ETV Bharat / state

'ಭೂತದ ಬಾಯಲ್ಲಿ ಭಗವದ್ಗೀತೆ': ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ - ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ

ಖಾಸಗಿ ಸಂಸ್ಥೆಯ ಮೂಲಕ ಮತದಾರರ ಮಾಹಿತಿ ಕದಿಯುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂಬ ಕಾಂಗ್ರೆಸ್​ ಆರೋಪಕ್ಕೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

basavaraj bommai
ಬಸವರಾಜ ಬೊಮ್ಮಾಯಿ
author img

By

Published : Nov 20, 2022, 6:54 AM IST

ಬೆಂಗಳೂರು: ತಮ್ಮ ಅಧಿಕಾರವಧಿಯಲ್ಲಿ ಮಾಡಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಇಂದಿನ ನಮ್ಮ ಸರ್ಕಾರದ ಮೇಲೆ ಹಾಕಿ, ಸುಳ್ಳು ಆರೋಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಯಂತಿದೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಿ ಅಕ್ರಮ ಎಸಗಿರುವ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಅವರು ತಿರುಗೇಟು ನೀಡಿದರು.

ಕಾಂಗ್ರೆಸ್, ಮತದಾರರನ್ನು ಗುರಿಯಾಗಿಸಿಕೊಂಡು ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ. ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಯಾವುದೇ ಜವಾಬ್ದಾರಿಯನ್ನು ನೀಡಿರುವುದಿಲ್ಲ. ಕೇವಲ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಆದೇಶ ನೀಡಲಾಗಿರುತ್ತದೆ. ಭಾರತ ಚುನಾವಣಾ ಆಯೋಗ ನೀಡಿದ ಪಿಎಸ್‌ಇ ದತ್ತಾಂಶ ಮತ್ತು ಸ್ವೀಕೃತಗೊಂಡ ಅರ್ಜಿಗಳನ್ನು ಪರಿಗಣಿಸಿ, ಸರ್ಕಾರಿ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಒದಗಿಸಿದ ವರದಿಯನ್ನು ಆಧರಿಸಿ ಮತದಾರರನ್ನು ಕೈಬಿಡಲಾಗಿರುತ್ತದೆ ಎಂದು ಸ್ಪಷ್ಟೀಕರಣ ನೀಡಿದರು.

ಆದರೆ ವಾಸ್ತವವಾಗಿ, 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ, ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆ ಕಾರ್ಯವನ್ನು ಹಾಗೂ ಕೆಲವು ಕಡೆ ಬಿಎಲ್ಒಗಳನ್ನೂ ಕೂಡ ಭರ್ತಿಮಾಡಿಕೊಳ್ಳುವ ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಕಾನೂನು ಬಾಹಿರವಾಗಿ ನೀಡಿತ್ತು ಎಂದು ಆರೋಪಿಸಿದರು.

ಇದನ್ನೂ ಓದಿ: ಡೂಪ್ಲಿಕೇಟ್ ಮತ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಆರೋಪಿಸುತ್ತಿದೆ: ಸಿಎಂ ಬೊಮ್ಮಾಯಿ

ಚಿಲುಮೆ ಸಂಸ್ಥೆಗೆ ಜವಾಬ್ದಾರಿ ನೀಡಿರುವುದು ಅಕ್ರಮ: ಚಿಲುಮೆ ಸಂಸ್ಥೆಯನ್ನು ಚುನಾವಣಾ ಪೂರ್ವ ತಯಾರಿ ಪ್ರಕ್ರಿಯೆಯಲ್ಲಿ ಮೊದಲು ಪರಿಚಯಿಸಿದ್ದು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. ಸಿದ್ದರಾಮಯ್ಯನವರೇ ಸಿಎಂ ಆಗಿದ್ದರು ಎನ್ನುವುದು ವಿಪರ್ಯಾಸದ ಸಂಗತಿ. ಪರಿಷ್ಕರಣೆ ಕಾರ್ಯವು ಸಂಪೂರ್ಣವಾಗಿ ಸರ್ಕಾರಿ ಅಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯವಾಗಿದ್ದಾಗ್ಯೂ, ಚಿಲುಮೆ ಸಂಸ್ಥೆಗೆ ಅಂದಿನ ಸರ್ಕಾರ ಜವಾಬ್ದಾರಿ ನೀಡಿರುವುದು ಅಕ್ರಮವಾಗಿರುತ್ತದೆ. ಇದೇ ಸಿದ್ದರಾಮಯ್ಯನವರ ಅವಧಿಯಲ್ಲಿ ದಿನಾಂಕ 15-09-2017ರಂದು ಕೆ.ಆರ್. ಪುರ ತಹಶೀಲ್ದಾ‌ರ್​ ಅವರು ಚಿಲುಮೆ ಟ್ರಸ್ಟ್​ಗೆ ನೀಡಿರುವ ಆದೇಶದಲ್ಲಿ, ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಚಿಲುಮೆ ಸಂಸ್ಥೆಯು ಬಿ.ಎಲ್.ಒ ಗಳ ಭರ್ತಿಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಸಹ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ. ಅದಲ್ಲದೇ, ಬಿಬಿಎಂಪಿ ವ್ಯಾಪ್ತಿಯಲ್ಲಿಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನೂ ಕೂಡ ಚಿಲುಮೆ ಸಂಸ್ಥೆಗೆ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಹಿತಕರ ಕ್ಷೇತ್ರಗಳನ್ನು ಗುರಿಯಾಗಿಸಿ ಹೆಚ್ಚು ಮತದಾರರನ್ನು ಕೈಬಿಡಲಾಗುತ್ತಿದೆ ಎಂಬುದು ಶುದ್ಧ ಸುಳ್ಳು. ಉದಾಹರಣೆಗೆ, ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳ ಪೈಕಿ ಅತೀ ಕಡಿಮೆ ಮತದಾರರನ್ನು ಕೈಬಿಟ್ಟ ಐದು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಕಾಂಗ್ರೆಸ್ಸಿನವಾಗಿರುತ್ತದೆ. ಕಾಂಗ್ರೆಸ್ ಆರೋಪಿಸುತ್ತಿರುವ ಶಿವಾಜಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇವಲ 14,737 ಮತದಾರರನು ಕೈಬಿಡಲಾಗಿದ್ದು, ಕೆ.ಆರ್.ಪುರಂ ಕ್ಷೇತ್ರದಲ್ಲಿ 45,985 ಮತದಾರರನ್ನು ಕೈಬಿಡಲಾಗಿರುತ್ತದೆ ಎಂದು ಸ್ಪಷ್ಟನೆ‌ ನೀಡಿದರು.

ಇದನ್ನೂ ಓದಿ: ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಸುರ್ಜೇವಾಲಾ

ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರ ನೀಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಸಂಪೂರ್ಣ ಸುಳ್ಳು. ಪ್ರಸ್ತುತ 2022-23ನೇ ಸಾಲಿನಲ್ಲಿ ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಕಾರ್ಯಕ್ರಮದ ಕೆಲಸವನ್ನು ನೀಡಲಾಗಿರುತ್ತದೆ. ಸಂಸ್ಥೆ ವತಿಯಿಂದ ಯಾವುದಾದರೂ ನಿಯಮ ಉಲ್ಲಂಘನೆಯಾಗಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದ ತಕ್ಷಣ, ಸಂಸ್ಥೆಯನ್ನು ವಜಾ ಗೊಳಿಸಲಾಗುವುದು ಎಂದರು.

6.73 ಲಕ್ಷ ಮತದಾರರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ: ಬೆಂಗಳೂರಿನಲ್ಲಿ 27 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪವೂ ಸುಳ್ಳಾಗಿದೆ. ಭಾರತ ಚುನಾವಣಾ ಆಯೋಗ ನೀಡಿದ PSE ಸಂಶಯಾಸ್ಪದ 12,13,644 ಮತದಾರರ ಪಟ್ಟಿಯಿಂದ 6.73ಲಕ್ಷ ಮತದಾರರನ್ನು ಮಾತ್ರ ಕೈಬಿಡಲಾಗಿದ್ದು, ಇದರ ಅರ್ಥ ಅವರ ಮತದಾನದ ಹಕ್ಕನ್ನು ಕಸಿದು ಕೊಳ್ಳುವುದಲ್ಲ. ಬದಲಿಗೆ ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನ ಮಾಡುವ ದುರುದ್ಧೇಶವನ್ನು ಕೊನೆಗಾಣಿಸಲು, ದೇಶಾದ್ಯಂತ ಈ ಕ್ರಮವನ್ನು ಚುನಾವಣಾ ಆಯೋಗ ಕೈಗೊಂಡಿದೆ. ಈ ಕಾರಣದಿಂದ ರಾಜ್ಯದಲ್ಲಿ ಸುಮಾರು 16 ಲಕ್ಷ ಹೆಸರನ್ನು ಕೈಬಿಡಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ, ಕೂಡಲೇ ಅವರು ರಾಜೀನಾಮೆ ಕೊಡಲಿ: ಎನ್.ರವಿಕುಮಾರ್

ಚುನಾವಣಾ ಆಯೋಗ ಈಗ ಪ್ರಚುರಪಡಿಸಿರುವ ಬಿಬಿಎಂಪಿ ಕರಡು ಮತದಾರರ ಪಟ್ಟಿಯಲ್ಲಿನ ನ್ಯೂನತೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಂತರ ಆಕ್ಷೇಪಣೆ ಪರಿಗಣಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆದ್ದರಿಂದ, ಕಾಂಗ್ರೆಸ್ ಪಕ್ಷ ಅರ್ಹ ಮತದಾರರ ಹಕ್ಕನ್ನು ಕಸಿದುಕೊಂಡಿದೆ ಎಂಬುದಕ್ಕೆ ಯಾವುದೇ ಅರ್ಥ ಇಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವುದೇ, ಒಟ್ಟು 91,15,805 ಮತದಾರರು, ಇದರಲ್ಲಿ 27 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬ ಆರೋಪ ಅತ್ಯಂತ ನಿರಾಧಾರ. ಆದರೆ, ಬಿಬಿಎಂಪಿಯಿಂದ ಕೈಬಿಡಲಾಗಿರುವ ಮತದಾರರ ಸಂಖ್ಯೆ ಕೇವಲ 6.73 ಲಕ್ಷ ಮಾತ್ರ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.