ಬೆಂಗಳೂರು: 26 ವರ್ಷದಿಂದ ಸಾಕಷ್ಟು ಸಾಧಕರಿಗೆ ಬಸವ ವೇದಿಕೆ ಸನ್ಮಾನಿಸಿದೆ. ಹಲವರಿಗೆ ಪ್ರೇರೇಪಣೆಯಾಗಿದೆ. ಯಾರಿಗೂ ತೊಂದರೆ, ನೋವು ನೀಡದೆ ಸಾಧನೆ ಮಾಡಿದವರು ಬಸವ ಶ್ರೀ ವಚನ ಸಾಹಿತ್ಯಶ್ರೀ ಪಡೆದಿದ್ದಾರೆ ಎಂದು ಹೇಳಿದರು. ಬಸವ ವೇದಿಕೆಯಿಂದ ಬಸವ ಜಯಂತಿ ಹಾಗು ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಗಾಂಧಿ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ರಾಜ್ಯ ಹಸಿರು ನ್ಯಾಯಾಧಿಕರಣ ಸಮಿತಿಯ ಅಧ್ಯಕ್ಷ ಮತ್ತು ವಿಶ್ರಾಂತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆದಿ ಮಾತನಾಡಿ, ಬಸವ ವೇದಿಕೆ ಹಲವು ಮಹನೀಯರಿಗೆ ಪುರಸ್ಕಾರ ನೀಡಿದೆ. ಈ ಬಾರಿಯ ಪ್ರಶಸ್ತಿ ಕಾರ್ಯಕ್ರಮವನ್ನು ಚುನಾವಣಾ ನೀತಿ ಸಂಹಿತೆಯ ನಡುವೆ ಆಯೋಜಿಸಿರುವ ಆಯೋಜಕರ ಕೆಲಸ ಸುಲಭವಲ್ಲ. ಅದನ್ನು ಕಾರ್ಯರೂಪಕ್ಕೆ ತಂದು ಪ್ರಶಸ್ತಿ ಕೊಡಮಾಡಿರುವುದು ಶ್ಲಾಘನೀಯ ಸಂಗತಿ ಎಂದರು.
ಸಂವಿಧಾನದ ಪರಿಕಲ್ಪನೆಯ ಆಚರಣೆಯನ್ನು 12ನೇಯ ಶತಮಾನದಲ್ಲಿ ತಂದರು. ಈ ಹಿನ್ನಲೆಯಲ್ಲಿ ಲಂಡನ್ ಪ್ರತಿಮೆ ಸ್ಥಾಪನೆಗೂ ಮುನ್ನ ಅಲ್ಲಿ ಮೊದಲ ಸಂವಿಧಾನದ ನಿರ್ಮಾತೃ ಎಂದು ಉಲ್ಲೇಖಿಸಿದ್ದಾರೆ. ವಿಧಾನಪರಿಷತ್ ರೀತಿಯಲ್ಲಿ ಶರಣರ, ಪಂಡಿತರ ವೇದಿಕೆ ಮಾಡಿದ್ದರು. ಎಲ್ಲ ಜಾತಿಗಳನ್ನು ಒಂದುಗೂಡಿಸಿ ಲಿಂಗಾಯಿತ ಪಂಥವನ್ನು ಸ್ಥಾಪಿಸಿದರು ಎಂದು ನೆನೆದರು. ಬಸವಶ್ರೀ ಪ್ರಶಸ್ತಿ ಪಡೆದ ಜಿ. ಎಸ್ ಜಯದೇವ ಮಾತನಾಡಿ, ಅಹಂಕಾರ ಹೋಗಬೇಕು ಎಂದರೆ ಅದನ್ನು ದಾಸನನ್ನಾಗಿ ಮಾಡಿಕೊಳ್ಳಬೇಕು ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದರು. ಅದನ್ನು ಬಸವಣ್ಣನವರು ಆಚರಣೆಗೆ ತಂದರು. ಬದುಕಿನ ದುಡಿಮೆಯ ಹಕ್ಕನು ಎತ್ತಿ ಹಿಡಿದವರು ಬಸವಣ್ಣನವರು. ವಚನ ಚಳುವಳಿಯಲ್ಲಿ ಅದನ್ನು ಪ್ರತಿಪಾದಿಸಿದರು. ಅದರೆ ಅವರ ತತ್ವಗಳನ್ನು ಆಚರಣೆಗೆ ತರಲು ನಾವು ಸೋತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: 'ಬಿಜೆಪಿ ನನಗೆ ಪದ್ಮ ಪ್ರಶಸ್ತಿ ಕೊಡಲ್ಲ ಅಂದ್ಕೊಂಡಿದ್ದೆ, ಆದ್ರೆ ನೀವು ನನ್ನ ಊಹೆ ಸುಳ್ಳು ಮಾಡಿದ್ರಿ'
ಪ್ರತಿಯೊಬ್ಬರಿಗೂ ಧರ್ಮದ ಹಕ್ಕಿದೆ ಎಂದು ವಚನದ ಮೂಲಕ ತಿಳಿಸಿದರು. ದೂರ ಮಾಡುವುದು ಧರ್ಮವಲ್ಲ ಎಂದರು. ಜಾತಿ ತೊಲಗಿಸಿ ಧರ್ಮ ಹತ್ತಿರವಾಗಿಸಿದರು. ದಾಸೋಹ ಸಂಸ್ಕೃತಿ ಆಚರಣೆಗೆ ತಂದರು. ಬರಿ ಊಟವಲ್ಲ ಇರುವುದೆಲ್ಲವನ್ನು ಕೊಡುವುದು ದಾಸೋಹ ಎಂದು ಪ್ರತಿಪಾದಿಸಿದರು. ಅವರು ಜೀವನ ಸಂದೇಶವಾಗಿ ಮನುಷ್ಯನನ್ನು ಪ್ರೀತಿಸಿದರು. ಜಂಗಮವನ್ನು ಗೌರವಿಸಿದರು. ಆದರೆ ತಂತ್ರಜ್ಞಾನದ ಪ್ರಗತಿಯಾದಂತೆ ನಾವೆಲ್ಲ ಅವರ ತತ್ವಗಳನ್ನು ಮರೆತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಡಾ ಪ್ರದೀಪಕುಮಾರ ಹೆಬ್ರಿ, ಜಿ. ವಿ ರೇಣುಕಾ ರಾಜಶೇಖರ್ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ ಕೃಷ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: ಗ್ರಾಪಂಗಳಲ್ಲಿ ರಾಜಕೀಯ ವಿಕೇಂದ್ರಿಕರಣದೊಂದಿಗೆ ಆರ್ಥಿಕ ವಿಕೇಂದ್ರೀಕರಣಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ
ಇದನ್ನೂ ಓದಿ: ಹಣ, ಪ್ರಶಸ್ತಿಗೋಸ್ಕರ ಕೆಲಸ ಮಾಡಬೇಡಿ: ಸುಧಾಮೂರ್ತಿ