ETV Bharat / state

ಯುಗಾದಿ-ಗುಡ್ ಫ್ರೈಡೇ ಪ್ರಯುಕ್ತ ಚಿತ್ರಕಲಾ ಪರಿಷತ್​ನಲ್ಲಿ ಬೆಂಗಳೂರು ಉತ್ಸವ - ಯುಗಾದಿ

ಕರಕುಶಲ ಕರ್ಮಿಗಳ ಜೊತೆಯಲ್ಲಿಯೇ ರಾಜ್ಯದ ವಿವಿಧ ಭಾಗಗಳ ಜಾನಪದ ಕಲಾಕಾರರಿಗೂ ವೇದಿಕೆ ಒದಗಿಸುವ ಉದ್ದೇಶದಿಂದ ಲೈವ್‌ ಡ್ಯಾನ್ಸ್‌ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಏಪ್ರಿಲ್‌ 3ರಂದು ಡೊಳ್ಳುಕುಣಿತ, ಏಪ್ರಿಲ್‌ 4ರಂದು ಹುಲಿವೇಶ ಕುಣಿತ, 10ನೇ ಏಪ್ರಿಲ್‌ನಂದು ಕಂಗಿಲು ಕುಣಿತ ಹಾಗೂ ಏಪ್ರಿಲ್‌ 11ರಂದು ಯಕ್ಷಗಾನ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ..

Bangalore Festival
ಬೆಂಗಳೂರು ಉತ್ಸವ
author img

By

Published : Apr 2, 2021, 7:37 PM IST

ಬೆಂಗಳೂರು : ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಯುಗಾದಿ ಮತ್ತು ಗುಡ್ ಫ್ರೈಡೇ ಪ್ರಯುಕ್ತ ಬೆಂಗಳೂರು ಉತ್ಸವಕ್ಕೆ ಚಾಲನೆ ನೀಡಲಾಯಿತು.

ಚಿತ್ರಕಲಾ ಪರಿಷತ್‌ನಲ್ಲಿ ಬೆಂಗಳೂರು ಉತ್ಸವಕ್ಕೆ ಚಾಲನೆ..

ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಾದ್ಯಂತ ಕರಕುಶಲಕರ್ಮಿಗಳಿಗೆ ಸಿಗಬೇಕಾದಂತಹ ವೇದಿಕೆ ಸಿಗದೆ ತೊಂದರೆ ಅನುಭವಿಸಿದ್ದಾರೆ. ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ತೊಂದರೆ ಅನುಭವಿಸಿದ್ದಾರೆ. ಇಂತಹ ಕರಕುಶಲಕರ್ಮಿಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಬೆಂಗಳೂರು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಗ್ರಾಂಡ್‌ ಫ್ಲಿ ಮಾರ್ಕೇಟ್‌ ಏಪ್ರಿಲ್‌ 2 ರಿಂದ 11ರವರೆಗೆ ಯುಗಾದಿ ಶಾಪಿಂಗ್‌ ಕಾರ್ನಿವಲ್‌ನ ಆಯೋಜಿಸಲಾಗಿದೆ.

ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಲಿರುವ ಕರಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಕಾಶ್ಮೀರಿ ಸೀರೆಗಳು ಮತ್ತು ಶಾಲುಗಳು, ಮಣಿಪುರಿ, ಆಂಧ್ರಪ್ರದೇಶ, ತಮಿಳುನಾಡಿನ ಪ್ರಸಿದ್ದ ರೇಷ್ಮೆ ಸೀರೆಗಳು ಹಾಗೂ ಈಶಾನ್ಯ ರಾಜ್ಯಗಳ ಕಲಾಕಾರರು ತಯಾರಿಸಿರುವ ಉತ್ಪನ್ನಗಳು, ಉಡುಪಿಗೆ ತಕ್ಕಂತೆ ಹೊಂದುವ ಆಭರಣಗಳು, ಮನೆಯ ಅಲಂಕಾರಿಕ ವಸ್ತುಗಳು ಹೀಗೆ ನಾನಾ ರೀತಿಯ ಆಕರ್ಷಕ ವಸ್ತುಗಳು ಎಲ್ಲರ ಗಮನ ಸೆಳೆಯುವಂತಿವೆ.

ಕರಕುಶಲ ಕರ್ಮಿಗಳ ಜೊತೆಯಲ್ಲಿಯೇ ರಾಜ್ಯದ ವಿವಿಧ ಭಾಗಗಳ ಜಾನಪದ ಕಲಾಕಾರರಿಗೂ ವೇದಿಕೆ ಒದಗಿಸುವ ಉದ್ದೇಶದಿಂದ ಲೈವ್‌ ಡ್ಯಾನ್ಸ್‌ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಏಪ್ರಿಲ್‌ 3ರಂದು ಡೊಳ್ಳುಕುಣಿತ, ಏಪ್ರಿಲ್‌ 4ರಂದು ಹುಲಿವೇಶ ಕುಣಿತ, 10ನೇ ಏಪ್ರಿಲ್‌ನಂದು ಕಂಗಿಲು ಕುಣಿತ ಹಾಗೂ ಏಪ್ರಿಲ್‌ 11ರಂದು ಯಕ್ಷಗಾನ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.