ಬೆಂಗಳೂರು: ಇದೇ ವಾರಾಂತ್ಯದಲ್ಲಿ ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡುತ್ತೆ. ಕೆಲ ಷರತ್ತುಗಳೊಂದಿಗೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದರಿಂದ ಸಂಘ ಸಂಸ್ಥೆಗಳು ತೃಪ್ತಿಯಾಗಿವೆ. ಪಾಲಿಕೆಯ 198 ವಾರ್ಡ್ಗಳಲ್ಲಿ ಒಂದೊಂದು ಜಾಗ ಗುರುತಿಸಿದ್ದು, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.
ಗಣೇಶೋತ್ಸವಕ್ಕೆ ಅನುಮತಿ ನೀಡಿರುವ ಹಿನ್ನೆಲೆ ಪೊಲೀಸ್, ಕಂದಾಯ, ಅಗ್ನಿಶಾಮಕ ಅಧಿಕಾರಿಗಳೊಂದಿಗೆ ಸಮಿತಿ ರಚಿಸುವಂತೆ ವಲಯ ಜಂಟಿ ಆಯುಕ್ತರಿಗೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ ನಿಷೇಧಿತ ಪಿಒಪಿ ಮೂರ್ತಿ ತಯಾರಿಸಿದರೆ ದಂಡ ವಿಧಿಸಿ, ಪ್ರಕರಣ ದಾಖಲಿಸುವಂತೆ ಬಿಬಿಎಂಪಿ ಸೂಚಿಸಿದೆ.
![celebrate Ganeshotsav in 198 public places, BBMP approved to celebrate Ganeshotsav in 198 public places, Ganeshotsav 2020, Ganeshotsav 2020 news, BBMP Ganeshotsav 2020 news, 198 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ, 198 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಅನುಮತಿ, 198 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಬಿಬಿಎಂಪಿ ಅನುಮತಿ, ಗಣೇಶೋತ್ಸವ, ಗಣೇಶೋತ್ಸವ 2020, ಗಣೇಶೋತ್ಸವ 2020 ಸುದ್ದಿ, ಬಿಬಿಎಂಪಿ ಗಣೇಶೋತ್ಸವ 2020 ಸುದ್ದಿ,](https://etvbharatimages.akamaized.net/etvbharat/prod-images/kn-bng-05-ganeshothsava-bbmp-7202707_19082020175705_1908f_1597840025_194.jpg)
ಗಣೇಶೋತ್ಸವ ಆಚರಣೆ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಾರ್ವಜನಿಕ ಸ್ಥಳಗಳಲ್ಲಿ ವಾರ್ಡ್ಗೆ ಒಂದೇ ಕಡೆ ಗಣೇಶ ಪ್ರತಿಷ್ಠಾಪನೆ ಮಾಡುವುದು ಹಾಗೂ ಆ ಗಣೇಶ ಮೂರ್ತಿ ನಾಲ್ಕು ಅಡಿಗಿಂತ ಎತ್ತರ ಇರಬಾರದು ಎಂಬ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ 198 ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲು ಪಾಲಿಕೆ ಕಡೆಯಿಂದ ವ್ಯವಸ್ಥೆ ಮಾಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ. ವಾರ್ಡ್ಗೆ ಒಂದರಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಪೂಜೆಯಲ್ಲಿ 20ಕ್ಕಿಂತ ಹೆಚ್ಚು ಜನ ಸೇರಬಾರದು, ಸಾಮಾಜಿಕ ಅಂತರ ಕಾಪಾಡಬೇಕು, ಪ್ರತಿದಿನ ಸ್ಯಾನಿಟೈಸೇಷನ್ ಮಾಡಬೇಕು. ಅಲ್ಲದೆ ಯಾವುದೇ ಮನರಂಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಆಸ್ಪದ ಇಲ್ಲವೆಂದು ತಿಳಿಸಿದರು.
![celebrate Ganeshotsav in 198 public places, BBMP approved to celebrate Ganeshotsav in 198 public places, Ganeshotsav 2020, Ganeshotsav 2020 news, BBMP Ganeshotsav 2020 news, 198 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ, 198 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಅನುಮತಿ, 198 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕೆ ಬಿಬಿಎಂಪಿ ಅನುಮತಿ, ಗಣೇಶೋತ್ಸವ, ಗಣೇಶೋತ್ಸವ 2020, ಗಣೇಶೋತ್ಸವ 2020 ಸುದ್ದಿ, ಬಿಬಿಎಂಪಿ ಗಣೇಶೋತ್ಸವ 2020 ಸುದ್ದಿ,](https://etvbharatimages.akamaized.net/etvbharat/prod-images/kn-bng-05-ganeshothsava-bbmp-7202707_19082020175705_1908f_1597840025_605.jpg)
ಈ ನಿರ್ದೇಶನಗಳನ್ನು ಅನುಷ್ಠಾನ ಮಾಡಲು ಬಿಬಿಎಂಪಿ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರು ಸೇರಿ ಕ್ರಮ ಕೈಗೊಳ್ಳುತ್ತೇವೆ. ಅನುಮತಿ ನೀಡಲು ಪ್ರತಿ ವಲಯದ ಜಂಟಿ ಆಯುಕ್ತರು ಹಾಗೂ ಡಿಸಿಪಿಗಳಲ್ಲಿ ಅರ್ಜಿ ಸಲ್ಲಿಸಬೇಕು. ಅವರು ಜಂಟಿಯಾಗಿ ಪರಿಶೀಲಿಸಿ ಅನುಮತಿ ನೀಡುತ್ತಾರೆ.
ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿ ತಲಾ 44 ವಾರ್ಡ್‌ಗಳಿವೆ. ಬೇರೆ ಕಡೆ ಕಡಿಮೆ ಇದೆ. ಪಾಲಿಕೆಯ ಮೈದಾನಗಳ ಅನುಮತಿ, ಪೊಲೀಸ್ ಅನುಮತಿ, ಅಗ್ನಿಶಾಮಕ ದಳದ ಅನುಮತಿಯೂ ಒಂದೇ ಕಡೆ ಕೊಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಇಡುವಂತಹ ಗಣೇಶನನ್ನು ಮೂರು ದಿನದೊಳಗೆ ನಿಮಜ್ಜನ ಮಾಡಬೇಕು. ವಿಸರ್ಜನೆಯ ಜಾಗವನ್ನು ಕೂಡಾ ಜಂಟಿ ಆಯುಕ್ತರು, ಪೊಲೀಸ್ ಡಿಸಿಪಿಯವರು ಅನುಮತಿ ಪತ್ರದಲ್ಲೇ ತಿಳಿಸಲಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ರು.
ಮನೆಗಳಲ್ಲಿ ಕೂರಿಸುವ ಗಣಪತಿಯನ್ನು ಮನೆಯಲ್ಲೇ ನಿಮಜ್ಜನ ಮಾಡಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳ 198 ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ಮಾತ್ರ ಪಾಲಿಕೆ ಕ್ರಮ ಕೈಗೊಳ್ಳಲಿದ್ದು, ಕೆರೆ ಅಥವಾ ಟ್ಯಾಂಕರ್ ಮೂಲಕ ಈ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.