ETV Bharat / state

ಆಟೋ ದರ ಪರಿಷ್ಕರಣೆ ಬೆನ್ನಲ್ಲೆ ಗ್ಯಾಸ್ ದರ ಏರಿಕೆ.. ಸಂಕಷ್ಟದ ಸುಳಿಯಲ್ಲಿ ಚಾಲಕರು - 8 ವರ್ಷಗಳ ಬಳಿಕ ಆಟೋ ದರ ಏರಿಕೆ

ಸರ್ಕಾರ ಆಟೋ ಮೀಟರ್ ದರ ಪರಿಷ್ಕರಣೆ ಮಾಡಿದೆ. ಇದನ್ನ ಸ್ವಾಗತಿಸುತ್ತೇವೆ. ಆದರೆ, ಒಂದು ಕೈನಲ್ಲಿ ಕೊಟ್ಟು ಇನ್ನೊಂದು ಕೈನಲ್ಲಿ ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ. ಗ್ಯಾಸ್ ದರವೂ ಇಂದಿನಿಂದ ಹೆಚ್ಚಾಗಿದೆ. ಈ ರೀತಿಯಾದರೆ ನಾವು ಜೀವನ ಮಾಡೋದು ಹೇಗೆ ಅಂತಾ ಪ್ರಶ್ನೆ ಮಾಡಿದ್ದಾರೆ.ಒಂದು ಲೀಟರ್ ಆಟೋ ಗ್ಯಾಸ್ ದರದ ಮೇಲೆ 3 ರುಪಾಯಿ 5 ಪೈಸೆ ಏರಿಕೆಯಾಗಿದೆ. ನಿನ್ನೆ 66 ರೂಪಾಯಿ ಇದ್ದ ಗ್ಯಾಸ್ ಇಂದು 69.50 ಪೈಸೆಗೆಯಾಗಿದೆ. ಸರ್ಕಾರದ ಬೆಲೆ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ..

auto-gas-price-increased-after-auto-rate-revision
ಆಟೋ ದರ ಪರಿಷ್ಕರಣೆ ಬೆನ್ನಲ್ಲೆ ಗ್ಯಾಸ್ ದರ ಏರಿಕೆ
author img

By

Published : Dec 1, 2021, 1:30 PM IST

ಬೆಂಗಳೂರು : ಕೊರೊನಾ ಸೋಂಕು ಹಾಗೂ ಲಾಕ್​​​​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಚಾಲಕರು ಲಾಕ್​​ಡೌನ್ ಮುಗಿದ ಬಳಿಕ ಚೇತರಿಕೆ ಕಾಣುತ್ತಿದ್ದಾರೆ.

ಆದರೆ, ಬೆಲೆ ಏರಿಕೆಯಿಂದಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತೈಲ ದರ ಹಾಗೂ ಆಟೋಗ್ಯಾಸ್ ದರದಲ್ಲೂ ಏರಿಕೆಯಾಗಿದ್ದು, ಬದುಕು ಇನ್ನಷ್ಟು ದುಸ್ಥರವಾಗಿದೆ.

ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಆಟೋ ದರ ಪರಿಷ್ಕರಣೆಯಾಗಿದೆ. ಇಂದಿನಿಂದ ಆಟೋ ಸೇವೆಯ ಹೊಸ ದರವೂ ಜಾರಿಯಾಗಿದೆ. 2013ರಲ್ಲಿ ಕೊನೆಯದಾಗಿ ಆಟೋ ಮೀಟರ್ ದರ ಹೆಚ್ಚಳವಾಗಿತ್ತು. ಸದ್ಯ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವ ಕಾರಣ ಮೀಟರ್ ದರ ಹೆಚ್ಚಳಕ್ಕೆ ಚಾಲಕರು ಎರಡು ವರ್ಷದಿಂದ ಪಟ್ಟು ಹಿಡಿದಿದ್ದರು.

ಆಟೋ ಗ್ಯಾಸ್ ದರ ಏರಿಕೆಗೆ ಚಾಲಕರ ಅಸಮಾಧಾನ..

ಆಟೋ ಗ್ಯಾಸ ದರ ಆಕಾಶಕ್ಕೆ ಜಿಗಿದ ಕಾರಣ ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಈ ಕಾರಣದಿಂದ ದರ ಏರಿಕೆ ಅನಿವಾರ್ಯ ಎಂದು ಆಟೋ ಯೂನಿಯನ್​ಗಳು ಪಟ್ಟು ಹಿಡಿದಿದ್ದವು.

ಆಟೋ ಮೀಟರ್ ಹೊಸ ದರ ಇಂದಿನಿಂದ ಜಾರಿಯೇನೋ ಆಗಿದೆ. ಆದರೆ, ಆಟೋಚಾಲಕರ ಅಸಮಾಧಾನ ಮುಂದುವರೆದಿದೆ‌. ದರ ಏರಿಕೆಗೆ ಅನುಮತಿ ಸಿಕ್ಕಿತಾದರೂ ಸರ್ಕಾರದಿಂದ ಬರೆ ಮುಂದುವರೆದಿದೆ. ಇದು ಆಟೋ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

ಆಟೋ ಗ್ಯಾಸ್ ದರ ಏರಿಕೆ : ಆಟೋ ಪ್ರಯಾಣ ದರ ಏರಿಕೆ ಮಾಡಿದ್ದ ಬೆನ್ನಲ್ಲೆ ಮತ್ತೆ ಗ್ಯಾಸ್ ದರ ಏರಿಕೆಯಾಗಿದೆ. ಹೀಗಾದರೆ, ಆಟೋ ಓಡಿಸುವುದು ಕಷ್ಟವಾಗಲಿದೆ ಎಂದು ಆಟೋ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಅಸಮಾಧಾನ ಹೊರ ಹಾಕಿದ್ದಾರೆ.

ಸರ್ಕಾರ ಆಟೋ ಮೀಟರ್ ದರ ಪರಿಷ್ಕರಣೆ ಮಾಡಿದೆ. ಇದನ್ನ ಸ್ವಾಗತಿಸುತ್ತೇವೆ. ಆದರೆ, ಒಂದು ಕೈನಲ್ಲಿ ಕೊಟ್ಟು ಇನ್ನೊಂದು ಕೈನಲ್ಲಿ ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ. ಗ್ಯಾಸ್ ದರವೂ ಇಂದಿನಿಂದ ಹೆಚ್ಚಾಗಿದೆ. ಈ ರೀತಿಯಾದರೆ ನಾವು ಜೀವನ ಮಾಡೋದು ಹೇಗೆ ಅಂತಾ ಪ್ರಶ್ನೆ ಮಾಡಿದ್ದಾರೆ.

ಒಂದು ಲೀಟರ್ ಆಟೋ ಗ್ಯಾಸ್ ದರದ ಮೇಲೆ 3 ರುಪಾಯಿ 5 ಪೈಸೆ ಏರಿಕೆಯಾಗಿದೆ. ನಿನ್ನೆ 66 ರೂಪಾಯಿ ಇದ್ದ ಗ್ಯಾಸ್ ಇಂದು 69.50 ಪೈಸೆಗೆಯಾಗಿದೆ. ಸರ್ಕಾರದ ಬೆಲೆ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಓಲಾ, ಊಬರ್​​​ನಲ್ಲಿ ಇನ್ನೂ ಹಳೆಯ ದರವೇ ಇದ್ದು, ಹೊಸ ದರ ಅಪ್ಡೇಟ್ ಮಾಡಿಲ್ಲ. ಇಲ್ಲಿ ನೋಡಿದ್ರೆ ಗ್ಯಾಸ್ ದರ ಹೆಚ್ಚಳ ಮಾಡಿದ್ದಾರೆ. ಹೀಗಾದರೆ, ನಾವು ಜೀವನ ಮಾಡುವುದಾರೆ ಹೇಗೆ.? ಆಟೋ ಓಡಿಸುವುದು ಹೇಗೆ..? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಿನಿಮಮ್ ಚಾರ್ಜ್ 25 ರೂ.ನಿಂದ 30ಕ್ಕೆ : ಈ ಹಿಂದೆ ಮಿನಿಮಮ್ ಚಾರ್ಜ್ 25 ರೂಪಾಯಿ ಇತ್ತು. ಇದೀಗ ಕನಿಷ್ಠ ದರ ಮೊದಲ 2 ಕಿಲೋಮೀಟರ್​​ಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ನಂತರ ಪ್ರತಿ ಕಿಲೋ ಮೀಟರ್​ಗೆ 15 ರೂ. ದರ ನಿಗದಿಯಾಗಿದೆ.

ಇದನ್ನೂ ಓದಿ: ಗ್ರಾಹಕರ ಜೇಬಿಗೆ ಕತ್ತರಿ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 100 ರೂ. ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.