ETV Bharat / state

ಬೆಳಗಾವಿಯಲ್ಲಿ ಯೋಧನ ಬಂಧನ ಪ್ರಕರಣ: ಪೊಲೀಸರ ವಿರುದ್ಧ ಹೈಕೋರ್ಟ್‌ಗೆ ದೂರು

ಬೆಳಗಾವಿ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ಕಮಾಂಡೋ ಸಚಿನ್ ಸುನಿಲ್ ಸಾವಂತ್ ಅವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಲಾಗಿದೆ.

Complaint to High Court
ಬೆಳಗಾವಿಯಲ್ಲಿ ಯೋಧನ ಮೇಲೆ ಹಲ್ಲೆ: ಪೊಲೀಸರ ವಿರುದ್ಧ ಹೈಕೋರ್ಟ್‌ಗೆ ದೂರು
author img

By

Published : Apr 29, 2020, 8:31 PM IST

ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ಕಮಾಂಡೋ ಸಚಿನ್ ಸುನಿಲ್ ಸಾವಂತ್ ಅವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಕೋರಿ ವಕೀಲ ಜಿ.ಆರ್.ಮೋಹನ್ ಹೈಕೋರ್ಟ್​ಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಹೈಕೋರ್ಟ್​ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿ ಮನವಿ ಮಾಡಿರುವ ವಕೀಲರು, ಯೋಧ ಸಚಿನ್ ವಿರುದ್ಧ ಐಪಿಸಿ‌ ಸೆಕ್ಷನ್ 323 ಮತ್ತು 345 ಅಡಿಯಲ್ಲಿ ಎಫ್​ಐಆರ್ ದಾಖಲಿಸಿರುವುದನ್ನು ಪ್ರಶ್ನೆ ಮಾಡುತ್ತಿಲ್ಲ.‌ ಆದರೆ ಯೋಧನ ಕೈ-ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ ಠಾಣೆಯಲ್ಲಿ ನೆಲದ ಮೇಲೆ ಕೂರಿಸಿದ ಪೊಲೀಸರ ನಡೆ ಅತ್ಯಂತ ಆಕ್ಷೇಪಾರ್ಹ. ಅಲ್ಲದೆ, ಯಾವುದೇ ಆರೋಪಿಯ ವ್ಯಕ್ತಿಯ ಕೈಗೆ ಕೋಳ ತೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕೆಲವೊಂದು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳನ್ನು ಸದಲಗ ಠಾಣೆ ಪೊಲೀಸರು ಉಲ್ಲಂಘಿಸಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಕೊಂಡು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.

ದೂರಿನೊಂದಿಗೆ ಯೋಧ ಸಚಿನ್ ಅವರನ್ನು ಪೊಲೀಸರು ಬಂಧಿಸಿಟ್ಟಿದ್ದ ಕುರಿತು ಮಾಧ್ಯಮಗಳು ಪ್ರಸಾರ ಮಾಡಿದ ಫೋಟೋಗಳನ್ನು ಲಗತ್ತಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.