ಬೆಂಗಳೂರು: 100 ಕೋಟಿ ವ್ಯಾಕ್ಸಿನ್ ಬಗ್ಗೆ ಸಂಭ್ರಮ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಧಾನಿ, ಆರೋಗ್ಯ ಸಚಿವರು ಸಂಭ್ರಮಿಸುತ್ತಿದ್ದಾರೆ. ಕೊರೊನಾ ಜನರನ್ನ ಸಂಕಷ್ಟಕ್ಕೀಡುಮಾಡಿದೆ. ಜನರಿಗೆ ಎಲ್ಲರೂ ಸಹಕಾರ ನೀಡಿದ್ರು. ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದೆವು. ಇದು ಸಂಭ್ರಮ ಪಡುವ ವಿಷಯವಲ್ಲ. ಸ್ನೇಹಿತರು, ಸಂಬಂಧಿಕರನ್ನ ಕಳೆದುಕೊಂಡಿದ್ದೇವೆ. 100 ಕೋಟಿ ಲಸಿಕೆ ಕೊಟ್ಟಿದ್ದೇವೆ ಎಂದಿದ್ದಾರೆ.
ಅಂದು ಗಂಟೆ ಬಾರಿಸಿ ಎಂದವರು ಈಗ ಲಸಿಕೆ ಬಗ್ಗೆ ಸಂಭ್ರಮ ಮಾಡ್ತಿದ್ದಾರೆ:
ಯಾವ ಆಸ್ಪತ್ರೆಗಳಲ್ಲಿ ಎಷ್ಟು ಕೊಟ್ಟಿದ್ದಾರೆ ಲೆಕ್ಕವಿಲ್ಲ . ಚಪ್ಪಾಳೆತಟ್ಟಿ, ಗಂಟೆ ಬಾರಿಸಿ ಎಂದವರು ಈಗ ಲಸಿಕೆ ಬಗ್ಗೆ ಸಂಭ್ರಮ ಮಾಡ್ತಿದ್ದಾರೆ. ಇದು ಸಂಭ್ರಮ ಪಡುವ ವಿಷಯವೇ? ಲಸಿಕೆ ಉತ್ಪಾದನೆಯಲ್ಲಿ ದೇಶ ಅಗ್ರಗಣ್ಯ ಸ್ಥಾನದಲ್ಲಿದೆ. 97 ಕೋಟಿ ಜನರಿಗೆ ಮೊದಲ ಲಸಿಕೆ, 28ಕೋಟಿ ಜನರಿಗೆ ಎರಡನೇ ಡೋಸ್ ಕೊಟ್ಟಿದ್ದಾರೆ.
ಬೇರೆ ದೇಶಗಳಲ್ಲಿ ಬೂಸ್ಟರ್ ಕೊಡ್ತಿದ್ದಾರೆ. ಇಂತಹ ಪ್ರಚಾರ ಗಿಟ್ಟಿಸುವುದು ಸರಿಯಲ್ಲ ಎಂದ ಅವರು, ಅಮೆರಿಕಾದಲ್ಲಿ 80 ದಿನದಲ್ಲೇ ಲಸಿಕೆ ಕೊಟ್ಟರು. ಮೊದಲ ಡೋಸ್ ಎಲ್ಲ ಜನರಿಗೆ ನೀಡಿದ್ರು. ಎರಡನೇ ಡೋಸ್ ಮುಗಿದು ಬೂಸ್ಟರ್ ನೀಡ್ತಿದ್ದಾರೆ ಎಂದು ವಿವರಿಸಿದರು.
ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದಿದ್ದಾರೆ. ಶ್ರೀಮಂತರು ವಿದೇಶಗಳಲ್ಲಿ ಲಸಿಕೆ ಪಡೆದಿದ್ದಾರೆ. ಬಡವರು ಲಸಿಕೆ ಇಲ್ಲದೇ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ ಸಂಭ್ರಮ ಪಡುವ ಅಗತ್ಯವಿತ್ತೇ? ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಂತಾರಾಷ್ಟ್ರೀಯ ಮಟ್ಟದ ವಿಶ್ವಗುರು ಆಗಿರುವ ನರೇಂದ್ರ ಮೋದಿ, ವಿದೇಶದಲ್ಲಿ ಅಡಗಿರುವ ನೀರವ್ ಮೋದಿ, ಚೋಕ್ಸಿ, ವಿಜಯ್ ಮಲ್ಯ ಅವರನ್ನು ಮೊದಲು ಕರೆತರಲಿ. ಸಾಮರ್ಥ್ಯ ತೋರಿಸಲಿ ಎಂದು ಸವಾಲು ಹಾಕಿದರು.
ಟನ್ ಗಟ್ಟಲೆ ಗಾಂಜಾ ಸಿಕ್ಕರೂ ಬಿಡ್ತಾರೆ:
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ವಿಚಾರದ ಬಗ್ಗೆ ಮಾತನಾಡಿ, ಅದಾನಿ ಬಂದರಿನಲ್ಲಿ 80 ಟನ್ ಗಾಂಜಾ ಬಂದಿದೆ. ಅದರ ಡೀಲರ್ ಯಾರು? ಅದಾನಿ ಯಾರು ಅಂತ ನೀವೇ ಹೇಳಿ. 8 ಸಾವಿರ ಕೆ.ಜಿ ಗಾಂಜಾ, ವೈಟ್ ಶುಗರ್ ಬಂದಿದೆ. ಅದೂ ಕೂಡ ಎಸ್ ಸಿಜಿ ಪೋರ್ಟ್ ನಿಂದ. ಅರ್ಧ ಗ್ರಾಂ ಇರುವವರನ್ನ ಜೈಲಿಗೆ ಹಾಕ್ತಾರೆ. ಟನ್ ಗಟ್ಟಲೆ ಸಿಕ್ಕಿದವರನ್ನ ಬಿಡ್ತಾರೆ. ಅದಾನಿ ರಕ್ಷಣೆಗಾಗಿ ಶಾರುಕ್ ಪುತ್ರನ ಬಂಧನ ಮಾಡಲಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು.
ಹಳ್ಳಿಗಳಲ್ಲಿ ವ್ಯಾಕ್ಸಿನ್ ಗೆ ಜನ ಬರ್ತಿಲ್ಲವೆಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇವರ ಬಳಿ ವ್ಯಾಕ್ಸಿನ್ ಸ್ಟಾಕ್ ಇಲ್ಲ. ಅದಕ್ಕೆ ಸಬೂಬು ಹೇಳ್ತಾರೆ. ಇವರು ಯಾರ ಹಣದಲ್ಲಿ ವ್ಯಾಕ್ಸಿನ್ ಕೊಡ್ತಾರೆ. ಪಿತ್ರಾರ್ಜಿತ ಆಸ್ತಿಯಿಂದ ಕೊಡ್ತಾರಾ?ಸಾರ್ವಜನಿಕರ ತೆರಿಗೆ ಹಣದಿಂದ ಕೊಡೋದು ಎಂದು ಪ್ರಶ್ನಿಸಿದರು.