ETV Bharat / state

ಬಿಬಿಎಂಪಿಗೆ 1,776.06 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ.. - Bangalore

ವಸತಿ ಕಟ್ಟಡಗಳಿಂದ ತೆರಿಗೆ ಪಾವತಿಯಾಗಿದೆ. ಆದರೆ, ದೊಡ್ಡ ದೊಡ್ಡ ಕೈಗಾರಿಕೆ, ಮಾಲ್​​ಗಳಿಂದಲೇ ತೆರಿಗೆ ಬಾಕಿ ಉಳಿದಿವೆ..

BBMP
ಬಿಬಿಎಂಪಿಗೆ ತೆರಿಗೆ ಸಂಗ್ರಹ
author img

By

Published : Aug 5, 2020, 10:10 PM IST

ಬೆಂಗಳೂರು : ನಗರದಲ್ಲಿ ಎಂಟೂ ವಲಯಗಳಿಂದ ಆಗಸ್ಟ್ 2ನೇ ತಾರೀಖಿನವರೆಗೆ ಒಟ್ಟು 1,776.06 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 150 ಕೋಟಿ ರೂ. ಕಡಿಮೆ ಸಂಗ್ರಹವಾಗಿದೆ.

ಬೊಮ್ಮನಹಳ್ಳಿಯಿಂದ 177.92, ದಾಸರಹಳ್ಳಿಯಿಂದ 39.60, ಪೂರ್ವ ವಲಯ 336.46, ಮಹಾದೇವಪುರ 462.95, ಆರ್​​ಆರ್​​ನಗರ 123.24, ದಕ್ಷಿಣ 299.08, ಪಶ್ಚಿಮ 200.19, ಯಲಹಂಕ ವಲಯದಲ್ಲಿ 136.64 ಕೋಟಿ ರೂ.ಸಂಗ್ರಹವಾಗಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್, ವಸತಿ ಕಟ್ಟಡಗಳಿಂದ ತೆರಿಗೆ ಪಾವತಿಯಾಗಿದೆ. ಆದರೆ, ದೊಡ್ಡ ದೊಡ್ಡ ಕೈಗಾರಿಕೆ, ಮಾಲ್​​ಗಳಿಂದಲೇ ತೆರಿಗೆ ಬಾಕಿ ಉಳಿದಿವೆ ಎಂದರು.

ಯಾರ್ಯಾರು, ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪಾಲಿಕೆಗೂ ಆದಾಯ ಸಂಗ್ರಹ ಅತ್ಯಗತ್ಯವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.