ETV Bharat / state

ಬೆಂಗಳೂರಲ್ಲಿ ಆಸ್ತಿಗಾಗಿ ಹೆತ್ತ ತಾಯಿ ಹತ್ಯೆಗೆ ಯತ್ನ.. ಮಗನನ್ನು ಬಂಧಿಸಿದ ಪೊಲೀಸರು - ಕೊಲೆ

ಆಸ್ತಿಗಾಗಿ ಮಗನೋರ್ವ ಹೆತ್ತ ತಾಯಿಯನ್ನೇ ಕೊಲೆ ಮಾಡಲು ಮುಂದಾದ ಘಟನೆ, ಬೆಂಗಳೂರಿನ ಆರ್​ಟಿ ನಗರದ 2ನೇ ಬ್ಲಾಕ್​ನಲ್ಲಿ ನಡೆದಿದೆ. ಜಾನ್ ಡಿ ಕ್ರೂಸ್ ತಾಯಿ ಕೊಲೆಗೆ ಯತ್ನಿಸಿರುವ ಆರೋಪಿ.

Attempt to kill mother for property
ಆಸ್ತಿಗಾಗಿ ಹೆತ್ತ ತಾಯಿ ಹತ್ಯೆಗೆ ಯತ್ನ
author img

By

Published : Oct 5, 2022, 12:59 PM IST

ಬೆಂಗಳೂರು: ಈ ಹೆತ್ತ ತಾಯಿಗೆ ಮಗನ ಭವಿಷ್ಯವೇ ಮುಖ್ಯವಾದ್ರೆ, ಮಗನಿಗೆ ತಾಯಿ ಸಾವು ಬೇಕಾಗಿದೆ. ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಮಗನ ಹೆಸರಿಗೆ ಮಾಡಿ ಕೊಟ್ಟರೂ, ದಾಹ ತೀರದ ಮಗ ವಯಸ್ಸಾದ ತಾಯಿಯ ಉಸಿರು ನಿಲ್ಲಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಆರ್​ಟಿ ನಗರದ 2ನೇ ಬ್ಲಾಕ್​ನಲ್ಲಿ ನಡೆದಿದೆ.

ಕ್ಯಾಥರಿನ್ ಡಿ ಕ್ರೂಸ್ (88) ನತದೃಷ್ಟ ತಾಯಿ. ಮಗ ಜಾನ್ ಡಿ ಕ್ರೂಸ್ (65)ರನ್ನು ಆರ್.ಟಿ. ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕ್ಯಾಥರಿನ್​ರ 4 ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿದ್ದರೇ, ಮಗಳು ಆಶ್ರಮದಲ್ಲಿದ್ದಾಳೆ. ಮೊದಲನೆಯವರಾದ ಜಾನ್ ಡಿ ಕ್ರೂಸ್ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದರೂ ಸಹ ತಾಯಿಯೊಂದಿಗೆ ನಿತ್ಯ ಗಲಾಟೆ ಮಾಡುತ್ತಿದ್ದರು ಎನ್ನಲಾಗ್ತಿದೆ.

ಆರೋಗ್ಯದ ಸಮಸ್ಯೆಯಿದ್ದ ಕ್ಯಾಥರೀನ್​ ಅವರಿಗೆ ನಿತ್ಯ ಆಕ್ಸಿಜನ್ ಪೂರೈಕೆ ಅಗತ್ಯವಿದೆ. ಅಮೆರಿಕದಲ್ಲಿರುವ ಮಗ ಕೇರ್ ಟೇಕರ್​ರನ್ನು ನೇಮಿಸಿ, ನೋಡಿಕೊಳ್ಳುವಂತೆ ಹೇಳಿದ್ದರು. ಇತ್ತ ಆಸ್ತಿ ಬರೆದು ಕೊಟ್ಟಿದ್ದರೂ ಬದುಕಿದ್ದ ತಾಯಿ ಮೇಲೆ ಕೋಪಗೊಂಡಿದ್ದ ಜಾನ್, ಸೆಪ್ಟೆಂಬರ್ 29ರಂದು ಸಂಜೆ ಮನೆಗೆ ನುಗ್ಗಿ ಕೇರ್ ಟೇಕರ್​ರನ್ನು ಹೊರಗೆ ತಳ್ಳಿ ತಾಯಿಯ ಆಕ್ಸಿಜನ್ ಪೈಪ್ ಕಿತ್ತು ಕೊಲೆ ಮಾಡುವ ಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಪಬ್​​ಜಿ ಚಟಕ್ಕೆ ಹೆತ್ತಮ್ಮನ ಕೊಲೆ: ಶವ ವಿಲೇವಾರಿಗೆ ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಮಗ!

ಕೂಡಲೇ ಎಚ್ಚೆತ್ತ ಕೇರ್ ಟೇಕರ್ ಪೊಲೀಸರಿಗೆ ಕರೆ ಮಾಡಿದ್ದಿರಂದ ಸ್ಥಳಕ್ಕೆ ಬಂದ ಆರ್​​ ಟಿ ನಗರ ಪೊಲೀಸರು ವೃದ್ಧೆ ಕ್ಯಾಥರೀನ್​​ರನ್ನು ರಕ್ಷಿಸಿದ್ದಾರೆ. ಕೇರ್ ಟೇಕರ್ ದೂರಿನ ಮೇರೆಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿಯನ್ನೇ ಕೊಲೆ ಮಾಡಲು ಮುಂದಾಗಿದ್ದ ಮಗನನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.