ಬೆಂಗಳೂರು : ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕ್ತಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ ಸಿ ನಾಗೇಶ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡ್ತಿದಾರೆ. ಸ್ವಾಮೀಜಿಗಳನ್ನು ಇದರಲ್ಲಿ ಸಿದ್ದರಾಮಯ್ಯ ಎಳೆದು ತಂದಿರೋದು ಸರಿಯಲ್ಲ. ಸಿದ್ದರಾಮಯ್ಯ ಸ್ವಾಮೀಜಿಗಳ ಕ್ಷಮೆ ಕೇಳಲಿ. ಪಂಚರಾಜ್ಯ ಚುನಾವಣೆ ಬಳಿಕ ಹತಾಶರಾಗ್ತಾರೆ ಅಂದುಕೊಂಡಿದ್ವಿ. ಚುನಾವಣೆ ಮುಂಚೆನೇ ಸೋಲು ಒಪ್ಪಿಕೊಂಡಿದ್ರಾ ಅಂತಾ ಅನ್ನಿಸ್ತಿದೆ ಎಂದು ಹರಿಹಾಯ್ದರು.
ಒಬ್ಬ ಒಳ್ಳೆಯ ರಾಜಕಾರಣಿ, ಸಿಎಂ ಆಗಿ ಯಶಸ್ವಿಯಾಗಿ ಅವಧಿ ಮುಗಿಸಿದವರು ಈ ರೀತಿ ಮಾತನಾಡುವುದು ಸರಿಯಲ್ಲ. ಎಲ್ಲವನ್ನೂ ತ್ಯಾಗ ಮಾಡಿ ಸಮಾಜಕ್ಕಾಗಿ ಸೇವೆ ಮಾಡ್ತಿರುವ ಸ್ವಾಮೀಜಿಗಳ ಬಗ್ಗೆ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದರು. ಪಠ್ಯ ಪುಸ್ತಕದ ವಿಚಾರ ಮಾತನಾಡಿ, ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹಗಳು.
ದಯಮಾಡಿ ಅದನ್ನು ಪ್ರಕಟಣೆ ಮಾಡಬಾರದು. ಮುಂದಿನ ವಾರ ಸುದ್ದಿಗೋಷ್ಠಿ ಮಾಡ್ತೇವೆ. ಯಾವುದೇ ವೈಭವೀಕರಣ ಮಾಡದೆ ಸತ್ಯದ ಚರಿತ್ರೆ ತರುವ ಪ್ರಯತ್ನ ಮಾಡ್ತೇವೆ. ಯಾರ ಮನಸ್ಸಿಗೆ ನೋವು ಆಗದಂತೆ. ಹಾಗೆಯೇ ನೋವು ಆದ ಮನಸ್ಸಿಗೆ ರಿಲೀಫ್ ಕೊಡುವಂತೆ ಕೆಲಸ ಮಾಡ್ತೇವೆ ಎಂದರು.
ಇದನ್ನೂ ಓದಿ : ರಾಜ್ಯದಲ್ಲಿ ಈ ಯುಗಾದಿಗೆ ಕರೆಂಟ್ ಶಾಕ್.. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ!?
ಶಾಸಕ ಬಸನಗೌಡ ಯತ್ನಾಳ್ ಮಾತನಾಡಿ, ಹಿಜಾಬ್ ಕಾಂಗ್ರೆಸ್ ಪ್ರೇರಿತ ಸಮಸ್ಯೆ. ವ್ಯವಸ್ಥಿತವಾಗಿ ಪ್ರಚೋದನೆ ಮಾಡ್ತಿದಾರೆ. ಸಿದ್ದರಾಮಯ್ಯ ಹಿಂದೂ ಅವಹೇಳನ ಮಾಡ್ತಾರೆ. ಮುಸ್ಲಿಮರ ತುಷ್ಠೀಕರಣ ಮಾಡ್ತಿದಾರೆ. ಅವರಿಗೆ ಹಿಂದೂ ಧರ್ಮವನ್ನ ಅವಹೇಳನ ಮಾಡುವುದೇ ಕೆಲಸ. ಸಿದ್ದರಾಮಯ್ಯ ಹಿಂದೂ ಕೇಸರಿ ಪೇಟ ಹಾಕಿದರೆ ಅದನ್ನ ಕಿತ್ತು ಎಸಿತಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ನೀತಿಯನ್ನ ಮುಂದುವರಿಸ್ತಾ ಇದ್ದಾರೆ ಎಂದು ಆರೋಪಿಸಿದರು.
ಶಾಲಾ ಪಠ್ಯ ಪರಿಷ್ಕರಣೆಯನ್ನು ನಾನು ಸ್ವಾಗತಿಸುತ್ತೇನೆ. ಯಾರ್ಯಾರ ವೈಭವೀಕರಣ ಇದೆಯೋ ಅದಕ್ಕೆಲ್ಲ ಕಡಿತ ಹಾಕಬೇಕಿದೆ. ವೈಭವೀಕರಣ ತೆಗೆದು ವಾಸ್ತವಿಕತೆಯ ಪಾಠ ಅಳವಡಿಸಲಿ. ಟಿಪ್ಪು, ಅಕ್ಬರ್, ಬಾಬರ್ ವೈಭವೀಕರಿಸಿ ಪಠ್ಯದಲ್ಲಿ ಸೇರಿಸಲಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಶಿವಾಜಿ ಕುರಿತ ಇತಿಹಾಸ ತಿಳಿಸಬೇಕಿದೆ ಎಂದು ಹೇಳಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮಾತನಾಡಿ, ಹಿಜಾಬ್ ವಿವಾದ ಹುಟ್ಟಿದ್ದು, ಬಿಜೆಪಿಯಿಂದಲ್ಲ ಕಾಂಗ್ರೆಸ್‌ನಿಂದ. ಕಾಂಗ್ರೆಸ್ ಶಾಸಕರ ಪ್ರಚೋದನಾತ್ಮಕ ಹೇಳಿಕೆಗಳಿಂದ ವಿವಾದ ಸೃಷ್ಟಿಯಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರನ್ನು ವಿವಾದದಲ್ಲಿ ಕಾಂಗ್ರೆಸ್ ಶಾಸಕರು ಬಲಿಪಶು ಮಾಡಿದ್ದಾರೆ ಎಂದು ಆರೋಪಿಸಿದರು.