ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ ಜನರಿಂದ ಕಳೆದ ನಾಲ್ಕು ತಿಂಗಳಲ್ಲಿ ಬಿಬಿಎಂಪಿ ಮೂರು ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ.
ಜೂನ್ 9 ರಿಂದ ಆರಂಭವಾದ ದಂಡ ಪ್ರಯೋಗ, ಅಕ್ಟೋಬರ್ 8ರವರೆಗೆ ನಿಯಮ ಉಲ್ಲಂಘಿಸಿದ ಒಟ್ಟು 1,42,692 ಜನರಿಂದ 3,05,37,380.65 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಇದೇ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ 170 ಸಂಸ್ಥೆಗಳನ್ನು ಸೀಲ್ ಮಾಡಲಾಗಿದೆ.
ಈ ಹಿಂದೆ ಮಾಸ್ಕ್ ದಂಡ 100 ರೂಪಾಯಿ ಇದ್ದು, ಬಳಿಕ ಅಕ್ಟೋಬರ್ 2 ರಿಂದ 7ರವರೆಗೆ 1,000 ರುಪಾಯಿ ದಂಡ ವಿಧಿಸಲಾಗುತ್ತಿತ್ತು. ಇದೀಗ ಮಾಸ್ಕ್ ದಂಡವನ್ನು 250 ರೂಪಾಯಿಗೆ ಇಳಿಸಲಾಗಿದೆ. ಬಿಬಿಎಂಪಿ ಮಾರ್ಷಲ್ಸ್ ಹಾಗೂ ಪೊಲೀಸರು ಕೋವಿಡ್ ನಿಯಮ ಮೀರುವ ಜನರಿಗೆ ದಂಡ ಹಾಕುತ್ತಿದ್ದಾರೆ.