ETV Bharat / state

ಬಾರ್​ಗಳ ಮೇಲೆ ಸಿಸಿಬಿ ದಾಳಿ:  ತಪ್ಪಿಸಿಕೊಳ್ಳಲು ಯತ್ನಿಸಿ, ಗಾಯಗೊಂಡ ಬಾರ್​ಗರ್ಲ್​ - ccb raid

ಎರಡು ದಿನಗಳ ಹಿಂದೆ ನೈಟ್ ಬಾರ್ ಹಾಗೂ ಪೇಜ್ ತ್ರಿ ಡ್ಯಾನ್ಸ್ ಬಾರ್​ಗಳ ಮೇಲೆ ದಾಳಿ ನಡೆಸಿದ ಮಾಹಿತಿ ತಿಳಿದು ಪಕ್ಕದಲ್ಲೇ ಇದ್ದ ಕ್ಲಬ್​ನ ಬಾರ್ ಗರ್ಲ್ ಒಬ್ಬಳು ಆತಂಕದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಟ್ಟಡದಿಂದ ಜಿಗಿದು ಗಾಯಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

bar girl
author img

By

Published : Jul 28, 2019, 2:37 AM IST

ಬೆಂಗಳೂರು: ಬಾರ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿದ ವೇಳೆ ಪರಾರಿಯಾಗುವ ಭರದಲ್ಲಿ ಬಾರ್​ಗರ್ಲ್​ವೊಬ್ಬಳು ಮಹಡಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದಾಳೆ.

ಗುರುವಾರ ರಾತ್ರಿ ಟೌನ್​ಹಾಲ್ ಬಳಿಯ ನೈಟ್ ಬಾರ್ ಹಾಗೂ ಎಂಜಿ ರಸ್ತೆ ಬಳಿಯ ಪೇಜ್ ತ್ರಿ ಬಾರ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿ, ಹಲವರನ್ನು ಬಂಧಿಸಿತ್ತು. ಪೊಲೀಸರ ದಾಳಿ ವಿಷಯ ತಿಳಿಯುತ್ತಿದ್ದಂತೆ ಆತಂಕದಿಂದ ಎಸ್ಕೇಪ್ ಆಗಲು ಯತ್ನಿಸಿದ ಬಾರ್​ಗರ್ಲ್​ವೊಬ್ಬಳು ಮಹಡಿಯಿಂದ ಕೆಳಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.

bar girl
ಚಿಕಿತ್ಸೆ ಪಡೆಯುತ್ತಿರುವ ಬಾರ್​ ಗರ್ಲ್

ಪಶ್ಚಿಮ ಬಂಗಾಳ ಮೂಲದ ಆಕೆ ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದಳು. ನಗರದ ಕ್ಲಬ್-ಪಬ್​ಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕ್ಷಣಾರ್ಧದಲ್ಲಿ ಬಾರ್​​ಗರ್ಲ್​​ಗಳಿಗೆ ಮಾಹಿತಿ ತಲುಪಿಸುವ ವ್ಯವಸ್ಥಿತ ಜಾಲವೊಂದಿದೆ. ಇದೇ ಜಾಲದ ಮೂಲಕ ಮಾಹಿತಿ ಪಡೆದು ಪರಾರಿಯಾಗಲು ಯತ್ನಿಸಿದ ಬಾರ್​​ಗರ್ಲ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆದರೆ ಈ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ ಎಂದಿರುವ ಅಶೋಕ ನಗರ ಪೊಲೀಸರು, ದೂರು ನೀಡಿದರೆ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

 ಸಿಸಿಬಿ ದಾಳಿಗೆ ಹೆದರಿ ತಪ್ಪಿಸಿಕೊಳ್ಳುವ ಭರದಲ್ಲಿ ಯುವತಿ ಮೇಲಿಂದ ಬಿದ್ದು ಗಂಭೀರ ಗಾಯ

ಬೆಂಗಳೂರು: ಎರಡು ದಿನಗಳ ಹಿಂದೆ ಲರ್ವಸ್ ನೈಟ್ ಬಾರ್ ಹಾಗೂ ಪೇಜ್ ತ್ರಿ ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ ನಡೆಸಿದ ಮಾಹಿತಿ ತಿಳಿದು ಪಕ್ಕದಲ್ಲೇ ಇದ್ದ ಕ್ಲಬ್ ನ ಬಾರ್ ಗರ್ಲ್ ಯೊಬ್ಬಳು ಆತಂಕದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವತಿಯು ಕಟ್ಟಡದಿಂದ ಜಿಗಿದು ಗಾಯಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಟೌನ್ ಹಾಲ್ ಬಳಿ ಲರ್ವಸ್ ನೈಟ್ ಬಾರ್ ಹಾಗೂ ಎಂ.ಜಿ.ರಸ್ತೆಯ ಬಳಿ ಪೇಜ್ ತ್ರಿ ಬಾರ್ ಗಳ  ಮೇಲೆ ಸಿಸಿಬಿ ದಾಳಿ ನಡೆಸಿದ ಹಲವರನ್ನು ಬಂಧಿಸಿತ್ತು. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪೇಜ್ ತ್ರಿ ಬಾರ್ ಅಸುಪಾಸಿನಲ್ಲಿರುವ ಬಾರ್ ವೊಂದರ ಬಾರ್ ಗರ್ಲ್ ವಿಷಯ ಕಿವಿಗೆ ಬಿದ್ದಿದೆ. ಆತಂಕದಿಂದ ಎಸ್ಕೇಪ್ ಆಗುವ ಭರದಲ್ಲಿ ಮೇಲಿನಿಂದ ಕೆಳಬಿದ್ದು ಗಂಭೀರ ಗಾಯಗೊಂಡಿದ್ದಾಳೆ.
ಪಶ್ಚಿಮ ಬಂಗಾಳ ಮೂಲದ ಆಕೆ ಹಲವು ವರ್ಷಗಳಿಂದ ಬಾರ್ ಗರ್ಲ್  ನಗರದಲ್ಲಿ ಬೇರೂರಿದ್ದಳು. ಒಮ್ಮೆ ನಗರದಲ್ಲಿ  ಎಲ್ಲಾದರೂ ಕ್ಲಬ್-ಪಬ್ಗಳ ಮೇಲೆ ಪೊಲೀಸರು ದಾಳಿ ನಡೆಸಿದರೂ ಕ್ಷಣಾರ್ಧದಲ್ಲಿ ನಗರದಲ್ಲಿ ಬಾರ್ ಗರ್ಲ್ ಗಳಿಗೆಲ್ಲಾ ಎಲ್ಲಾರಿಗೂ ಮಾಹಿತಿ ತಲುಪಿಸುವ ವ್ಯವಸ್ಥಿತ ಜಾಲವೊಂದಿದೆ. ಇದೇ ರೀತಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕೂಡಲೇ ಬಾರ್ ಗರ್ಲ್ ಮಾಹಿತಿ ಹೋಗಿದ್ದು, ಪೊಲೀಸರ ಕಣ್ಣಿನಿಂದ ತಪ್ಪಿಸುವ ಭರದಲ್ಲಿ ಮೇಲಿಂದ ಬಿದ್ದು ಗಾಯ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾತನಾಡಿರುವ ಅಶೋಕ ನಗರ ಪೊಲೀಸರು ಘಟನೆ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 
ETV Bharat Logo

Copyright © 2024 Ushodaya Enterprises Pvt. Ltd., All Rights Reserved.