ಬೆಂಗಳೂರು: ಕೊರೊನಾ ನಡುವೆ ಸಾಮೂಹಿಕವಾಗಿ ಗಣೇಶ ಹಬ್ಬ ಆಚರಿಸಬೇಕೇ?, ಬೇಡವೇ? ಎಂಬ ಗೊಂದಲ ಬೆಂಗಳೂರಿಗರಲ್ಲಿ ಶುರುವಾಗಿದೆ. ಈ ಮಧ್ಯೆ ಸಾರ್ವಜನಿಕವಾಗಿ ಸೇರಿ ಗಣೇಶ ಹಬ್ಬವನ್ನು ಆಚರಿಸುವುದನ್ನು ಬೃಹತ್ ಬೆಂಗಳೂರು ನಗರ ಪಾಲಿಕೆ ನಿರ್ಬಂಧಿಸಿದೆ.
ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ನಗರದಲ್ಲಿ ಈ ಸಲ ಸಾಮೂಹಿಕ ಗಣೇಶ ಹಬ್ಬ ಆಚರಣೆ ಇಲ್ಲ. ಅಲ್ಲದೇ ಈ ನಿರ್ಣಯದಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ. ಗಣೇಶ ಮೂರ್ತಿ ತಯಾರಿಸುವವರು ಈ ವರ್ಷ ಮಾರಾಟವಾಗದಿರುವ ಮೂರ್ತಿಗಳನ್ನು ಮುಂದಿನ ವರ್ಷ ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ.

ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದ ಕೆರೆಗಳು ಮತ್ತು ಪುಷ್ಕರಣಿಗಳನ್ನು ಮುಚ್ಚಲಾಗಿದೆ.