ETV Bharat / state

ರಸ್ತೆ, ರಾಜಕಾಲುವೆ ದುರಸ್ತಿ ಕಾಮಗಾರಿ ತಪಾಸಣೆ ಮಾಡಿದ ಆಯುಕ್ತ ಮಂಜುನಾಥ್​ ಪ್ರಸಾದ್​

author img

By

Published : Sep 16, 2020, 10:58 PM IST

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ದಾಸರಹಳ್ಳಿ ವಲಯ ನೆಲಗದನ ಹಳ್ಳಿ ಬಳಿ ಹಳೆಯ ರಾಜಕಾಲುವೆ ಸಣ್ಣದಾಗಿದ್ದ ಪರಿಣಾಮ ಸುಮಾರು 1,000 ಮನೆಗಳಿಗೆ ನೀರು ನುಗ್ಗಿತ್ತು. ಇಂದು ಪಾಲಿಕೆ ಆಯುಕ್ತ ಮಂಜುನಾಥ್​​ ಪ್ರಸಾದ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

drain incepction
ಮಂಜುನಾಥ್​ ಪ್ರಸಾದ್​

ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ದಾಸರಹಳ್ಳಿ ವಲಯ ನೆಲಗದನ ಹಳ್ಳಿ ಬಳಿ ಹಳೆಯ ರಾಜಕಾಲುವೆ ಸಣ್ಣದಾಗಿದ್ದ ಪರಿಣಾಮ ಸುಮಾರು 1,000 ಮನೆಗಳಿಗೆ ನೀರು ನುಗ್ಗಿ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಪಾಲಿಕೆ ಆಯುಕ್ತ ಮಂಜುನಾಥ್​​ ಪ್ರಸಾದ್ ಇಂದು​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ವ್ಯಾಪ್ತಿಯ ನೆಲಗದನಹಳ್ಳಿ ಬಳಿ ರಸ್ತೆ ಹಾಗೂ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಆಯುಕ್ತರು ಪರಿಶೀಲಿಸಿದರು. ರಸ್ತೆ ಮೂಲಕ ಕಾಲುವೆ ಹಾದುಹೋಗಿದ್ದು, ಈ ಹಿಂದೆ ಸಣ್ಣದಾದ ಕಾಲುವೆಯಿದ್ದ ಪರಿಣಾಮ, ಕಾಲುವೆಯಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿದೆ.

ಈ ಸಂಬಂಧ ಕೂಡಲೆ ರಸ್ತೆ ಮೂಲಕ ಹಾದು ಹೋಗುವ ಕಾಲುವೆಯನ್ನು ಅಗಲ ಮಾಡಬೇಕು. ಜೊತೆಗೆ ಒತ್ತುವರಿ ಮಾಡಿಕೊಂಡಿರುವುದನ್ನು ಭೂಮಾಪಕರ ಮೂಲಕ ಸರ್ವೇ ನಡೆಸಿ ಮಾರ್ಕಿಂಗ್ ಮಾಡಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನೀರು ನುಗ್ಗಿರುವ ಸ್ಥಳದಲ್ಲಿ ಬಡವರ್ಗದ ಜನರಿದ್ದಾರೆ. ವಲಯ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದಲ್ಲಿ ಅಂತವರಿಗೆ ಕಾನೂನಿನ ಪ್ರಕಾರ ಪರಿಶೀಲನೆ ನಡೆಸಿ ಪರಿಹಾರ ನೀಡಲು ಕ್ರಮ ವಹಿಸಲಾಗುತ್ತದೆ. ದಾಸರಹಳ್ಳಿ ವಲಯ ರಾಷ್ಟ್ರೀಯ ಹೆದ್ದಾರಿಯಿಂದ ನೆಲಗದಗನಹಳ್ಳಿ ಮುಖ್ಯರಸ್ತೆ(ಅಂದರಹಳ್ಳಿ ರಸ್ತೆ) ಸುಮಾರು 2.5 ಕಿ.ಮೀ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕೆಲವರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ(TDR) ಪತ್ರ ನೀಡಲಾಗಿದೆ. ಇನ್ನು ಕೆಲವರಿಗೆ ನೀಡಬೇಕಿದೆ. ಕೂಡಲೆ ಸಮಸ್ಯೆ ಬಗೆಹರಿಸಿ ರಸ್ತೆ ಅಗಲೀಕರಣ ಕೆಲಸ ಪ್ರಾರಂಭಿಸುವಂತೆ ರಸ್ತೆ ಮೂಲಭೂತ ಸೌಕರ್ಯ ವಿಭಾಗಗಕ್ಕೆ ಆಯುಕ್ತರು ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.