ETV Bharat / state

ಬೆಂಗಳೂರು: ₹37 ಕೋಟಿ ಮೌಲ್ಯದ ಡ್ರಗ್ಸ್ ವಶ; ಸೆಲೆಬ್ರಿಟಿಗಳು, ಉದ್ಯಮಿಗಳ ಪುತ್ರರೇ ಗ್ರಾಹಕರು!

ಈ ಡ್ರಗ್ಸ್​ನ ಅಸಲಿ ಹೆಸರು ಮೆಥಕ್ವಾಲೋನ್. ಯುಕೆ, ಅಮೆರಿಕ ಹಾಗೂ ಸೌಥ್ ಆಫ್ರಿಕಾ ದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದಕ್ಕೆ ಬೆಂಗಳೂರಿನಲ್ಲಿ ಎಲ್ಲಿಲ್ಲದ ಡಿಮ್ಯಾಂಡ್. ಗ್ರಾಂ ಲೆಕ್ಕದಲ್ಲಿ ಸಾವಿರಾರು ರೂಗಳಿಗೆ ಸೇಲ್ ಆಗುತ್ತಿದ್ದು ಕೆಲ ಸೆಲೆಬ್ರಿಟಿಗಳು, ಉದ್ಯಮಿಗಳ ಪುತ್ರರೇ ಗ್ರಾಹಕರು ಎಂದು ತಿಳಿದುಬಂದಿದೆ.

author img

By

Published : Apr 8, 2022, 9:33 PM IST

Updated : Apr 8, 2022, 10:36 PM IST

ಬರೋಬ್ಬರಿ 37 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ರಾಜಧಾನಿ ಪೊಲೀಸರು

ಬೆಂಗಳೂರು: ನಶೆ ಏರಿಸುವ ಪಡ್ಡೆ ಹುಡುಗರಿಗೆ ಆ ಮಾದಕ ವಸ್ತು ಹಾಟ್ ಫೇವರೇಟ್. ಮಾರುಕಟ್ಟೆಯಲ್ಲಿ ಚಿನ್ನವನ್ನೇ ಮೀರಿಸುವ ಈ ವಸ್ತು ಕಳೆದ ಆರು ವರ್ಷದಿಂದ ನಾಪತ್ತೆಯಾಗಿತ್ತು. ಆದ್ರೆ,ಈಗ ಮತ್ತೆ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದ್ದು, ನಶೆ ಏರಿಸುವ ಜಾಲದ ಕಿಂಗ್​​ಪಿನ್​​ಗಳನ್ನು ಪೊಲೀಸರು ಬಂಧಿಸಿದ್ದಾರೆ.

ನೋಡುವುದಕ್ಕೆ ಕಲ್ಲು ಸಕ್ಕರೆಯಂತಿರುವ ಪದಾರ್ಥಕ್ಕೆ ಕಾಳಸಂತೆಯಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಅಸಲಿಗೆ ಐಸ್ ಎಂತಲೇ ಡ್ರಗ್ಸ್​ ಲೋಕದಲ್ಲಿ ಪರಿಚಿತವಾಗಿರುವ ಇದರ ಬೆಲೆ ಚಿನ್ನಕ್ಕೂ ಅಧಿಕ. ಯಾಕಂದ್ರೆ ಈ ಮಾದಕ ವಸ್ತುವಿನ ಒಂದು ಗ್ರಾಂನ ಬೆಲೆ ಐದು ಸಾವಿರ ರೂ.ಇದ್ದು, ಗೋವಿಂದಪುರ ಪೊಲೀಸರ ಕಾರ್ಯಾಚರಣೆ ವೇಳೆ 35.5 ಕೋಟಿಗೂ ಹೆಚ್ಚಿನ ಮೌಲ್ಯದ 70 ಕೆಜಿ ಪ್ರಮಾಣದ ಡ್ರಗ್ಸ್​ ಪೊಲೀಸರಿಗೆ ದೊರೆತಿದೆ.

ಆರೋಪಿಗಳು
ಆರೋಪಿಗಳು

ಇದನ್ನೂ ಓದಿ: 10ನೇ ತರಗತಿ ಟಾಪರ್‌ ವಿದ್ಯಾರ್ಥಿನಿಗೆ IAS ಕನಸು: ಬಾಲಕಿಯ ಶಿಕ್ಷಣಕ್ಕೆ ನೆರವಾಗಲು ಪಣತೊಟ್ಟ ಒಂದಿಡೀ ಗ್ರಾಮ!

ಡ್ರಗ್ಸ್​ನ ಅಸಲಿ ಹೆಸರು ಮೆಥಕ್ವಾಲೋನ್. ಯುಕೆ, ಅಮೆರಿಕ ಹಾಗೂ ಸೌಥ್ ಆಫ್ರಿಕಾ ದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಬೆಂಗಳೂರಿನಲ್ಲಂತೂ ಎಲ್ಲಿಲ್ಲದ ಡಿಮ್ಯಾಂಡ್. ಅಷ್ಟೇ ಅಲ್ಲ, ಗ್ರಾಂ ಲೆಕ್ಕದಲ್ಲಿ ಸಾವಿರಾರು ರೂಗಳಿಗೆ ಸೇಲ್ ಆಗುತ್ತದೆ. ಬೆಂಗಳೂರಿನ ಕೆಲ ಸೆಲೆಬ್ರಿಟಿಗಳು, ಉದ್ಯಮಿಗಳ ಪುತ್ರರೇ ಗ್ರಾಹಕರೆಂದು ತಿಳಿದುಬಂದಿದೆ.

ಬೆಂಗಳೂರು: ₹37 ಕೋಟಿ ಮೌಲ್ಯದ ಡ್ರಗ್ಸ್ ವಶ; ಸೆಲೆಬ್ರಿಟಿಗಳು, ಉದ್ಯಮಿಗಳ ಪುತ್ರರೇ ಗ್ರಾಹಕರು!

ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದ ಗೋವಿಂದಪುರ ಪೊಲೀಸರು ಮಾರಾಟದ ವೇಳೆ ಓರ್ವನನ್ನು ಬಂಧಿಸಿದ್ದಾರೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿಗೆ ತೆರಳಿದ ತಂಡ ಚೆನ್ನೈನ ಒಂದು ಗೋಡೌನ್​ನ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಬಿಗ್ ಐಸ್ ಬ್ರೇಕ್ ಎಂಬಂತೆ ಕಳೆದ ಆರು ವರ್ಷಗಳಿಂದ ಸದ್ದಿಲ್ಲದೇ ಆ್ಯಕ್ಟಿವ್ ಆಗಿದ್ದ ಮೆಥಕ್ವಾಲೋನ್ ಎಂಬ ಮಾದಕವಸ್ತು ಅಪಾರ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 35.5 ಕೋಟಿಗೂ ಹೆಚ್ಚು ಎನ್ನಲಾಗಿದೆ. ಇದರೊಂದಿಗೆ 6.5 ಕೆಜಿ ಎಂಡಿಎ, 75 ಗ್ರಾಂ ಕೊಕೈನ್, 300 ಗ್ರಾಂ ಟ್ರೊಮೊಡೊಲ್ ಸಹ ವಶಕ್ಕೆ ಪಡೆದಿರುವ ಪೊಲೀಸರು ಡ್ರಗ್ ಕಿಂಗ್ ಪಿನ್‌ಗಳಾದ ರಂಜಿತ್ ಬಾನ್ ಗುಪ್ತಾ, ಅಂಡ್ರೆಸ್ ಪಿಲಿಪೊನನ್ನು ಬಂಧಿಸಿದ್ದಾರೆ. ಗೋಡೌನ್ ಮಾಲೀಕ ರಾಜೇಶ್ ಎಂಬಾತನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮತ್ತೊಂದು ಪ್ರಕರಣ: ನಗರದಲ್ಲಿ ಮಾದಕ ವಸ್ತುಗಳ ಜೊತೆಗೆ ಗಾಂಜಾ ಘಾಟು ಸಹ ಹೆಚ್ಚಾಗಿದ್ದು, ಗೊವಿಂದಪುರ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಡಿಶಾ ಮೂಲದ ದೊಡ್ಡ ಜಾಲವೊಂದು ಪತ್ತೆಯಾಗಿದೆ. ಅಕ್ರಮವಾಗಿ ಹೊರ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಸಮರಕರ, ರಮೇಶ್ ಹಾಗೂ ಮಂಗೋಲ್ ಸಿಸಾ ಎಂಬ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ 300 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.

Last Updated : Apr 8, 2022, 10:36 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.