ಧಾರವಾಡ : ಚೆಕ್ನಲ್ಲಿ ನಕಲಿ ಸಹಿ ಮಾಡಿ ಬ್ಯಾಂಕ್ನಿಂದ ಹಣ ಪಡೆಯಲು ಯತ್ನಿಸಿದ ವಂಚಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಭಾಗ ನಿವಾಸಿಯಾದ ಯುವರಾಜ್ ಬಿರಾದಾರ ಸೇರಿದಂತೆ 9 ಜನ ಸೆರೆಯಾಗಿದ್ದಾರೆ.
ಧಾರವಾಡದ ಎನ್‌ಟಿಟಿಎಫ್ ಬಳಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಕಂಪನಿಯೊಂದರ ಚೆಕ್‌ಗೆ ನಕಲಿ ಸಹಿ ಬಳಸಿ ವಂಚಕರು 2.50 ಕೋಟಿ ಹಣ ಪಡೆಯಲು ಯತ್ನಿಸಿದ್ದಾರೆ.
ಸಹಿ ಬಗ್ಗೆ ಸಂಶಯಗೊಂಡ ಬ್ಯಾಂಕ್ ವ್ಯವಸ್ಥಾಪಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ವಿಚಾರಣೆ ನಡೆಸಿದಾಗ ನಕಲಿ ಸಹಿ ಮಾಡಿ ಹಣ ದೋಚುವ ಸಂಚು ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಸೇರಿದಂತೆ ನವೀನ ಕುಮಾರ, ಜಾಕ್ಮೆನ್ ಹಣಗಿ, ನಿಜಲಿಂಗಪ್ಪ ಪಾಟೀಲ, ದತ್ತಾತ್ರೇಯ ಮಾಳಿ, ಅಜಯ್ ಕುಮಾರ್ ಕರ್ಜೆ, ಮಹ್ಮದ ಮುಜೀಲ್, ರಮೇಶ ಮುರಗೋಡ, ಗೋವಿಂದಪ್ಪ ಹೂಗಾರ ಎಂಬುವವರನ್ನು ಬಂಧಿಸಲಾಗಿದೆ. ವೆಂಕಟರೆಡ್ಡಿ ಹಾಗೂ ಆರೀಫ್ ಎಂಬಾತರು ಪರಾರಿಯಾಗಿದ್ದಾರೆ.
ಪಂಜಾಬ್ ಮೂಲದ ಕಂಪನಿಯೊಂದಕ್ಕೆ ಸೇರಿದ ಚೆಕ್ ಅನ್ನು ಮಾಲೀಕ ಕಳೆದುಕೊಂಡಿರುತ್ತಾನೆ. ಸಿಕ್ಕ ಚೆಕ್ ಮೇಲೆ ಹಣ ಡ್ರಾ ಮಾಡಲು ಮುಂದಾದ ಗ್ಯಾಂಗ್ ಪೊಲೀಸರಿಗೆ ಸೆರೆಯಾಗಿದೆ. ಕರ್ನಾಟಕದ 5, ಮಹಾರಾಷ್ಟ್ರದ 3, ಹಿಮಾಚಲ ಪ್ರದೇಶದ ಓರ್ವನ ಬಂಧನ ಮಾಡಲಾಗಿದೆ. ಈ ಕುರಿತಂತೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್ಸ್ಟೇಬಲ್: ವಿಡಿಯೋ