ಬೆಂಗಳೂರು: ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ರೆಡ್ ಝೋನ್ ಆಗಿರುವ ಪಾದರಾಯನಪುರದಲ್ಲಿ ರ‍್ಯಾಂಡಮ್ ಆಗಿ ಕೊರೊನಾ ಟೆಸ್ಟ್ ಮಾಡುತ್ತಿರುವ ಹಿನ್ನೆಲೆ , ಅಲ್ಲಿನ ಸ್ಥಿತಿಗತಿಗಳನ್ನ ಪರಿಶೀಲಿಸುವ ಸಲುವಾಗಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿದ್ದರು.
ಅಲ್ಲದೆ ಸೀಲ್ಡೌನ್ ಆಗಿರುವ ಪಾದರಾಯನಪುರ ಕಂಟೇನ್ಮೆಂಟ್ ವಲಯದಲ್ಲಿರುವುದರಿಂದ ಹೋಂ ಕ್ವಾರಂಟೈನ್ನಲ್ಲಿರುವವರ ಕುರಿತು ಅಗತ್ಯ ಎಚ್ಚರ ವಹಿಸುವಂತೆ ಹಾಗೂ ಅಲ್ಲಿನ ನಿವಾಸಿಗಳಿಗೆ ದಿನಸಿ, ಅಗತ್ಯ ಔಷಧ ಒದಗಿಸಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಇನ್ಸಿಡೆಂಟ್ ಕಮಾಂಡರ್ಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಪಾದರಾಯನಪುರದಲ್ಲಿ ರ‍್ಯಾಂಡಮ್ ಟೆಸ್ಟ್ ನಲ್ಲಿ 68 ಜನರನ್ನು ಚೆಕ್ ಅಪ್ ಮಾಡಲಾಗಿದ್ದು, ಅವರ ವರದಿ ಬರ ಬೇಕಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಆಯುಕ್ತರ ಭೇಟಿ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪಾದರಾಯನಪುರ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಉಪಸ್ಥಿತರಿದ್ದರು.