ETV Bharat / state

ಆಸ್ತಿ ತೆರಿಗೆ ಪರಿಶೀಲನೆಗೆ ಅಧಿಕಾರಿಗಳಿಂದ ಉದಾಸೀನ ಧೋರಣೆ: ಬಿಬಿಎಂಪಿ ಆಯುಕ್ತ

author img

By

Published : Nov 8, 2019, 6:39 PM IST

ಬಿಬಿಎಂಪಿ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್ಎಎಸ್) 2008ರಿಂದ ಜಾರಿಗೆ ಬಂದರೂ ಕೂಡ ಇದರ ಪರಿಶೀಲನೆ ಮಾಡುವಲ್ಲಿ ಅಧಿಕಾರಿಗಳು ಉದಾಸೀನ ಧೋರಣೆ ತೋರಿದ್ದರು ಎಂದು ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್ ತಿಳಿಸಿದರು.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್ಎಎಸ್)ಯು 2008ರಿಂದ ಜಾರಿಗೆ ಬಂದರು ಕೂಡ ಇದರ ಪರಿಶೀಲನೆ ಮಾಡುವಲ್ಲಿ ಅಧಿಕಾರಿಗಳು ಉದಾಸೀನ ಧೋರಣೆ ತೋರಿದ್ದರು ಎಂದು ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್ ತಿಳಿಸಿದರು.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ನಗರ ಬೆಳೆಯುತ್ತಿದ್ದರೂ ಕೂಡ ಆದಾಯ ಮಾತ್ರ ಬಿಬಿಎಂಪಿ ಆದಾಯ ವೃದ್ಧಿಸುತ್ತಿಲ್ಲ. ಎಸ್ಎಎಸ್​ನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ. ನಿಯಮಗಳನ್ನು ಬಿಗಿಗೊಳಿಸುತ್ತೇವೆಂದು ತಿಳಿಸಿದರು.

ಟೋಟಲ್ ಸ್ಟೇಷನ್ ಸರ್ವೆಯ ವರದಿಯಂತೆ ತೆರಿಗೆ ಹಾಗೂ ದಂಡ ವಸೂಲಿ ಮಾಡದ, ತಪ್ಪಿತಸ್ಥ ಅಧಿಕಾರಿಗಳು ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯ ಹಣಕಾಸು ವಿಶೇಷ ಆಯುಕ್ತ ಲೋಕೇಶ್ ನೇತೃತ್ವದ ಸಮಿತಿಯು ಈ ಬಗ್ಗೆ ಪರಿಶೀಲಿಲನೆ ನಡೆಸುತ್ತಿದೆ ಎಂದರು.
ಆಸ್ತಿಯ ಮಾಲೀಕರು ತಪ್ಪು ಆಸ್ತಿ ಘೋಷಿಸಿಕೊಂಡಿದ್ದರೆ ಅದನ್ನು ಪರಿಶೀಲಿಸುವ ವ್ಯವಸ್ಥೆ ಪಾಲಿಕೆಯಲ್ಲಿಲ್ಲ. ಟೋಟಲ್ ಸ್ಟೇಷನ್ ಸರ್ವೆಯ ವರದಿಯಂತೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪೂರ್ವ ವಲಯದ ಜಂಟಿ ಆಯುಕ್ತ ಜೆ.ಸಿ. ರವೀಂದ್ರ ಲೋಪವೆಸಗಿದ್ದಾರೆ ಎಂದರು.

2008ರಲ್ಲಿ ಎಸ್ಎಎಸ್ ಬಂದ ಬಳಿಕ ಬದಲಾವಣೆ ಮಾಡಬೇಕಿತ್ತು, ಆದರೆ ಅದು ಆಗಿಲ್ಲ. ಎಸ್ಎಎಸ್​ನಲ್ಲಿ ಪುನರ್ ಪರಿಶೀಲಿಸುವ ಅವಕಾಶ ಇದ್ರೂ, ಪಾಲಿಕೆಯಿಂದ ಅದು ನಡೆಸದೇ ಇರೋದು ತಪ್ಪಾಗಿದೆ. ಟೋಟಲ್ ಸ್ಟೇಷನ್ ಸರ್ವೆಯಲ್ಲಿ 800ಕೋಟಿ ರೂ. ಹೆಚ್ಚುವರಿ ಆದಾಯದ ನಿರೀಕ್ಷೆಯಿತ್ತು, ಆದರೆ ವ್ಯವಸ್ಥೆಯ ಲೋಪದಿಂದ ಅಷ್ಟು ಆದಾಯ ಸಂಗ್ರಹವಾಗಿಲ್ಲ. ಇನ್ನು ಎಸ್​ಎಎಸ್​ನ್ನು ಬಿಗಿ ಮಾಡಿ ವಾಣಿಜ್ಯ ಹಾಗೂ ವಸತಿ ಕಟ್ಟಡಗಳ, ಆಸ್ತಿ ತೆರಿಗೆ ಪಾವತಿದಾರರ ಮೇಲೆ ಕಣ್ಣಿಡಲಾಗುವುದು ಎಂದು ತಿಳಿಸಿದರು.

Intro:ಆಸ್ತಿಮಾಲೀಕರೆ ಎಚ್ಚರ- ಬಿಬಿಎಂಪಿ ತೆರಿಗೆ ವಸೂಲಿ ಕ್ರಮ ಬಿಗಿಯಾಗುತ್ತಿದೆ!

ಬೆಂಗಳೂರು- ನಗರಾದ್ಯಂತ ಅನೇಕ ಆಸ್ತಿಮಾಲೀಕರು ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿತೆರಿಗೆ ವ್ಯವಸ್ಥೆ (SAS)ಯಡಿ ತಪ್ಪಾಗಿ ಆಸ್ತಿ ವಿವರ ಸಲ್ಲಿಕೆ ಮಾಡಿ, ಪಾಲಿಕೆಗೆ ವಂಚಿಸುತ್ತಿರೋದು ಬೆಳಕಿಗೆ ಬಂದಿದೆ.
ಎಸ್ಎಎಸ್ ಸ್ಕೀಮ್ 2008 ರಿಂದ ಜಾರಿಗೆ ಬಂದರೂ, ಇದರ ಪರಿಶೀಲನೆ ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ಉದಾಸೀನ ತೋರಿದ್ದರು. ಇದರ ಪರಿಣಾಮ ನಗರ ಬೆಳೆಯುತ್ತಿದ್ದರೂ, ನಗರದ ಆದಾಯ ಮಾತ್ರ ಬೆಳೆಯುತ್ತಿಲ್ಲ. ಹೀಗಾಗಿ ಎಸ್ ಎಎಸ್ ಸ್ಕೀಮ್ ನ ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ, ನಿಯಮಗಳನ್ನು ಬಿಗಿಗೊಳಿಸುತ್ತೇವೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಇಂದಿನ ಕೌನ್ಸಿಲ್ ಸಭೆಯಲ್ಲಿ ತಿಳಿಸಿದರು.
ಇನ್ನು ಟೋಟಲ್ ಸ್ಟೇಷನ್ ಸರ್ವೇ ವರದಿಯಂತೆ, ತೆರಿಗೆ ಹಾಗೂ ದಂಡ ವಸೂಲಿ ಮಾಡದ, ಪೂರ್ವ ವಲಯ ಜಂಟಿ ಆಯುಕ್ತ ಜೆಸಿ ರವೀಂದ್ರ ನನ್ನ ಪಾಲಿಕೆ ಅಧಿಕಾರದಿಂದ ಮಾತೃ ಇಲಾಖೆಯಾದ ಕೋ ಆಪರೇಟಿವ್ ಸೊಸೈಟಿಗೆ ಕಳಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳು ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳಲಾಗುವುದು. ಸಧ್ಯ ಹಣಕಾಸು ವಿಶೇಷ ಆಯುಕ್ತ ಲೋಕೇಶ್ ನೇತೃತ್ವದ ಸಮಿತಿ ಈ ಬಗ್ಗೆ ಪರಿಶೀಲಿಸುತ್ತಿದೆ ಎಂದರು.
ಇನ್ನು ಬೊಮ್ಮನಹಳ್ಳಿ ಅಧಿಕಾರಿ ವಿರುದ್ಧವೂ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್ ಎಎಸ್ ಸ್ಕೀಮ್ 2008 ರಲ್ಲಿ ಜಾರಿಗೆ ಬಂದರೂ,
ಆಸ್ತಿ ಮಾಲೀಕರು ತಪ್ಪು ಆಸ್ತಿ ಘೋಷಿಸಿಕೊಂಡಿದ್ದರೆ ಪರಿಶೀಲಿಸುವ ವ್ಯವಸ್ಥೆ ಪಾಲಿಕೆಯಲ್ಲಿಲ್ಲ. ಟೋಟಲ್ ಸ್ಟೇಷನ್ ಸರ್ವೇಯ ವರದಿಯಂತೆ ಆಸ್ತಿತೆರಿಗೆ ಸಂಗ್ರಹದಲ್ಲಿ ಜಂಟಿ ಆಯುಕ್ತರು ಲೋಪವೆಸಗಿರೋದು ನಿಜ. ಪೂರ್ವ ವಲಯ ಅಷ್ಟೇ ಅಲ್ಲ, ಎಲ್ಲಾ ವಲಯಗಳಲ್ಲಿ ಲೋಪಕಂಡುಬಂದಿದೆ..ಜಂಟಿಆಯುಕ್ತರಿಗೆ ಮೇಲ್ಮನವಿ ಹೋಗುವ ಕಾನೂನು ಇಲ್ಲ..2007 ರಲ್ಲಿ ಜಯರಾಜ್ ಆಯುಕ್ತರ ಹೇಳಿಕೆಯಂತೆಯೇ ನಡೆದುಕೊಂಡು ಬಂದಿದೆ. 2008 ರಲ್ಲಿ ಎಸ್ಎಎಸ್ ಸ್ಕೀಮ್ ಬಂದ ಬಳಿಕ ಬದಲಾವಣೆ ಮಾಡಬೇಕಿತ್ತು.ಆದ್ರೆ ಆಗಿಲ್ಲ. SAS ಸ್ಕೀಮ್ ನಲ್ಲಿ ಪುನರ್ ಪರಿಶೀಲಿಸುವ ಅವಕಾಶ ಇದ್ರೂ, ಪಾಲಿಕೆಯಿಂದ ಅದು ನಡೆಸದೇ ಇರೋದು ತಪ್ಪಾಗಿದೆ. ಟೋಟಲ್ ಸ್ಟೇಷನ್ ಸರ್ವೇಯಲ್ಲಿ 800 ಕೋಟಿ ರೂ ಹೆಚ್ಚುವರಿ ಆದಾಯದ ನಿರೀಕ್ಷೆಯಿತ್ತು.
ಆದ್ರೆ ವ್ಯವಸ್ಥೆಯ ಲೋಪದಿಂದ ಇಷ್ಟು ಆದಾಯ ಸಂಗ್ರಹವಾಗಿಲ್ಲ. ಇನ್ನು ಈ ಸ್ಕೀಮ್ ನ ಬಿಗಿ ಮಾಡಿ, ಎಲ್ಲಾ ವಾಣಿಜ್ಯ ಹಾಗೂ ವಸತಿ ಕಟ್ಟಡಗಳ ಆಸ್ತಿತೆರಿಗೆ ಪಾವತಿದಾರರ ಮೇಲೆ ಕಣ್ಣಿಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಸೌಮ್ಯಶ್ರೀ
Kn_bng_03_total_station_survey_7202707Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.