ETV Bharat / state

ಸಿನಿಮಾದಲ್ಲಿ ಮಾತ್ರ ನೀನು ಹೀರೋ ಎಂದು ನಟನ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು - ನಟ ಪ್ರವೀಣ್ ತೇಜ್ ಮೇಲೆ ಹಲ್ಲೆ ಮಾಡಿರುವ ಆರೋಪ

ನೀನು ಸಿನಿಮಾಗಳಲ್ಲಿ‌ ಮಾತ್ರ ಹೀರೋ, ನಿಜ ಜೀವನದಲ್ಲಿ ಅಲ್ಲ ಎಂದು ದೈಹಿಕವಾಗಿ ನನ್ನ ಮೇಲೆ ದಿಲೀಪ್ ಎಂಬಾತನ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ನಟ ಪ್ರವೀಣ್ ತೇಜ್ ಕೋಣನಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

actor praveen tej
ನಟ ಪ್ರವೀಣ್ ತೇಜ್
author img

By

Published : Feb 20, 2023, 1:29 PM IST

Updated : Feb 20, 2023, 3:39 PM IST

ನಟ ಪ್ರವೀಣ್ ತೇಜ್ ಕಾರಿನ ಗ್ಲಾಸ್​ ಒಡೆದ ಆರೋಪ

ಬೆಂಗಳೂರು : ಪಾರ್ಟಿಯಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ನಟ ಪ್ರವೀಣ್ ತೇಜ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಫೆಬ್ರವರಿ 12 ರ ರಾತ್ರಿ ಕೋಣನಕುಂಟೆಯ ಖಾಸಗಿ ಅಪಾರ್ಟ್ಮೆಂಟ್​ನಲ್ಲಿ ಘಟನೆ ನಡೆದಿದ್ದು, ದಿಲೀಪ್ ಎಂಬಾತನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಚಿತರ ಹುಟ್ಟುಹಬ್ಬದ ಪಾರ್ಟಿಗೆ ಸ್ನೇಹಿತರ ಜೊತೆ ತೆರಳಿದ್ದ ಪ್ರವೀಣ್ ತೇಜ್​ಗೆ ಪಾರ್ಟಿಯಲ್ಲಿ ತನ್ನ ಸ್ನೇಹಿತನ ಮೂಲಕ ದಿಲೀಪ್ ಎಂಬಾತನ ಪರಿಚಯವಾಗಿದೆ. ಈ ವೇಳೆ ಪಾರ್ಟಿಯಲ್ಲಿ ತನ್ನ ಶ್ರೀಮಂತಿಕೆ, ಜನಬಲದ ಬಗ್ಗೆ ಮಾತು ಆರಂಭಿಸಿದ ದಿಲೀಪ್, ನಮ್ಮ ವೃತ್ತಿ ಹಾಗೂ ವ್ಯಕ್ತಿತ್ವದ ಬಗ್ಗೆ ಕೀಳಾಗಿ ಮಾತನ್ನಾಡಿದ್ದಾನೆ ಎಂದು ಪ್ರವೀಣ್ ತೇಜ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು

ಆರೋಪಿ ದಿಲೀಪ್​ನ ಮಾತುಗಳು ನನಗೆ ಸರಿ ಅನಿಸದ ಕಾರಣ ಅವರಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಿದಾಗ ನನ್ನನ್ನು ಆರ್ಮ್ ರೆಸ್ಲಿಂಗ್ ಆಟಕ್ಕೆ ಆಹ್ವಾನಿಸಿದ. ಇದನ್ನು ನಿರಾಕರಿಸಿದಾಗ 'ನೀನು ಸಿನಿಮಾಗಳಲ್ಲಿ‌ ಮಾತ್ರ ಹೀರೋ, ನಿಜ ಜೀವನದಲ್ಲಿ ಅಲ್ಲ' ಎಂದು ದೈಹಿಕವಾಗಿ ಹಲ್ಲೆಗೆ ಮುಂದಾಗಿದ್ದು, ಸ್ಥಳದಲ್ಲಿದ್ದ ಸ್ನೇಹಿತರು ಘಟನೆಯನ್ನು ತಡೆದಿದ್ದಾರೆ. ಈ ವೇಳೆ ನನ್ನ ಕುತ್ತಿಗೆಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

actor praveen tej
ನಟ ಪ್ರವೀಣ್ ತೇಜ್

ಇದನ್ನೂ ಓದಿ: ರಾಖಿ ಸಾವಂತ್​ ಪತಿ ಆದಿಲ್ ಖಾನ್ ವಿರುದ್ಧ ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣ ದಾಖಲು

ಕಾರಿನ ಗಾಜು ಪುಡಿ ಪುಡಿ: ಅಂದಿನ ದಿನ ಅಲ್ಲಿಯೇ ವಾಸ್ತವ್ಯವಿದ್ದು ಬೆಳಗ್ಗೆ ಹೊರಡಲು ಸಿದ್ಧವಾದಾಗ ನನ್ನ ಕಾರಿನ ಗಾಜುಗಳು ಜಖಂಗೊಂಡಿರುವುದು ಕಂಡುಬಂದಿತು. ಈ ಕುರಿತು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿ ದಿಲೀಪ್ ಕಾರಿನ ಗಾಜುಗಳನ್ನ ಒಡೆದಿರುವುದು ತಿಳಿದು ಬಂದಿದೆ ಎಂದು ಪ್ರವೀಣ್ ದೂರು ನೀಡಿದ್ದಾರೆ‌. ನಟನ ದೂರಿನನ್ವಯ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಿರುತೆರೆ ನಟಿ ಚಾಹತ್ ಖನ್ನಾಗೆ ನೋಟಿಸ್ ಕಳುಹಿಸಿದ ಸುಖೇಶ್ ಚಂದ್ರಶೇಖರ್..!

ನಟ ದರ್ಶನ್​ಗೆ ಅವಮಾನ ಮಾಡಿದ ಆರೋಪ: ಇನ್ನು ಕಳೆದ ವರ್ಷದ ಡಿಸೆಂಬರ್​ 18ರಂದು ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಬೊಂಬೆ ಹಾಡಿನ ಬಿಡುಗಡೆ ಸಲುವಾಗಿ ನಟ ದರ್ಶನ್‌ ಮತ್ತವರ ತಂಡ ಭೇಟಿ ನೀಡಿತ್ತು. ಈ ವೇಳೆ ಜನರ ಗುಂಪಿನಿಂದ ಓರ್ವ ವ್ಯಕ್ತಿ ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದ. ಈ ಹಲ್ಲೆ ಖಂಡಿಸಿ 19 ರಂದು ಹೊಸಪೇಟೆ ಪೊಲೀಸ್‌ ಠಾಣೆಯಲ್ಲಿ ಕಾರ್ಯಕ್ರಮ ಆಯೋಜಕರು ಕೇಸ್‌ ದಾಖಲಿಸಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

Last Updated : Feb 20, 2023, 3:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.