ETV Bharat / state

ಪೊಲೀಸರ ವೇತನ ಪರಿಷ್ಕರಣೆ ತಡೆಹಿಡಿದಿಲ್ಲ: ಗೃಹ ಸಚಿವ ಬೊಮ್ಮಾಯಿ

ತಾಂತ್ರಿಕ ಕಾರಣಗಳಿಂದಾಗಿ ಒಂದಡರಡು ದಿನ ವಿಳಂಬ ಮಾಡಲಾಗಿದೆ ಅಷ್ಟೇ. ಎರಡು ದಿನಗಳ ಒಳಗಾಗಿ ತಾಂತ್ರಿಕ ಕಾರಣ ಸರಿಪಡಿಸಿ ಹೊಸ ವೇತನ ಪರಿಷ್ಕರಣಾ ಪಟ್ಟಿ ಪ್ರಕಟವಾಗುತ್ತದೆ‌ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಪೊಲೀಸರ ವೇತನ ಪರಿಷ್ಕರಣೆ ತಡೆಹಿಡಿದಿಲ್ಲ: ಗೃಹ ಸಚಿವ ಬೊಮ್ಮಾಯಿ
author img

By

Published : Sep 18, 2019, 5:27 PM IST

ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆಯನ್ನು ತಡೆಹಿಡಿದಿಲ್ಲ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಪೊಲೀಸರ ವೇತನ ಪರಿಷ್ಕರಣೆ ತಡೆಹಿಡಿದಿಲ್ಲ: ಗೃಹ ಸಚಿವ ಬೊಮ್ಮಾಯಿ

ವಿಕಾಸಸೌಧದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣಗಳಿಂದಾಗಿ ಒಂದಡರಡು ದಿನ ವಿಳಂಬ ಮಾಡಲಾಗಿದೆ ಅಷ್ಟೇ. ಎರಡು ದಿನಗಳ ಒಳಗಾಗಿ ತಾಂತ್ರಿಕ ಕಾರಣ ಸರಿಪಡಿಸಿ ಹೊಸ ವೇತನ ಪರಿಷ್ಕರಣಾ ಪಟ್ಟಿ ಪ್ರಕಟವಾಗುತ್ತದೆ‌ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಅವರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇಲ್ಲ. 2008ರಲ್ಲೂ ಪ್ರವಾಹ ಆಗಿತ್ತು. ಆಗ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಅವರು ರಾಜ್ಯದಲ್ಲಿ ಸತತ ಬರ ಇದ್ದರೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಪರಿಹಾರ ವಿತರಣೆಯನ್ನೂ ಮಾಡಿರಲಿಲ್ಲ. ಈಗ ಪ್ರತಿಭಟನೆಗೆ ಬಂದಿದ್ದಾರೆ ಎಂದು ಕಿಡಿ ಕಾರಿದರು. ನೆರೆ ಹಾವಳಿ ಕುರಿತ ವರದಿ ಕೇಂದ್ರಕ್ಕೆ ಕೊಟ್ಟಿದ್ದೇವೆ. ಕೆಲವೇ ದಿನದಲ್ಲಿ ಪರಿಹಾರ ಬಿಡುಗಡೆಯಾಗಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಹಣ ಬಿಡುಗಡೆ ಮಾಡೇ ಮಾಡುತ್ತಾರೆ: ಇಷ್ಟರಲ್ಲೇ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡೇ ಮಾಡುತ್ತದೆ. ರಾಜ್ಯ ಸರ್ಕಾರವೂ ಸಹ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ ಎಂದು ಡಿಸಿಎಂ‌ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.

ಸಂಜೆಯೊಳಗೆ ದಂಡ ಪ್ರಮಾಣ ಕಡಿಮೆ: ಸಂಜೆಯೊಳಗಾಗಿ ಟ್ರಾಫಿಕ್ ದಂಡ ಪ್ರಮಾಣವನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗುತ್ತದೆ ಎಂದು ಡಿಸಿಎಂ‌ ಲಕ್ಷ್ಮಣ್ ಸವದಿ ಈ ವೇಳೆ ತಿಳಿಸಿದರು. ಕೇರಳ ಮಾದರಿಯಲ್ಲೇ ರಾಜ್ಯದಲ್ಲೂ ದಂಡದ ಪ್ರಮಾಣ ಕಡಿಮೆಯಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂಬುದನ್ನು ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಪ್ರಕಟಿಸುತ್ತೇವೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ‌ ಪೊಲೀಸರಿಂದ ವ್ಯಾಪಕ ಆಕ್ರೋಶ:

Auradkar Report Interruption matter
ಸಾಮಾಜಿಕ ಜಾಲತಾಣದಲ್ಲಿ‌ ಪೊಲೀಸರ ವ್ಯಾಪಕ ಆಕ್ರೋಶ

ಔರಾದ್ಕರ್ ವರದಿ ತಡೆಹಿಡಿದ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ‌ ಪೊಲೀಸರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಔರಾದ್ಕರ್ ವರದಿ ಅನ್ವಯ 30% ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗೆ ಮನವಿ ಇತ್ತು. ಕುಮಾರಸ್ವಾಮಿ ಸರ್ಕಾರ 12% ವೇತನ ಪರಿಷ್ಕರಣೆ ಮಾಡಿ ಅಕ್ಟೊಬರ್ 1 ರಿಂದ ಜಾರಿ ಬರುವಂತೆ ಆದೇಶ ಹೊರಡಿಸಿತ್ತು. ಬಿಎಸ್ವೈ ಸರ್ಕಾರ ಅಲ್ಪ ಮಟ್ಟದ ವೇತನ ಏರಿಕೆಯನ್ನು ತಡೆಹಿಡಿದಿದ್ದು ಯಾಕೆ ಎಂದು ಪ್ರಶ್ನಿಸಿ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ವೇತನ ತಾರತಮ್ಯ ಶಿಘ್ರ ಪರಿಹರಿಸಿ ವರದಿ ಜಾರಿಗೆ ತರದಿದ್ದರೆ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಪ್ರತಿಭಟನೆ ನಡೆಸುವುದಾಗಿ ಎಚ್ಚರ ನೀಡಿತ್ತು

Intro:Body:KN_BNG_03_BASAVARAJBOMMAI_BYTES_SCRIPT_7201951

ಪೊಲೀಸರ ವೇತನ ಪರಿಷ್ಕರಣೆ ತಡೆಹಿಡಿದಿಲ್ಲ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆಯನ್ನು ತಡೆಹಿಡಿದಿಲ್ಲ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಸ್ಪಷ್ಟಪಡಿಸಿದರು.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕಾರಣಗಳಿಂದಾಗಿ ಒಂದಡರಡು ದಿನ ವಿಳಂಬ ಮಾಡಲಾಗಿದೆ ಅಷ್ಟೇ. ಎರಡು ದಿನಗಳ ಒಳಗಾಗಿ ತಾಂತ್ರಿಕ ಕಾರಣ ಸರಿಪಡಿಸಿ ಹೊಸ ವೇತನ ಪರಿಷ್ಕರಣಾ ಪಟ್ಟಿ ಪ್ರಕಟವಾಗುತ್ತದೆ‌ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಅವರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇಲ್ಲ. 2008ರಲ್ಲೂ ಪ್ರವಾಹ ಆಗಿತ್ತು. ಆಗ ಅವರು ತಲೆ ಕೆಡಿಸಿಕೊಂಡಿರಲಿಲ್ಲ.ವಅವರು ರಾಜ್ಯದಲ್ಲಿ ಸತತ ಬರ ಇದ್ದರೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಪರಿಹಾರ ವಿತರಣೆಯನ್ನೂ ಮಾಡಿರಲಿಲ್ಲ. ಈಗ ಪ್ರತಿಭಟನೆಗೆ ಬಂದಿದ್ದಾರೆ ಎಂದು ಕಿಡಿ ಕಾರಿದರು.

ನೆರೆ ಹಾವಳಿ ಕುರಿತ ವರದಿ ಕೇಂದ್ರಕ್ಕೆ ಕೊಟ್ಟಿದ್ದೇವೆ. ಕೆಲವೇ ದಿನದಲ್ಲಿ ಪರಿಹಾರ ಬಿಡುಗಡೆಯಾಗಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಹಣ ಬಿಡುಗಡೆ ಮಾಡೇ ಮಾಡುತ್ತಾರೆ:

ಇಷ್ಟರಲ್ಲೇ ಕೇಂದ್ರ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡೇ ಮಾಡುತ್ತದೆ ಆತುರ ಏಕೆ ಎಂದು ಡಿಸಿಎಂ‌ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರವೂ ಸಹ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ ಎಂದು ತಿಳಿಸಿದರು.

ಸಂಜೆಯೊಳಗೆ ದಂಡ ಪ್ರಮಾಣ ಕಡಿಮೆ:

ಸಂಜೆಯೊಳಗಾಗಿ ಟ್ರಾಫಿಕ್ ದಂಡ ಪ್ರಮಾಣವನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗುತ್ತದೆ ಎಂದು ಡಿಸಿಎಂ‌ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಕೇರಳ ಮಾದರಿಯಲ್ಲೇ ರಾಜ್ಯದಲ್ಲೂ ದಂಡದ ಪ್ರಮಾಣ ಕಡಿಮೆಯಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬೇಕು ಎಂಬುದನ್ನು ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಪ್ರಕಟಿಸುತ್ತೇವೆ ಎಂದು ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.