ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್ಗಳನ್ನು ನೇಮಿಸಿದ ಬಳಿಕ ಕಾನೂನು ಪಾಲನೆ ಮಾಡುವ ನಾಗರಿಕರ ಮೇಲೆ ಕಟ್ಟುನಿಟ್ಟಾಗಿ ದಂಡ ವಿಧಿಸಲಾಗುತ್ತಿದೆ.
ಇನ್ನು ಜಾರಿಯಾದ ನಿಯಮದಲ್ಲಿ ಸೆಪ್ಟೆಂಬರ್ 1 ರಿಂದ 24 ರವರೆಗೆ 9,95,255 ರೂ.ಗಳಷ್ಟು ದಂಡ ವಸೂಲಾಗಿದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ಬ್ಯಾನ್ ಆಗಿದ್ದರೂ ಕೂಡಾ, ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ನಾಗರಿಕರನ್ನು ಹಿಡಿದು ಮಾರ್ಷಲ್ಸ್ ಫೈನ್ ಹಾಕಿದ್ದಾರೆ.
ಪ್ಲಾಸ್ಟಿಕ್ ಬಳಕೆದಾರರಿಗೆ 5,47,795 ರೂ, ಕಸ ಎಲ್ಲೆಂದರಲ್ಲಿ ಎಸೆದವರಿಗೆ 4,16,180 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಘನತ್ಯಾಜ್ಯ ನಿರ್ವಹಣಾ ವಿಶೇಷ ಆಯುಕ್ತರಾದ ರಂದೀಪ್ ತಿಳಿಸಿದರು.