ETV Bharat / state

ಸೋಮವಾರವೇ ವಿಧಾನಸೌಧದಲ್ಲಿ ಆಯುಧ ಪೂಜೆ: ಕಚೇರಿಗಳಿಗೆ ರಂಗೋಲಿ, ಹೂ ಅಲಂಕಾರದ ಕಳೆ - ಆಯುಧ ಪೂಜೆ

ಮಂಗಳವಾರ ಆಯುಧ ಪೂಜೆಯ ದಿನವಾಗಿದ್ದರೂ, ಸರ್ಕಾರಿ ರಜೆಯ ಹಿನ್ನೆಲೆ ಸೋಮವಾರವೇ ಶಕ್ತಿಸೌಧದಲ್ಲಿ ಸಿಬ್ಬಂದಿ ತಮ್ಮ ಕಚೇರಿಗಳಲ್ಲಿ ಆಯುಧ ಪೂಜೆ ನೆರವೇರಿಸಿದರು.

Ayudha pooja Celebration in vidhana soudha
ಶಕ್ತಿಸೌಧದಲ್ಲಿ ಆಯುಧ ಪೂಜೆ
author img

By

Published : Oct 4, 2022, 7:24 AM IST

ಬೆಂಗಳೂರು: ವಿಧಾನಸೌಧದ ಕಚೇರಿಗಳಲ್ಲಿ ಸೋಮವಾರವೇ ದಸರಾ ಹಬ್ಬ ಕಳೆಗಟ್ಟಿತ್ತು‌. ಆಯುಧ ಪೂಜೆ ಹಿನ್ನೆಲೆ ಸೋಮವಾರ ಶಕ್ತಿಸೌಧದ ಸಚಿವರುಗಳ ಕಚೇರಿಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಶಕ್ತಿಸೌಧದದ ಕಾರಿಡಾರ್​ಗಳಲ್ಲಿ ರಂಗೋಲಿಯ ಬಣ್ಣದ ಚಿತ್ತಾರದೊಂದಿಗೆ ವಿಶೇಷ ಕಳೆ ಮೂಡಿದೆ. ಸಚಿವರು, ಕ್ಯಾಬಿನೆಟ್ ಹಾಲ್, ಸಿಎಂ ಕಚೇರಿ, ಅಧಿಕಾರಿಗಳ ಕಚೇರಿಗಳಿಗೆ ಆಯುಧ ಪೂಜೆ ಪ್ರಯುಕ್ತ ಹೂವಿನ ಅಲಂಕಾರ ಮಾಡಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧದ ಕಚೇರಿಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.

ಶಕ್ತಿಸೌಧದಲ್ಲಿ ಆಯುಧ ಪೂಜೆ

ಕಳೆದ ಶನಿವಾರದಿಂದಲೇ ಶಕ್ತಿಸೌಧದ ಕೆಲ ಕಚೇರಿಗಳಲ್ಲಿ ಆಯುಧ ಪೂಜೆ ಮಾಡಲಾಗಿತ್ತು. ಮಂಗಳವಾರ ಮತ್ತು ಬುಧವಾರ ರಜೆ ಇರುವ ಕಾರಣ ಸೋಮವಾರವೇ ಆಯುಧ ಪೂಜೆ ಕೈಗೊಳ್ಳಲಾಯಿತು.

ಇದನ್ನೂ ಓದಿ: ದುರ್ಗಾಷ್ಟಮಿಯಂದು ಕನ್ನಿಕಾಪರಮೇಶ್ವರಿ ದೇವಿಗೆ ವಿಶೇಷ ಬಿಸ್ಕೆಟ್ ಅಲಂಕಾರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.