ETV Bharat / state

ಮದುವೆ ಮಂಟಪದಲ್ಲಿ ಮಹಿಳೆಯರಿಗೆ ಕಿರುಕುಳ, ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ! - etv bharat

ಮಹಿಳೆಯರನ್ನು ರೇಗಿಸುತ್ತಿದ್ದ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಘಟನೆ ಇಲ್ಲಿನ ಆರ್ ಆರ್ ನಗರದಲ್ಲಿ ನಡೆದಿದ್ದು ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jun 5, 2019, 7:00 PM IST

Updated : Jun 5, 2019, 7:07 PM IST

ಬೆಂಗಳೂರು: ಮದುವೆ ಮಂಟಪದಲ್ಲಿ ಮಹಿಳೆಯರನ್ನು ರೇಗಿಸುತ್ತಿದ್ದ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಇಲ್ಲಿನ ಆರ್.ಆರ್ ನಗರದಲ್ಲಿ ನಡೆದಿದೆ. ಪವನ್​ ಸುಬ್ಬಯ್ಯ ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಕಳೆದ ರಾತ್ರಿ ಪವನ್ ಸುಬ್ಬಯ್ಯ ತನ್ನ ಗೆಳೆಯನ ಮದುವೆಗೆಂದು ಇಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಈ ವೇಳೆ ಐದು ಜನರಿದ್ದ ಗ್ಯಾಂಗ್‌ ಧೂಮಪಾನ ಮಾಡುತ್ತಾ ಮದುವೆ ಮನೆಗೆ ಬಂದ ಮಹಿಳೆಯರನ್ನು ರೇಗಿಸುತ್ತಿತ್ತು. ಇದನ್ನು ಗಮನಿಸಿದ ಪವನ್ ಹಾಗೂ ಈತನ ಸ್ನೇಹಿತರು ಬುದ್ಧಿ ಹೇಳಲು ಹೋಗಿದ್ದರು.

ಆದರೆ, ಇವರ ಮಾತು ಕೇಳದ ದುಷ್ಕರ್ಮಿಗಳು​ ಜಗಳ ತೆಗೆದಿದ್ದಲ್ಲದೇ ಪವನ್ ಸುಬ್ಬಯ್ಯಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ನೋವಿನಿಂದ ಬಳಲುತ್ತಿದ್ದ ಪವನ್‌ನನ್ನು ಸ್ನೇಹಿತರು ತಕ್ಷಣ ಸ್ಥಳೀಯ ಕೆಂಗೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

Intro:ಮದುವೆ ಮನೆಯ ಮಹಿಳೆಯರನ್ನ ರೇಗಿಸ್ತಿದ್ದ ದುಷ್ಕರ್ಮಿಗಳು
ಪ್ರಶ್ನೇ ಮಾಡಿದ ವ್ಯಕ್ತಿಗೆ ಚಾಕು ಇರಿತ.

ಭವ್ಯ

ಪೋಟೊ ಇಲ್ಲ ಫೈಲ್ ಬಳಸಿ

ಮದುವೆ ಮಂಟಪದಲ್ಲಿ ಮಹಿಳೆಯರನ್ನ ರೇಗಿಸ್ತಿದ್ದ ವ್ಯಕ್ತಿಗಳನ್ನ ಪ್ರಶ್ನಿಸಿದಕ್ಕೆ ದುಷ್ಕರ್ಮಿಗಳು ಚಾಕು ಇರಿತ ಮಾಡಿರುವ ಘಟನೆ ಆರ್ ಆರ್ ನಗರ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಬಳಿ ನಡೆದಿದೆ. ಪವನ್ ಸುಬ್ಬಯ್ಯ ಚಾಕು ಇರಿತಕ್ಕೊಳಗಾದ ವ್ಯಕ್ತಿ..

ನಿನ್ನೆ ರಾತ್ರಿ ಪವನ್ ಸುಬ್ಬಯ್ಯ ತನ್ನ ಫ್ರೆಂಡ್ಸ್ ಮದುವೆಗೆಂದು ಅಕ್ಕಮಹಾದೇವಿ ಕಲ್ಯಾಣ ಮಂಟಪ ಬಳಿ ಬಂದಿದ್ದರು. ನಂತ್ರ ಮದುವೆ ಮಂಟಪದಿಂದ ಒಂದಿಷ್ಟು ಸ್ನೇಹಿತರೊಡನೆ ಪವನ್ ಸುಬ್ಬಯ್ಯ ಮಂಟಪದಿಂದ ಆಚೆ ಬಂದಿದ್ದರು..

ಈ ವೇಳೆ ಐದು ಜನ ಗ್ಯಾಂಗ್ ಧೂಮಪಾನ ಮಾಡಿಕೊಂಡು ಮದುವೆ ಮನೆಗೆ ಬಂದ ಮಹಿಳೆಯರಿಗೆ ರೇಗಿಸುತ್ತಿದ್ದರು..
ಇದನ್ನ ಗಮನಿಸಿದ್ದ ಪವನ್ ಸುಬ್ಬಯ್ಯ ಹಾಗೂ ಪವನ್ ಸ್ನೇಹಿತರು ಬುದ್ಧಿ ಹೇಳಲು ಹೋಗಿದ್ದಾರೆ.‌ಆದರೆ ಕೇಳದ ಗ್ಯಾಂಗ್ ಜಗಳಕ್ಕಿಳಿದು
ಪವನ್ ಸುಬ್ಬಯ್ಯ ಗೆ ಚಾಕು ಇರಿದದು ಪರಾರಿಯಾಗಿದ್ದಾರೆ... ತಕ್ಷಣ ಪವನ್ ಸುಬ್ಬಯ್ಯ ರನ್ನ ಸ್ನೇಹಿತರು ಸ್ಥಳೀಯ ಕೆಂಗೇರಿ ಆಸ್ಪತ್ರೆಗೆ ದಾಖಲಿಸಿ ಪ್ರಕರಣ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇನ್ನು ಪೊಲೀಸರು ಆರೋಪಿ ಗಳಿಗೆ ತನಿಖೆ ಮುಂದುವರೆಸಿದ್ದಾರೆBody:KN_BNG _05-5-ASSULT-307_BHAVYA_7204498Conclusion:KN_BNG _05-5-ASSULT-307_BHAVYA_7204498
Last Updated : Jun 5, 2019, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.