ETV Bharat / state

ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಅಬ್ಬರ: ಸೋಂಕು ಪರೀಕ್ಷೆಗೆ 1,805 ಮಂದಿ ನಿಯೋಜನೆ! - ಮಹಾಮಾರಿ ಕೊರೊನಾ

ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿರುವ ಕಾರಣ ಪ್ರತಿ ದಿನ ಹೆಚ್ಚಿನ ಟೆಸ್ಟ್​ ನಡೆಸಲು ಬಿಬಿಎಂಪಿ ಮತ್ತಷ್ಟು ಜನರ ನಿಯೋಜನೆ ಮಾಡಿದೆ.

BBMP
BBMP
author img

By

Published : Aug 13, 2020, 1:56 AM IST

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೀಗಾಗಿ ಹೆಚ್ಚಿನ ಟೆಸ್ಟ್​ ನಡೆಸುವ ಉದ್ದೇಶದಿಂದ 1,805 ಮಂದಿ ನಿಯೋಜನೆ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ‍್ಯಾಪಿಡ್ ಆಂಟಿಜನ್ ಟೆಸ್ಟ್​​ ಹಾಗೂ ಆರ್​ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣ ಅತಿ ಕಡಿಮೆಯಾಗುತ್ತಿದೆ. ನಿಗಧಿತ ಗುರಿ ಸಾಧಿಸಲು ಕೋವಿಡ್ ಸೋಂಕು ಪರೀಕ್ಷೆಗಳನ್ನು ಹೆಚ್ಚು ಮಾಡಬೇಕೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

BBMP
ಸೋಂಕು ಪರೀಕ್ಷೆ ಮಾಡಲು 1,805 ಮಂದಿ ನಿಯೋಜನೆ!

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ ವಾರ್ಡ್ ವಾರು ಪ್ರತಿ ದಿನ ಶೇಕಡಾ ನೂರರಷ್ಟು (60-ಆರ್​​​ಟಿಟಿಸಿಆರ್, 40-ಆಂಟಿಜನ್​​) ಪರೀಕ್ಷೆ ನಡೆಸಲು ಸಿಬ್ಬಂದಿಗಳನ್ನ ಬಿಬಿಎಂಪಿ ನಿಯೋಜನೆ ಮಾಡಿದೆ. ನಗರದ ಎಂಟು ವಲಯಗಳಲ್ಲಿ ಒಟ್ಟು 1,805 ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗಾಗಿ ನಿಯೋಜಿಸಲಾಗಿದೆ. ಒಟ್ಟು 198 ವಾರ್ಡ್​​ಗಳ 141 ನಗರ ಪ್ರಾಥಮಿಕ ಕೇಂದ್ರಗಳಲ್ಲಿ 297 ಮೆಡಿಕಲ್ ಆಫೀಸರ್ಸ್, ನರ್ಸ್ ಸಿಬ್ಬಂದಿ 199 ಮಂದಿ, ಗಂಟಲು ದ್ರವ ಸಂಗ್ರಹಕ್ಕೆ 137 ಮಂದಿ, ಫಾರ್ಮಾಸಿಸ್ಟ್ 132 ಮಂದಿ, ಎನ್​​ಎಸ್​ಎಸ್​ ತಂಡದ 120 ಮಂದಿ ಸೇರಿದಂತೆ ಒಟ್ಟು 1,805 ಮಂದಿಯನ್ನು ನಿಯೋಜಿಸಲಾಗಿದೆ.

ಸಿಬ್ಬಂದಿಗಳ ಕೊರತೆ ಉಂಟಾದರೆ ಆಶಾ ಕಾರ್ಯಕರ್ತೆಯರ ನೆರವು ಪಡೆದು ತರಬೇತಿ ನೀಡಲು ತಿಳಿಸಲಾಗಿದೆ. ಇದರ ಜತೆಗೆ ಪ್ರತಿ ಪರೀಕ್ಷೆಗೆ ರೂ.30 ರಂತೆ ನೀಡಿ, ಹೆಚ್ಚಿನ ಪರೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ. ಈ ಸಿದ್ಧತೆಯನ್ನು ಒಂದು ವಾರ ಮೊದಲೇ ಕ್ರಿಯಾಯೋಜನೆ ಮಾಡಿ, ವಾರ್ಡ್​ಗಳ ಎಲ್ಲ ವ್ಯಾಪ್ತಿಗೂ ಒಳಪಡುವಂತೆ ಪ್ರಾಥಮಿಕ ಕೇಂದ್ರ ತಂಡ, ಮೊಬೈಲ್ ತಂಡ, ಸ್ಟಾಟಿಕ್ ತಂಡ ಬಳಸಿಕೊಂಡು ಸೋಂಕು ಪರೀಕ್ಷೆ ನಡೆಸಲು ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.