ಬೆಂಗಳೂರು: ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ರಸ್ತೆಗಳನ್ನು ಅಗೆಯಲಾಗಿದ್ದು, ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅಲ್ಲಿನ ನಿವಾಸಿಗಳು ಗುಂಡಿ ಬಿದ್ದಿರುವ ರಸ್ತೆಗಳಿಗೆ ಪೂಜೆ ಮಾಡಿ ಅದರ ಮೇಲೆ ಮಲಗಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಮಲ್ಲೇಶ್ವರಂ ನಿವಾಸಿಗಳಿಂದ ಕ್ಲೌಡ್ ನೈನ್ ಆಸ್ಪತ್ರೆ ಬಳಿ ಗುಂಡಿಬಿದ್ದ ರಸ್ತೆಗಳಿಗೆ ಪೂಜೆ ಮಾಡಿ ಅದರ ಮೇಲೆ ಮಲಗಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಕಾಮಗಾರಿಗಳು ನಡೆಯುತ್ತಿರುವ ಜಾಗದಲ್ಲಿ ಗುತ್ತಿದಾರರ ಹೆಸರು, ಇಂಜಿನಿಯರ್ಗಳು ಹಾಗೂ ನಿಗದಿ ಮಾಡಿದ ಸಮಯ, ಹಣದ ವೆಚ್ಚ, ಕಾಲಮಿತಿ ವಿವರವುಳ್ಳ ಫಲಕಗಳನ್ನು ಹಾಕಿಲ್ಲ. ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಹಾಗೂ ವಾಹನಗಳ ಸಂಚಾರಕ್ಕೂ ಕಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ತಿ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ಮಲ್ಲೇಶ್ವರಂನ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿವೆ. ಕಳಪೆ ಕಾಮಗಾರಿಯಿಂದ ಮಲ್ಲೇಶ್ವರಂ 18ನೇ ಕ್ರಾಸ್ನಲ್ಲಿ ರಸ್ತೆ ಅಪಘತಾದಿಂದ ಯುವಕ ಮೃತಪಟ್ಟಿದ್ದಾನೆ. ಸ್ಯಾಂಕಿ ಕೆರೆಯಲ್ಲಿ 12ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಇನ್ನು ಪೂರ್ಣಗೊಂಡಿಲ್ಲ. ಬೀಗಲ್ಸ್ ಬ್ಯಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರಿಗೆ ಉಪಯೋಗಕ್ಕೆ ಅವಕಾಶ ನೀಡದೆ ಬೀಗ ಜಡಿಯಲಾಗಿದೆ. ಟೆಂಡರ್, ಮರು ಟೆಂಡರ್ಗಳ ದೊಡ್ಡ ಹಗರಣಗಳ ಸರಮಾಲೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅನೂಪ್ ಅಯ್ಯಂಗಾರ್ ಆರೋಪಿಸಿದರು.
ಇದನ್ನೂ ಓದಿ: ದೇಶದ ಜನತೆ ಮೋದಿ ಮೇಲೆ ಇಟ್ಟಿರುವ ವಿಶ್ವಾಸ ಕಂಡು ಬೆರಗಾಗಿದ್ದೇನೆ : ಸಚಿವ ಪ್ರಲ್ಹಾದ್ ಜೋಶಿ