ಬೆಂಗಳೂರು : ಉದ್ಯಮದಲ್ಲಿ ಸಾಧನೆ ಮಾಡಿದ 30 ವರ್ಷದೊಳಗಿನ ಯುವ ಪ್ರತಿಭೆಗಳನ್ನು ಗುರುತಿಸುವ ಪ್ರತಿಷ್ಠಿತ "ಏಷಿಯಾ ಫೋಬ್ಸ್" (ಅಂಡರ್ 30) ತನ್ನ ಪಟ್ಟಿ ಬಿಡುಗಡೆ ಮಾಡಿದ್ದು, ನಗರದ ಯುವ ಉದ್ಯಮಿ ವಿಭಾ ಹರೀಶ್ ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.
ವಿಶ್ವಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿತ್ತು ಹಾಗೂ ಇವೆಲ್ಲದರ ನಡುವೆಯೂ ವಿಭಾ ಹರೀಶ್ ಸಾಧನೆಯನ್ನು ಗುರುತಿಸಿರುವ ಫೋಬ್ಸ್, ಸಂಸ್ಥೆಯ ವಿಶೇಷತೆಯಿಂದ ಆಯ್ಕೆ ಮಾಡಿದೆ.
25 ವರ್ಷ ವಯಸ್ಸಿನ ವಿಭಾ ಸಣ್ಣ ವಯಸ್ಸಿನಲ್ಲಿಯೇ 'ಕಾಸ್ಮಿಕ್ಸ್' ಎಂಬ ಸ್ಟಾರ್ಟ್‌ಅಪ್ ಪ್ರಾರಂಭಿಸಿದ್ದರು. ಈ ಸಂಸ್ಥೆ ಆರೋಗ್ಯ ಸಂಬಂಧಿತ ನ್ಯೂಟ್ರೀಷಿಯನ್ಸ್, ಸಪ್ಲಿಮೆಂಟ್ಸ್‌ಗಳನ್ನು ತಯಾರು ಮಾಡಿ, ಜನರ ಆರೋಗ್ಯ ಕಾಪಾಡುವಲ್ಲಿ ಕೆಲಸ ಮಾಡುತ್ತಿದೆ.
ವಿಶ್ವದಲ್ಲಿ ಕೋವಿಡ್‌ನ ಮೊದಲ ಅಲೆ ಪ್ರಾರಂಭವಾಗುವುದಕ್ಕೂ ಮೊದಲೇ ಕಾಸ್ಮಿಕ್ಸ್ ಸಂಸ್ಥೆ ಹುಟ್ಟಿಕೊಂಡಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಬ್ರ್ಯಾಂಡ್ ಆಗಿ ಹೊರ ಹೊಮ್ಮಿರುವ ಸಂಸ್ಥೆ. ದೇಶದೆಲ್ಲೆಡೆ ಹೆಸರು ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನ್ಯೂಟ್ರೀಷಿಯನ್ ಆಹಾರ ಸೇವನೆ ಅತ್ಯಂತ ಅವಶ್ಯಕ.
ಹೀಗಾಗಿ, ಸಂಸ್ಥೆಯ ಗುಣಮಟ್ಟದ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಹೀಗಾಗಿ, ಆನ್‌ಲೈನ್ ಮೂಲಕವೂ ಪದಾರ್ಥಗಳು ಲಭ್ಯವಿದೆ ಎಂದು ಸಂಸ್ಥಾಪಕಿ ವಿಭಾ ಹರೀಶ್ ತಿಳಿಸಿದ್ದಾರೆ. ಪ್ರಸ್ತುತ ಕೋವಿಡ್ 2ನೇ ಅಲೆ ಅಪ್ಪಳಿಸಿದೆ.
ಹೀಗಾಗಿ, ಈ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದ ಅಂಗನವಾಡಿ ಮಕ್ಕಳಿಗೆ ಸ್ಪಿರುಲಿನ ಮಾತ್ರೆಗಳನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಕಡಿಮೆಯಾಗಿ, ದೇಹದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ವಿಭಾ ಹೇಳುತ್ತಾರೆ.