ಬೆಂಗಳೂರು: ಹೊಸ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ್ದು, ಕೇಳಲು ಹೋದ ಯುವತಿ ಗೆಳೆಯನ ಮೇಲೂ ಹಲ್ಲೆ ಮಾಡಲಾಗಿದೆ. ಕೋರಮಂಗಲ 5ನೇ ಬ್ಲಾಕ್ನ ಮ್ಯಾಡ್ ಸೈನಟಿಸ್ಟ್ ಪಬ್ ಬಳಿ ಈ ಘಟನೆ ನಡೆದಿದ್ದು, ಯುವಕನಿಗೆ ಮುಖದ ಮೇಲೆ ಗಂಭೀರ ಗಾಯಗಳಾಗಿವೆ.
ಹೊಸ ವರ್ಷಾಚರಣೆಗೆ ಹೋದ ಸಂದರ್ಭದಲ್ಲಿ ನೆರೆದಿದ್ದ ಕೆಲ ಪುಂಡ ಯುವಕರು, ಯುವತಿ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ. ಈ ವೇಳೆ ಯುವತಿಯ ಜೊತೆಯಿದ್ದ ಗೆಳೆಯ ಅದನ್ನು ಕೇಳಲು ಮುಂದಾಗಿದ್ದು, ಆತನ ಮೇಲೆ ನಾಲ್ಕು ಜನ ಅಪರಿಚಿತರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 323, 341 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.