ETV Bharat / state

ಆ್ಯಪ್ ಆಧಾರಿತ ಆಟೋಗಳಿಗೆ ನಿರ್ಬಂಧ.. ನಿಯಮ ಜಾರಿಗೆ ಸೈಬರ್ ಕ್ರೈಂ ಸಹಾಯ - ಪ್ರಾದೇಶಿಕ ಸಾರಿಗೆ ಇಲಾಖೆ

ಇಂದಿನಿಂದ ರಾಜ್ಯದಲ್ಲಿ ಆ್ಯಪ್ ಆಧಾರಿತ ಆಟೋ ಸೇವೆ ನಿರ್ಬಂಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಕಟ್ಟುನಿಟ್ಟಾಗಿ ಈ ಆದೇಶದ ಜಾರಿಗೆ ಇಲಾಖೆ ಮುಂದಾಗಿದೆ.

ಆ್ಯಪ್ ಆಧರಿತ ಆಟೋಗಳಿಗೆ ನಿರ್ಬಂಧ: ನಿಯಮ ಜಾರಿಗೆ ಸೈಬರ್ ಕ್ರೈಂ ಸಹಾಯ
Ban on app based autos: Cybercrime helps enforce rules
author img

By

Published : Oct 12, 2022, 1:39 PM IST

ಬೆಂಗಳೂರು: ಇಂದಿನಿಂದ ಆ್ಯಪ್ ಆಧಾರಿತ ಆಟೋ ಸೇವೆ ಸ್ಥಗಿತಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದರೂ ಅಗ್ರಿಗೇಟರ್​​ಗಳು ಸೇವೆ ಮುಂದುವರೆಸಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆ ನಿರ್ಣಾಯಕ ಕಾರ್ಯಾಚರಣೆಗಿಳಿದಿದೆ. ಸಾರಿಗೆ ಅಧಿಕಾರಿಗಳ ತಂಡವು ಸೈಬರ್ ಕ್ರೈಂ ತಂಡದ ನೆರವಿನೊಂದಿಗೆ ಅಖಾಡಕ್ಕಿಳಿದಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.

ಇಂದಿನಿಂದ ರಾಜ್ಯದಲ್ಲಿ ಆ್ಯಪ್ ಆಧಾರಿತ ಆಟೋ ಸೇವೆ ನಿರ್ಬಂಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಕಟ್ಟುನಿಟ್ಟಾಗಿ ಈ ಆದೇಶದ ಜಾರಿಗೆ ಇಲಾಖೆ ಮುಂದಾಗಿದೆ. ಬೆಳಗ್ಗೆಯಿಂದಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅಖಾಡಕ್ಕಿಳಿದಿದ್ದು, ನಿಯಮ ಉಲ್ಲಂಘಿಸಿ ಆ್ಯಪ್ ಆಧಾರಿತ ಆಟೋ ಸೇವೆ ನೀಡುತ್ತಿರುವವರ ಹುಡುಕಾಟ ಆರಂಭಿಸಿದೆ.

ಅಧಿಕಾರಿಗಳು ಖುದ್ದಾಗಿ ತಮ್ಮ ಮೊಬೈಲ್​​ನಲ್ಲಿ ಆ್ಯಪ್ ಅಳವಡಿಸಿಕೊಂಡು ಆಟೋ ಸೇವೆ ನೀಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲ ಅಗ್ರಿಗೇಟರ್​​ಗಳು ಇನ್ನೂ ಆಟೋ ಮತ್ತು ಬೈಕ್ ಸೇವೆ ಒದಗಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸುವ ಪ್ರತಿಯೊಂದು ಆಟೋ ಸೇವೆಗೆ ಕಂಪನಿಗೆ 5 ಸಾವಿರ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ನಿಯಮ ಉಲ್ಲಂಘನೆ ಬಗ್ಗೆ ದಾಖಲಾತಿ ಸಂಗ್ರಹಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಇನ್ನು, ತನ್ನ ಆದೇಶ ಜಾರಿ ಮಾಡಲು ಸೈಬರ್ ಕ್ರೈಂ ನೆರವು ಪಡೆಯಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಅಗ್ರಿಗೇಟರ್ ಗಳು ಸೇವೆ ಒದಗಿಸಲು ಬಳಸುತ್ತಿರುವ ಆ್ಯಪ್ ಗಳಲ್ಲಿ ಆಟೋ ಮತ್ತು ಬೈಕ್ ಸೇವೆಯ ಆಯ್ಕೆಯನ್ನು ರದ್ದುಪಡಿಸುವ ಅಥವಾ ತೆರವುಗೊಳಿಸುವ ಕುರಿತು ಸಮಾಲೋಚನೆ ನಡೆಸುತ್ತಿದೆ.

ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈಗಷ್ಟೇ ಕಾರ್ಯಾಚರಣೆ ಆರಂಭಿಸಲಾಗಿದೆ. ಸಂಜೆ ವೇಳೆಗೆ ಸಮಗ್ರ ಮಾಹಿತಿ ಲಭ್ಯವಾಗಲಿದ್ದು, ಮಾಧ್ಯಮಗಳಿಗೆ ವಿವರ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಓಲಾ, ಉಬರ್, ರಾಪಿಡೊ ಕಂಪನಿಗಳ ಆ್ಯಪ್ ಆಟೋ ಸೇವೆ ಬ್ಯಾನ್​.. ಓಡಿಸಿದರೆ ದಂಡ ಎಷ್ಟು ಗೊತ್ತಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.