ಬೆಂಗಳೂರು: ರಾಜಧಾನಿಯ ಈ ಏರಿಯಾಗಳಿಗೆ ಹೋಗುವ ಮುನ್ನ ಸಾರ್ವಜನಿಕರು ಎಚ್ವರ ವಹಿಸಬೇಕಾಗಿದೆ. ಕಳೆದ 10 ದಿನಗಳಿಂದ ಅತೀ ಹೆಚ್ಚು ಸೋಂಕಿತರು ಈ ವಾರ್ಡ್‌ಗಳಲ್ಲಿದ್ದು, 300ಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.
ಇದೀಗ ಈ ಏರಿಯಾಗಳು ಕೂಡ ಕೊರೊನಾ ಹಾಟ್ಸ್ಪಾಟ್ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಮೊದಲು ಬಿಬಿಎಂಪಿ 10 ಹಾಟ್ ಸ್ಪಾಟ್ ಏರಿಯಾಗಳನ್ನ ಗುರುತಿಸಿತ್ತು. ಇದಕ್ಕೆ ಹೊಸದಾಗಿ 10 ಪ್ರದೇಶಗಳನ್ನು ಸೇರ್ಪಡೆ ಮಾಡಿದೆ. ಈ ಮೊದಲು ಗುರುತಿಸಿದ 10 ಪ್ರದೇಶಗಳ ನೆರೆಯ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.
ವಾರ್ಡ್ ನಂಬರ್ ಹಾಗೂ ಹೆಸರು
- 150 - ಬೆಳ್ಳಂದೂರು
- 174 - ಎಚ್ಎಸ್ಆರ್ ಲೇಔಟ್
- 160 - ರಾಜರಾಜೇಶ್ವರಿ ನಗರ
- 7- ಬ್ಯಾಟರಾಯನಪುರ
- 25 - ಹೊರಮಾವು
- 111- ಶಾಂತಿನಗರ
- 151- ಕೋರಮಂಗಲ
- 84 - ಆಡುಗೋಡಿ
- 85- ದೊಡ್ಡನಕ್ಕುಂದಿ
- 197- ವಸಂತ ಪುರ
ಹಾಟ್ಸ್ಪಾಟ್ ಪ್ರದೇಶಗಳನ್ನು ಗುರುತಿಸಿದ ಬೆನ್ನಲ್ಲೇ 2ನೇ ಅಲ್ಲೆಯಲ್ಲಿ ಬೆಂಗಳೂರಿನ ಸ್ಲಂಗಳು ಸುರಕ್ಷಿತವಾಗಿವೆ. ಕಡಿಮೆ ಸೋಂಕಿತರನ್ನು ಹೊಂದಿರುವ ವಾರ್ಡ್ಗಳ ಪಟ್ಟಿಯಲ್ಲಿ ಸ್ಲಂ ಪ್ರದೇಶಗಳು ಹೆಚ್ಚಾಗಿವೆ. ಮೊದಲ ಅಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಸ್ಲಂಗಳು ಇದ್ದ ವಾರ್ಡ್ಗಳಲ್ಲಿ ದಾಖಲಾಗಿದ್ದವು. ಪಾದರಾಯನಪುರ, ರಾಯಪುರ ಹಾಗೂ ಬಾಪೂಜಿ ನಗರದಲ್ಲಿಯೂ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ.
ಕಡಿಮೆ ಸೋಂಕಿತರ ವಾರ್ಡ್‌ಗಳು
ವಾರ್ಡ್ ನಂಬರ್ - ವಾರ್ಡ್ ಹೆಸರು
- 138 - ಛಲವಾದಿ ಪಾಳ್ಯ
- 135 - ಪಾದರಾಯನಪುರ
- 42- ಲಕ್ಷ್ಮಿದೇವಿ ನಗರ
- 137- ರಾಯಪುರ
- 134- ಬಾಪೂಜಿ ನಗರ
- 116- ನೀಲಸಂದ್ರ
- 48-ಮುನೀಶ್ವರ ನಗರ
- 60- ಸಂಘಾಯ್ ಪುರ
ಓದಿ: ಬೆಂಗಳೂರಿನ 6 ಕಡೆಗಳಲ್ಲಿ ಕಂಟೇನ್‌ಮೆಂಟ್ ಝೋನ್.. ಅತಿಹೆಚ್ಚು ಕೋವಿಡ್ ಪ್ರಕರಣಗಳಿರುವ 10 ವಾರ್ಡ್ಗಳಿವು..