ಬೆಂಗಳೂರು : ಪರೀಕ್ಷೆ ಮುಗಿದ ಒಂದೇ ಗಂಟೆಯಲ್ಲಿ ಫಲಿತಾಂಶ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಹೊಸ ದಾಖಲೆ ಬರೆದಿದೆ. ಬಹುತೇಕ ಯಡವಟ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ವಿವಿಯಿಂದ ಧನಾತ್ಮಕ ವಿಚಾರಕ್ಕೆ ಸುದ್ದಿಯಾಗುತ್ತಿದೆ.
ಬೆಂಗಳೂರು ವಿವಿ ವ್ಯಾಪ್ತಿಯಲ್ಲಿರುವ ಯುವಿಸಿಇ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಕೋರ್ಸ್‌ನಲ್ಲಿ 72 ವಿದ್ಯಾಥಿರ್ಗಳ ಪಿಹೆಚ್ಡಿ ಕೋರ್ಸ್ ವರ್ಕ್ ಪರೀಕ್ಷೆ ಗುರುವಾರ ಮುಕ್ತಾಯವಾಗಿತ್ತು. ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಫಲಿತಾಂಶ ನೀಡಿ ಇತಿಹಾಸ ನಿರ್ಮಿಸಿದೆ.
ಇದನ್ನೂ ಓದಿ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ-ತನಿಖೆಗೆ ವಿಶೇಷ ಸಮಿತಿ ರಚನೆ : ಸಚಿವ ಆರಗ ಜ್ಞಾನೇಂದ್ರ
ಈವರೆಗೆ ಕೇವಲ ಒಂದು ಗಂಟೆಯಲ್ಲಿ ಫಲಿತಾಂಶ ನೀಡಿದ್ದೇ ವಿವಿಗಳ ಇತಿಹಾಸದಲ್ಲೇ ಇಲ್ಲ. ನಾವು ಕೊಟ್ಟಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೂ ಖುಷಿಯಾಗಿದೆ ಎಂದು ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ