ETV Bharat / state

ಕೊರೊನಾ​ ಉಲ್ಬಣ.. ತ್ವರಿತ ಚಿಕಿತ್ಸೆಗೆ ಬೆಂಗಳೂರಲ್ಲಿ ಸ್ಟೆಪ್​ಡೌನ್ ಆಸ್ಪತ್ರೆ​, ಟ್ರಾನ್ಸಿಟ್​ ಆಕ್ಸಿಜನ್​ ಸೆಂಟರ್​ - ಬೆಂಗಳೂರು ಕೋವಿಡ್ ಅಪ್ಡೇಟ್

ಕೋವಿಡ್ ರೋಗಿಗಳಿಗೆ ನೆರವಾಗಲು ಪಾಲಿಕೆ ವತಿಯಿಂದ ಸ್ಟೆಪ್ ಡೌನ್ ಆಸ್ಪತ್ರೆ, ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್ ತೆರೆಯುವುದಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು. ಪಾಲಿಕೆ ವ್ಯಾಪ್ತಿಯ ಪ್ರಮುಖ ಖಾಸಗಿ ಕೋವಿಡ್​ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.

BBMP Commissioner visits Covid hospitals
ಕೋವಿಡ್ ನಿರ್ವಹಣೆ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ
author img

By

Published : May 1, 2021, 9:49 AM IST

ಬೆಂಗಳೂರು : ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕೋವಿಡ್‌ ನಿರ್ವಹಣೆಯ ಬಗ್ಗೆ ಪರಿಶೀಲನೆ ‌ನಡೆಸಿದರು.

ಮೊದಲು ಪಾಲಿಕೆ ವ್ಯಾಪ್ತಿಯ ಪ್ರಮುಖ ಕೋವಿಡ್ ಆರೈಕೆ ಕೇಂದ್ರ ಜಯನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯ ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆಯ ಸ್ವ್ಯಾಬ್ ಪರೀಕ್ಷಾ ಲ್ಯಾಬ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ನಗರದ ಪ್ರಮುಖ 50 ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದ್ದು, ಈಗಾಗಲೇ 25 ಆಸ್ಪತ್ರೆಗಳಲ್ಲಿ ಸಹಾಯವಾಣಿ ಡೆಸ್ಕ್ ಕಾರ್ಯಾರಂಭ ಮಾಡಿವೆ. ಉಳಿದೆಡೆ ಅತಿ ಶೀಘ್ರದಲ್ಲಿ ಹೆಲ್ಪ್ ಡೆಸ್ಕ್ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಹೆಲ್ಪ್​ ಡೆಸ್ಕ್​ಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ರೋಗಿಗಳು ಆಸ್ಪತ್ರೆಗೆ ಹೋದ ವೇಳೆ ಅವರ ಸಮಸ್ಯೆ ಹಾಗೂ ಗೊಂದಲಗಳನ್ನು ಈ ಹೆಲ್ಪ್​ ಡೆಸ್ಕ್​ ಪರಿಹರಿಸಲಿದೆ ಎಂದು ಹೇಳಿದರು.

ಅಪೋಲೋ ಆಸ್ಪತ್ರೆ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 47 ಹಾಸಿಗೆಗಳನ್ನು ನೀಡಿದೆ. ಹಾಸಿಗೆ ಕಾಯ್ದಿರಿಸುವುದು, ಆಕ್ಸಿಜನ್ ಲಭ್ಯತೆಯ ಬಗ್ಗೆ ಪರಿಶೀಲನೆ ಮಾಡುವುದು ಮತ್ತು ರೋಗಿಗಳಿಗೆ ಟ್ರಯಾಜಿಂಗ್ ಮಾಡುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ಆಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.

ಸ್ಟೆಪ್ ಡೌನ್ ಆಸ್ಪತ್ರೆ ಪ್ರಾರಂಭ : ಕೋವಿಡ್ ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳ ಜೊತೆಗೂಡಿ ಹೋಟೆಲ್‌ಗಳಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ತೆರಯಲಾಗುತ್ತಿದೆ. ಅದರಂತೆ ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಈಗಾಗಲೇ ಹೋಟೆಲ್‌ನಲ್ಲಿ 39 ಹಾಸಿಗೆ ಸಾಮರ್ಥ್ಯದ ಸ್ಟೆಪ್ ಡೌನ್ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿ ಸ್ಟೆಪ್ ಡೌನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಮೆಲೆ ನಿಗಾವಹಿಸಿ ಟ್ರಯಾಜಿಂಗ್ ಮಾಡುತ್ತಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯ ಸುಧಾರಿಸಿದವರನ್ನು ಸ್ಟೆಪ್ ಡೌನ್ ಆಸ್ಪತ್ರೆಯಲ್ಲಿರಿಸಿದಾಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಶ್ಯಕತೆಯಿರುವವರಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಇನ್ನೂ ಹೆಚ್ಚು ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್ : ಬಿಬಿಎಂಪಿ 11 ಹೆರಿಗೆ ಆಸ್ಪತ್ರೆಗಳನ್ನು ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್‌ಗಳನ್ನಾಗಿ ಮಾಡುತ್ತಿದೆ. ಯಾರಿಗಾದರೂ ಆಕ್ಸಿಜನ್ ಸಮಸ್ಯೆ ಇದ್ದರೆ ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್‌ಗೆ ಬಂದು ಆಕ್ಸಿಜನ್ ಪಡೆಯಬಹುದು. ಆಕ್ಸಿಜನ್ ಪಡೆಯಲು ಬಂದವರಿಗೆ ಆಕ್ಸಿಜನ್ ಅವಶ್ಯಕತೆಯಿದೆಯೇ ಇಲ್ಲವೇ ಎಂಬುದನ್ನು ವೈದ್ಯರು ಟ್ರಯಾಜಿಂಗ್ ಮೂಲಕ ಖಾತರಿಪಡಿಸಿಕೊಂಡು ಆಕ್ಸಿಜನ್ ನೀಡಿ, ಅವಶ್ಯಕತೆಯಿದ್ದರೆ ಆಸ್ಪತ್ರೆ ಹೋಗಲು ತಿಳಿಸುತ್ತಾರೆ. ಈ ನಿಟ್ಟಿನಲ್ಲಿ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆಯಲ್ಲಿ 24 ಹಾಸಿಗೆ ಸಾಮರ್ಥ್ಯವಿದ್ದು, ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್​ಗೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾಲಿಕೆ ವ್ಯಾಪ್ತಿಯ 12 ಕೋವಿಡ್ ಆರೈಕೆ ಕೇಂದ್ರಗಳಲ್ಲಿ 2,100 ಹಾಸಿಗೆಗಳಿದ್ದು, 800 ಹಾಸಿಗೆ ಭರ್ತಿಯಾಗಿವೆ. ಇನ್ನೂ 1,200 ಹಾಸಿಗೆಗಳು ಲಭ್ಯವಿದೆ. ಎಲ್ಲಾ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಶೇ. 20 ರಷ್ಟು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದು. ಇದಲ್ಲದೆ ಅಪಾರ್ಟ್​ಮೆಂಟ್​ಗಳಲ್ಲಿ ಕೂಡ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಸಂಬಂಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ ನಡೆಸಲಾಗುವುದು. ಇದಲ್ಲದೆ ಟ್ರಯಾಜಿಂಗ್ ಸೆಂಟರ್ ಮಾಡಲಾಗುತ್ತಿದ್ದು, ಯಾರಾದರು ನೇರವಾಗಿ ದಾಖಲಾಗಲು ಬಂದರೆ ಅವರನ್ನು ವೈದ್ಯರು ಟ್ರಯಾಜಿಂಗ್ ಮಾಡಿ ಆರೈಕೆ ಪಡೆಯುವ ಅವಶ್ಯಕತೆಯಿದ್ದರೆ ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ಕಳುಹಿಸುತ್ತಾರೆ. ಯಾವುದೇ ತೊಂದರೆಯಿಲ್ಲವಾದರೆ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ಹೇಳಿದರು.

ಓಡಿ : ಸದ್ದಿಲ್ಲದಂತೆ ಸಾಂತ್ವನ ಕೇಂದ್ರಗಳಿಗೆ ಸಿಎಂ ಬೀಗ ಜಡಿಸಿದ್ದಾರೆ: ಹೆಚ್​ಡಿಕೆ

ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ 20,000 ಕೋವಿಡ್ ಸ್ವಾಬ್ ಪರೀಕ್ಷೆ ಮಾಡುವ ಸಾಮರ್ಥ್ಯವಿದ್ದು, ದಿನಕ್ಕೆ ಸುಮಾರು 6,000 ಸ್ವಾಬ್ ಪರೀಕ್ಷೆ ಮಾಡುತ್ತಿದ್ದಾರೆ. ಕೋವಿಡ್ ಟೆಸ್ಟ್ ವೇಳೆ ಮಾಹಿತಿ ಅಪ್ಲೋಡ್ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಎಲ್ಲಾ ಸ್ವಯಂ ಚಾಲಿತವಾಗಿ ಕಾರ್ಯರ್ವಹಿಸಲಿದ್ದು, ತ್ವರಿತವಾಗಿ ಫಲಿತಾಂಶ ಬರುವ ವ್ಯವಸ್ಥೆಯಿದೆ ಎಂದರು.

ವಲಯ ಆಯುಕ್ತೆ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಗೌರವ್​ ಗುಪ್ತಾಗೆ ಸಾಥ್ ನೀಡಿದರು.

ಟ್ರಾನ್ಸಿಟ್ ಆಕ್ಸಿಜನ್ ಸೆಂಟರ್​ಗಳು :

1. ರಾಜಾಜಿನಗರ ಹೆರಿಗೆ ಆಸ್ಪತ್ರೆ
2. ಕಾವೇರಿಪುರ ಹೆರಿಗೆ ಆಸ್ಪತ್ರೆ
3. ಗವಿಪುರಂ ಗುಟ್ಟಹಳ್ಳಿ ರೆಫರಲ್ ಹೆರಿಗೆ ಆಸ್ಪತ್ರೆ
4. ಆಜಾದ್ ನಗರ ಹೆರಿಗೆ ಆಸ್ಪತ್ರೆ
5. ಪೊಬ್ಬತ್ತಿ ಹೆರಿಗೆ ಆಸ್ಪತ್ರೆ
6. ಮಾಗಡಿ ರಸ್ತೆ ಹೆರಿಗೆ ಆಸ್ಪತ್ರೆ
7. ಆಡುಗೋಡಿ ಹೆರಿಗೆ ಆಸ್ಪತ್ರೆ
8. ತಾವರೆಕೆರೆ ಹೆರಿಗೆ ಆಸ್ಪತ್ರೆ
9. ಹೊಸಕೆರೆಹಳ್ಳಿ ರೆಫರಲ್ ಆಸ್ಪತ್ರೆ
10. ಶಾಂತಿನಗರ ಹೆರಿಗೆ ಆಸ್ಪತ್ರೆ
11. ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.