿ ಮೌನ: ಯೋಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.