ETV Bharat / state

ರಾಜ್ಯ ಬಿಜೆಪಿ ನೊಗ ಹೊತ್ತ ವಿಜಯೇಂದ್ರ: ಯುವ ನಾಯಕನಿಗೆ ಹಿರಿಯರ ಬೆಂಬಲ - ವಿಜಯೇಂದ್ರ ಅವರಿಗೆ ನಮ್ಮೆಲ್ಲರ ಸಹಕಾರ

B.Y.Vijayendra took oath as BJP State President: ನಿಕಟಪೂರ್ವ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರಿಂದ ಅಧಿಕಾರ ಸ್ವೀಕರಿಸಿ ಅಧಿಕೃತವಾಗಿ ಬಿ.ವೈ.ವಿಜಯೇಂದ್ರ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದರು.

Vijayendra takes oath in presence of BJP stalwarts
ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಿ ವೈ ವಿಜಯೇಂದ್ರ
author img

By ETV Bharat Karnataka Team

Published : Nov 15, 2023, 12:38 PM IST

Updated : Nov 15, 2023, 3:24 PM IST

ಬೆಂಗಳೂರು: ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರ ಕ್ಷೇತ್ರದ ಶಾಸಕ ಹಾಗು ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಇಂದು ಅಧಿಕಾರ ಸ್ವೀಕರಿಸಿದರು. ಈ ಮೂಲಕ ರಾಜ್ಯ ಬಿಜೆಪಿಗೆ ಯುವ ನೇತಾರನ ಸಾರಥ್ಯ ಸಿಕ್ಕಿದೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ಹಿರಿಯರ ಆಶೀರ್ವಾದ ಪಡೆದು, ನಳೀನ್​ ಕುಮಾರ್​ ಕಟೀಲ್ ಅವರಿಂದ ವಿಜಯೇಂದ್ರ ಅಧಿಕಾರ ಸ್ವೀಕರಿಸಿದರು.

ಸಮಾರಂಭದಲ್ಲಿ ಭಾಗವಹಿಸಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, "ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರ ಆದೇಶ ಮತ್ತು ಆಶೀರ್ವಾದದಂತೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದಾನೆ. ಅಮಿತ್ ಶಾ ಅವರನ್ನು ಬೆಂಗಳೂರಿಗೆ ಕರೆಸಿ ಒಂದು ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುವ ಅಪೇಕ್ಷೆ ಇದೆ. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ಕಾರ್ಯಕರ್ತರ ಉತ್ಸಾಹ ಕಾಣುತ್ತಿದೆ. ಎಲ್ಲಾ ನಾಯಕರು ಬಂದು ವಿಜಯೇಂದ್ರಗೆ ಆಶೀರ್ವಾದ ಮಾಡಿದ್ದು ತುಂಬಾ ಸಂತೋಷವಾಗಿದೆ" ಎಂದರು.

Vijayendra takes oath in presence of BJP stalwarts
ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಿ ವೈ ವಿಜಯೇಂದ್ರ

ನಂತರ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ನಾನು ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. 18 ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಅಧಿಕಾರ ವಹಿಸಿಕೊಂಡ 6 ತಿಂಗಳಲ್ಲಿ ಕೋವಿಡ್ ಬಂತು. ಸೇವಾ ಹಿ ಸಂಘಟನ್ ಹೆಸರಿನಲ್ಲಿ ಕೋವಿಡ್ ವೇಳೆ ಸೇವೆ ಮಾಡಿದ್ದೇವೆ. ಅತಿ ಹೆಚ್ಚು ಮೋರ್ಚಾ, ಪ್ರಕೋಷ್ಠ ನಿರ್ಮಿಸಿ, ಕೆಲಸ ಮಾಡಿದ್ದೇವೆ. 4 ವರ್ಷ ಮೂರು ತಿಂಗಳು ಸತತ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಈಗ ನಾವೆಲ್ಲರೂ ವಿಜಯೇಂದ್ರರಿಗೆ ಸಹಕಾರ ಕೊಡುತ್ತೇವೆ. ಬಾಲ್ಯದಿಂದಲೇ ಅವರು ಸ್ವಯಂಸೇವಕ, ರಾಜ್ಯ ಉಪಾಧ್ಯಕ್ಷರಾಗಿ ಶಕ್ತಿ ತುಂಬಿದವರು. ಈಗ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ. ವಿಜಯೇಂದ್ರ ನೇತೃತ್ವದಲ್ಲಿ 28 ಲೋಕಸಭಾ ಗೆಲ್ಲುತ್ತೇವೆ ನಾವೆಲ್ಲ ಒಟ್ಟಾಗಿ ಹೋರಾಟ ಮಾಡುತ್ತೇವೆ" ಎಂದು ಹೇಳಿದರು.

ಕಳೆದುಕೊಂಡದ್ದು ಬಡ್ಡಿಸಮೇತ ವಾಪಸ್​: ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮಾತನಾಡಿ, "ಸೋಲಿನ ನಂತರ ಹೊಸ ಸಾರಥಿಯ ಆಯ್ಕೆಯಾಗಿದೆ. ಕಳೆದುಕೊಂಡಿದ್ದನ್ನು ಅದೇ ಜಾಗದಲ್ಲಿ ಪಡೆದುಕೊಳ್ಳಬೇಕು. ಲೋಕಸಭೆ ಚುನಾವಣೆಯಲ್ಲಿ ಅದನ್ನು ನಾವು ಪಡೆದುಕೊಳ್ಳಬೇಕು. ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಇದೆ. ವಿಶ್ವಾಸದ ರಾಜಕಾರಣದ ಅವಶ್ಯಕತೆ ಇದೆ. 24 ಗಂಟೆ ದುಡಿಯಬೇಕಾದ ಅಗತ್ಯತೆ ಇದೆ. ಹೊಸತನ ಬರಬೇಕು. ಇದ್ದವರೇ ಇರುವುದಲ್ಲ. ಅವರೆಲ್ಲ ಮಾರ್ಗದರ್ಶನ ಮಾಡಬೇಕು. ಅಧ್ಯಕ್ಷರಾದವರಿಂದ ಉಗುಳುವುದಕ್ಕಿಂತ ನುಂಗುವ ಕೆಲಸ ಹೆಚ್ಚಾಗಬೇಕು. ಆ ಎಲ್ಲ ಗುಣ ಲಕ್ಷಣ ವಿಜಯೇಂದ್ರ ಅವರಲ್ಲಿದೆ. ಯಡಿಯೂರಪ್ಪರ ಪುತ್ರನಾಗಿ ಕೆಲಸ ಮಾಡುವ ಗುಣ ಅವರಲ್ಲಿ ಹರಿದುಬಂದಿದೆ. 28 ಸ್ಥಾ‌ನ ಗೆಲ್ಲುವ ಮೂಲಕ ಕಳೆದುಕೊಂಡಿದ್ದನ್ನು ಬಡ್ಡಿಸಹಿತ ವಾಪಸ್ ಪಡೆದುಕೊಳ್ಳಬೇಕು" ಎಂದು ತಿಳಿಸಿದರು.

ಮಾಜಿ ಸಮುಖ್ಯಮಂತ್ರಿ ಎಂ ಬಸವರಾಜ ಬೊಮ್ಮಾಯಿ ಮಾತನಾಡಿ, "ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಅದಕ್ಕಾಗಿ ಮೋದಿ, ಶಾ, ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರಗೆ ಸಂಪೂರ್ಣ ಯಶಸ್ಸು ಸಿಗಲಿ, ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಗೆ ದೊಡ್ಡ ಶಕ್ತಿ, ಉತ್ಸಾಹ ಬಂದಿದೆ. ಎಲ್ಲರೂ ಒಂದಾಗಿ ಹೋದರೆ ಲೋಕಸಭೆ ಚುನಾವಣೆಯಲ್ಲಿ ಯಶಸ್ವಿಯಾಗುತ್ತೇವೆ. ಆ ಕೆಲಸವನ್ನು ವಿಜಯೇಂದ್ರ ಮಾಡುತ್ತಾರೆ. ಭಾರತ ವಿಶ್ವಕಪ್ ಗೆಲ್ಲುವ ವಿಶ್ವಾಸ ಇದೆ. ಅದೇ ರೀತಿ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ 28 ಲೋಕಸಭೆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ" ಎಂದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, "ವಿಜಯೇಂದ್ರ ಅಧ್ಯಕ್ಷರಾದಾಗ ರಾಜ್ಯ ಆಶ್ಚರ್ಯಪಟ್ಟಿತು. ಅದೇ ರೀತಿ 28 ಲೋಕಸಭೆ ಕ್ಷೇತ್ರ ಗೆದ್ದು ರಾಜ್ಯವೇ ಆಶ್ಚರ್ಯ ಪಡಬೇಕು. ಸಮಸ್ಯೆಯನ್ನು ಜೀರ್ಣ ಮಾಡಿಕೊಳ್ಳಬೇಕು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡೋಣ. ವಿಜಯೇಂದ್ರ ಅವರಿಗೆ ಯಶಸ್ಸು ಸಿಗಲಿ" ಎಂದು ಹಾರೈಸಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, "ಪಕ್ಷಕ್ಕೆ ಸೋಲಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮನನೊಂದು ಮನೆ ಸೇರಿದರು. ಈಗ ಅವರೆಲ್ಲ ರಾಜ್ಯಾದ್ಯಂತ ಸಂಭ್ರಮ ಆಚರಿಸುತ್ತಿದ್ದಾರೆ. ಪಕ್ಷದ ಹಿನ್ನಡೆಗೆ ಹಲವು ಕಾರಣ ಇರಬಹುದು. ಆದರೆ ಲೋಕಸಭೆ ಚುನಾವಣೆಯಲ್ಲಿ ವಿಜಯೇಂದ್ರ ನಾಯಕತ್ವದಲ್ಲಿ ಮೋದಿ ಅವರ ಕೈ ಬಲಪಡಿಸಬೇಕು. ವಿಜಯೇಂದ್ರ ಅವರಿಗೆ ಬೆಂಬಲ ಕೊಡೋಣ, ಮಾರ್ಗದರ್ಶನ ಮಾಡೋಣ" ಎಂದರು.

ಇದನ್ನೂ ಓದಿ: ವಿಜಯೇಂದ್ರ ಪದಗ್ರಹಣ: ಬಿಜೆಪಿ ಕಚೇರಿಯಲ್ಲಿ ಹೋಮ, ಹವನ; ಜಾನಪದ ಕಲಾತಂಡಗಳ ಪ್ರದರ್ಶನ

Last Updated : Nov 15, 2023, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.